ಕಾವ್ಯಯಾನ

ಕಾವ್ಯಯಾನ

ವಸಂತನಾಗಮನ ವಿಜಯ ನಿರ್ಮಲ ವಸಂತನಾಗಮನ ವನರಾಣಿ ನವಕನ್ಯೆಯಾಗಿಹಳು ಹರೆಯದಿ ಮೈದುಂಬಿ ನಗುತಿಹಳು ಭೂದೇವಿ ಸಂಭ್ರಮದಿ ನಲಿದಿಹಳು ವನಬನಗಳೆಲ್ಲ ಹೊಸ ಚಿಗುರು ತುಂಬಿ ಗಿಡಮರಗಳೆಲ್ಲ ಬಣ್ಣ ಬಣ್ಣದ ಹೂ ಗುಚ್ಛದಲಿ ತುಂಬಿ ತುಳುಕುತಿವೆ ಮಾವು ಬೇವು ಜೊತೆಯಾಗಿ ತೋರಣ ಕಟ್ಟಿ ವನವನೆಲ್ಲ ಸಿಂಗರಿಸುತಿದೆ ಮಾಮರದಂದಕೆ ಮನಸೋತ ಕೋಗಿಲೆ ಮಧುರವಾಗಿ ಕುಹೂ ಕುಹೂ ಎನುತಿದೆ ಕಾನನವೆಲ್ಲ ಹಚ್ಚ ಹಸುರಾಗಿ ಸೌಂದರ್ಯ ತುಂಬಿಕೊಂಡು ಹೊಸ ಗಾನಕೆ ತಲೆದೂಗಿವೆ ಹಕ್ಕಿ ಪಕ್ಷಿಗಳು ಇಂಪಾದ ದನಿಯಲಿ ಕೂಗಾಡುತ ತಮ್ಮ ಗೂಡುಗಳಲಿ ಸಂತಸದಿ ಮೆರೆಯುತ ಹಬ್ಬಕೆ […]

ಪುಸ್ತಕ ಪರಿಚಯ

ಸಾರಾ ಶಗುಫ್ತಾ (ಪಾಕಿಸ್ತಾನದ ಕವಯಿತ್ರಿ ಸಾರಾ ಶಗುಫ್ತಾ ಅವರ ಜೀವನ ಮತ್ತು ಕಾವ್ಯ  ಕುರಿತು ಅಮೃತಾ ಪ್ರೀತಂ ಬರೆದಿದ್ದಾರೆ . ಕನ್ನಡಕ್ಕೆ ಹಸನ್ ನಯೀಂ ಸುರಕೋಡ ಅನುವಾದಿಸಿದ್ದಾರೆ. ಲಡಾಯಿ ಪ್ರಕಾಶನ, ಗದಗ ಅದನ್ನು ಪ್ರಕಟಿಸಿದೆ. ಅದು ೨೮. ೫. ೨೦೧೬ರಂದು ಧಾರವಾಡದಲ್ಲಿ ಬಿಡುಗಡೆಯಾಗಿದೆ.) ಸಾರಾ ಶಗುಫ್ತಾರವರ ಜೀವನ ಮತ್ತು ಕಾವ್ಯ ಕುರಿತ ವೃತಾಂತ ‘ಕಫನ್ ಕೂಡ ಕಾಣದೆ ಮಣ್ಣುಗೂಡಿತು ನನ್ನ ಕೂಸು’..! ಹಾಲ ಮೇಲೆ ಆಣೆ… ಆಸ್ಟ್ರೇಲಿಯಾದಲ್ಲಿ ಒಂದು ಕತೆ ಜನಜನಿತವಾಗಿದೆ. ಆ ದೇಶದಲ್ಲಿ ಒಮ್ಮೆ ಜನಿಸಿದ […]

ಕಾವ್ಯಯಾನ

ಕಾಮದಹನ ಗೌರಿ. ಚಂದ್ರಕೇಸರಿ ಕಾಮ ದಹನ ಒಡಲು ಬರಿದು ಮಾಡಿಕೊಂಡ ಕಣ್ಣೀರ ಕಡಲು ಬತ್ತಿಸಿಕೊಂಡ ನಿಟ್ಟುಸಿರಲ್ಲೇ ನೋವ ನುಂಗಿಕೊಂಡವಳ ಜೋಳಿಗೆಗೆ ನ್ಯಾಯ ಬಂದು ಬಿದ್ದಿದೆ ಅಂತೂ ಕಾಮ ದಹನವಾಯಿತು. ಏಳು ವರುಷಗಳ ಹೋರಾಟ, ಗೋಳಾಟ ಸುತ್ತಿ, ಸವೆಸಿದ ಮೆಟ್ಟುಗಳೆಷ್ಟೋ ಹತ್ತಿ ಇಳಿದ ಮೆಟ್ಟಿಲುಗಳೆಷ್ಟೋ ಕರುಣೆ ಬದುಕಿದೆ ಇನ್ನೂ ಕಪ್ಪು ಪಟ್ಟಿಯ ಹಿಂದಿರುವ ಕಣ್ಣುಗಳಲಿ                   ಅಂತೂ ಕಾಮ ದಹನವಾಯಿತು. ಬಾಯ ಪಸೆ ಇಂಗುವವರೆಗೂ ಎದೆಯ ಗೂಡ ಗಾಳಿ ಇರುವವರೆಗೂ ನ್ಯಾಯಕ್ಕಾಗಿ ಅಂಗಲಾಚಬೇಕು ದಶಕಗಳವರೆಗೆ ಕಾಯಬೇಕು ಅಂತೂ ಕಾಮ ದಹನವಾಯಿತು […]

ದ.ರಾ.ಬೇಂದ್ರೆ ಒಂದು ಓದು

ಹೃದಯ ತ0ತಿ ಮೀಟಿದ ವರಕವಿ ವೀಣಾ ರಮೇಶ್ ಕನ್ನಡದ ಕಾವ್ಯಗಳ ಮೇಲೆ ಧಾರವಾಡದ ಪೇಡೆಯ ಸಿಹಿ ಉಣಬಡಿಸಿದ ಕವಿಗ್ಗಜ. ಮೇಲೆ ಕಾವ್ಯ ರಸಗಳ ಪ್ರೀತಿ ಪ್ರೇಮದ ಭಾಷೆಗೆ ಹೊಸತು ವ್ಯಾಖ್ಯಾನ ಕೊಟ್ಟ ಮುದ್ದು ಕವಿ. ರಸಕಾವ್ಯಗಳ ಮೇಲೆ ಪಾತಾರ ಗಿತ್ತಿಯ ಬಣ್ಣ ತು0ಬಿ, ಚೆಲುವು ಬೆರಸಿ ಅ0ದ ಚೆ0ದದ ಪುಕ್ಖಗಳನಿಟ್ಟು ಮನಸುಗಳ ಮರೆಯಲಿ ಕುಣಿದು ಹಾರುವ ಪದಗಳ ಕಟ್ಟಿದ ಬೇ0ದ್ರೆ ಸಾಹಿತ್ಯ. ಮೀಟಿದ ನಾಲ್ಕು ತ0ತಿಗಳಲ್ಲಿ ಹೊಮ್ಮಿದ ನಾದಲೀಲೆ ಕನ್ನಡದ ಶಿಖಿರದ ಮೇಲೆ ಪ್ರತಿಧ್ವನಿಸಿದ ನಮ್ಮ ಅಜ್ಜ […]

ಅನುವಾದ ಸಂಗಾತಿ

ಪಾಪ ಮೂಲ:ಫಾರೂಫ್ ಫರಾಕ್ಜಾದ್ (ಇರಾನಿ ಕವಿಯಿತ್ರಿ) ಕನ್ನಡಕ್ಕೆ: ಕಮಲಾಕರಕಡವೆ ಸುಖಭರಿತ ಪಾಪವೊಂದೆಸಗಿದೆ ನಾನುಉರಿವ ಬೆಚ್ಚಗಿನ ಆಲಿಂಗನದಲ್ಲಿಪಾಪವೆಸಗಿದೆ ನಾನು ಬಿಸಿ ಕಬ್ಬಿಣದಂತಬಾಹುಗಳಿಂದ ಸುತ್ತುವರಿದಿದ್ದಾಗ. ಆ ಕತ್ತಲ, ಶಾಂತ ಏಕಾಂತದಲ್ಲಿನಾನವನ ಗುಟ್ಟಬಚ್ಚಿಟ್ಟ ಕಣ್ಣುಗಳೊಳಗೆ ಇಣುಕಿದೆ.ಅವನ ಅಗತ್ಯ-ಭರಿತ ಕಂಗಳ ಬೇಡಿಕೆಗೆ ಪ್ರತಿಯಾಗಿನನ್ನ ಚಂಚಲ ಹೃದಯ ಕಂಪಿಸಿತು. ಆ ಕತ್ತಲ, ಶಾಂತ ಏಕಾಂತದಲ್ಲಿಕುಳಿತಿದ್ದೆ ನಾನು ಅವನ ಪಕ್ಕ ಕೆದರಿದ ಕೂದಲಲ್ಲಿಅವನ ತುಟಿಗಳು ಸುರಿದವು ಕಾಮನೆಗಳ ನನ್ನ ತುಟಿಗಳ ಮೇಲೆನನ್ನ ಹೃದಯದ ಹುಚ್ಚು ಸಂಕಟದಿಂದ ಬಿಡುಗಡೆ ಪಡೆದೆ ನಾನು. ಅವನ ಕಿವಿಯೊಳಗುಸುರಿದೆ ಪ್ರೇಮ ಕತೆಯಬಯಸುವೆ […]

ಕಾವ್ಯಯಾನ

ಕವಿತೆಯದಿನಕ್ಕೊಂದು ಕವಿತೆ ರೇಖಾ ವಿ.ಕಂಪ್ಲಿ ಕವಿತೆ ನಿನಗೊಂದು ಖಲಾಮು ಇದ್ದರೆ ಸಾಕೆ ಇಲ್ಲ ಕವಿ ಬೇಕೇ? ಬರಿ ಕವಿ ಇದ್ದರೆ ಸಾಕೆ ಇಲ್ಲ ಭಾವನೆ ಬೇಕೇ? ಭಾವನೆಯೊಂದಿದ್ದರೆ ಸಾಕೆ ಇಲ್ಲ ಭಾಷೆ ಬೇಕೇ? ಭಾಷೆ ಒಂದು ಇದ್ದರೆ ಸಾಕೆ ಬರವಣಿಗೆ ಬೇಕೇ? ಬರಿ ಬರವಣಿಗೆ ನಿನಗೆ ಸಾಕೆ ಇಲ್ಲ ಓದುಗನೊಬ್ಬ ಬೇಕೇ? ಓದುಗನೊಬ್ಬ ಇದ್ದರೆ ಸಾಕೆ? ಕವಿತೆ ಕೊನೆಯಲಿ ಹಾಡಿ ಹೇಳಿತು ಮೆಲ್ಲಗೆ ಎಲ್ಲವು ಬೇಕು ಎನಗೆ..

ಕಾವ್ಯಯಾನ

ವೈರಸ್ ಅಶ್ವಥ್ ಏನೋ ಬಲ್‌ಶಾಲಿ ಅನ್ಕೊಂಡ್‌ಬುಟ್ಟು ಬೇಕಾದ್ದೆಲ್ಲ ಮಾಡ್ಕೊಂಡ್‌ಬುಟ್ಟು ಭೂತಾಯ್‌ ಮುಂದ್‌ ಗತ್ತು ಗಮ್ಮತ್ತು ವೈರಸ್‌ ಬಂತು ಮಂಡಿಯೂರು ಅಂತು ನವರಂಗೀ ಮಾಧ್ಯಮ್‌ಗಳಾಗೆ ಪಟತೆಕ್ಕಂಡ್‌ ವಾಲಾಡುವಾಗೇ ಕಣ್ಣಿಗ್‌ ಕಾಣ್ದಿರ್ ಅಣುವೊಂದ್‌ ಬಂತು ಕೈಕಾಲ್‌ ಕಟ್ಕಂಡ್‌ ಮನೆಲ್ಕೂರ್‌ ಅಂತು ಜಗತ್ತೆಲ್ಲಾ ಚಿಂದಿ ಚೂರಾದ್ರೂನೇ ಕಣ್ಣಾಗ್‌ ಕಣ್ಣಿಟ್‌ ನೋಡೋದಾಗ್ದೇನೆ ಕಿಂಚಿತ್‌ ಅನ್ನೋ ವೈರಸ್ಸೇ ಬರ್‌ಬೇಕಾತು ನಮ್‌ ಸಂಬಂಧ್‌ಗೋಳ್‌ ಏನಂತ ತಿಳ್‌ಸ್ತು ನಮ್‌ ಕೈತೊಳ್ಕೊಂಡ್ರಷ್ಟ್‌ ಸಾಕಾಗಲ್ಲ ಮನ್ಸ್‌ ಉಜ್ಜುಜ್ಜಿ ತೊಳ್ಕೊಬೇಕೆಲ್ಲ ವದ್ದ್‌ ವೋಡ್ಸೋಕ್‌ ಮುಂಚೆ ವೈರಸ್ಸನ್ನ ಎತ್ತ್‌ ಹಿಡೀಬೇಕಾಗೈತೆ ಮನ್ಸತ್ವಾನಾ ********************

ವಿಶ್ವ ಗುಬ್ಬಚ್ಚಿಗಳ ದಿನ

ಎಲ್ಲಿ ಹೋದವು ಈ ಗುಬ್ಬಚ್ಚಿಗಳು..! ಕೆ.ಶಿವು ಲಕ್ಕಣ್ಣವರ ಎಲ್ಲಿ ಹೋದವು ಈ ಗುಬ್ಬಚ್ಚಿಗಳು..! ಮಾರ್ಚ್ ೨೦ ವಿಶ್ವ ಗುಬ್ಬಚ್ಚಿಗಳ ದಿನ. ಅದಕ್ಕಾಗಿ ಆ ನೆಪದಲ್ಲಿ ಈ ಗುಬ್ಬಚ್ಚಿಗಳ ಕುರಿತಾದ ಈ ಲೇಖನ… ಒಂದು ಕಾಲದಲ್ಲಿ ಬಹುತೇಕ ಹಳ್ಳಿಮನೆಗಳಲ್ಲಿ ಬೆಳಗ್ಗಿನ ಅಲಾರ್ಮ್ ಎಂದರೆ ಗುಬ್ಬಚ್ಚಿಗಳ ಚಿಲಿಪಿಲಿಯೇ… ಈಗಲೂ ಬೇರೆ ಊರು ಇರಲಿ, ನಮ್ಮ ಊರಿನಲ್ಲಿ ಅಲ್ಲಲ್ಲಿ ಮನೆಗಳಲ್ಲಿ ಗುಬ್ಬಚ್ಚಿಗಳು ಗೋಡು ಕಟ್ಟುತ್ತಿವೆ. ವಾಸಿಸುತ್ತಿವೆ. ಅಷ್ಟಿಷ್ಟು ಇರುವ ಈ ಗುಬ್ಬಚ್ಚಿಗಳು ಹಾಗೋ-ಹೀಗೋ ಹೇಗೋ ವಾಸಿಸುತ್ತವೆ… ಒಂದಿಷ್ಟು ದಿನಗಳ ವರೆಗೆ ಕಣ್ಮರೆಯಾಗಿದ್ದ […]

ಕಾವ್ಯಯಾನ

ಕವಿತೆಯ ದಿನಕ್ಕೊಂದು ಕವಿತೆ ನನ್ನೊಳಗೊಂದು ನಾನು ಅಂಜನಾ ಹೆಗಡೆ ನಾ ಹುಟ್ಟುವಾಗಲೇ ನನ್ನೊಂದಿಗೆ ಹುಟ್ಟಿದ ಕವಿತೆಯೊಂದು ಇದ್ದಕ್ಕಿದ್ದಂತೆ ಎದುರಿಗೆ ಬಂದು ನಿಂತಿತು ಥೇಟು ನನ್ನಂತೆಯೇ ಕಾಣುವ ಅದಕ್ಕೊಂದು ಉದ್ದನೆಯ ಬಾಲ…. ನಾ ಹೋದಲ್ಲೆಲ್ಲ ನನ್ನದೇ ವೇಗದಲ್ಲಿ ಹಿಂದೆಮುಂದೆ ಸುತ್ತುತ್ತಿತ್ತು ಬಾಲದ ಸಮೇತ ಉದ್ದಜಡೆಯ ಹೆಣ್ಣೊಂದು ಹೆಗಲೇರಿದ ಭಾರ ಅಯ್ಯೋ!! ಹೆಣ್ಣುಕವಿತೆಯೇ ಹೌದು…. ಸುಲಿದ ಬೆಳ್ಳುಳ್ಳಿಗಳನ್ನೆಲ್ಲ ಪ್ಲಾಸ್ಟಿಕ್ಕಿನ ಮೇಲಿಟ್ಟು ಜೋರಾಗಿ ಜಜ್ಜಿದೆ ಬಾಲವೂ ಅಲ್ಲಾಡಿತು ಯಾವ ಕೋಪಕ್ಕೆ ಬೆಳ್ಳುಳ್ಳಿ ಬಲಿ!! ಬಾಲ ನಕ್ಕಂತೆ ಭಾಸವಾಗಿ ಸಣ್ಣದೊಂದು ಅವಮಾನ ಈರುಳ್ಳಿಗೆ […]

ಕಾವ್ಯಯಾನ

ಕವಿತೆಯ ದಿನಕ್ಕೊಂದು ಕವಿತೆ ಸಜೀವ ಡಾ.ಗೋವಿಂದ ಹೆಗಡೆ ಕವಿತೆ ನನ್ನ ಲೋಕಕ್ಕೆ ಬಂದಾಗಿನಿಂದ ಜೊತೆಗಿದೆ ಕಿಸೆಯ ಕನ್ನಡಕ ಪೆನ್ನು ಪರ್ಸುಗಳಂತೆ ನನ್ನದಾಗಿ ಅಷ್ಟೇ ಅಲ್ಲ ಎದೆಯ ಲಬ್ ಡಬ್ ಗಳಗುಂಟ ನಾಡಿಗಳಲ್ಲಿ ಹರಿದಿದೆ ಉಸಿರ ತಿದಿಯಲ್ಲಿ ಯಾತಾಯಾತ ಆಡಿದೆ ಕಣ್ಣಾಗಿ ಕಂಡು ಕಿವಿಯಾಗಿ ಕೇಳಿ ನರಮಂಡಲದಲ್ಲಿ ಗ್ರಹಿಸಿ ಸ್ಪಂದಿಸಿ ನನ್ನ ಭಾಗವೇ ಬೇಲಿಸಾಲಿನ ಹೂಗಳಿಗೆ ಕೈ ಆಡಿಸಿ ನಕ್ಕು ಹಕ್ಕಿಗಳ ಪಕ್ಕ ಹಾರಿ ತಾರೆಗಳಿಗೆ ಕಣ್ಮಿಟುಕಿಸಿ ಅಲೆ-ದಂಡೆಗಳಗುಂಟ ಅಲೆದು ಮರುಳು ಮನೆ ಕಟ್ಟಿ ಕುಣಿದು ಮೈಪಡೆದ ಕವಿತೆ […]

Back To Top