ದ.ರಾ.ಬೇಂದ್ರೆ ಒಂದು ಓದು

ಹೃದಯ ತ0ತಿ ಮೀಟಿದ ವರಕವಿ

Image result for photos of dara bendre

ವೀಣಾ ರಮೇಶ್

ಕನ್ನಡದ ಕಾವ್ಯಗಳ ಮೇಲೆ ಧಾರವಾಡದ ಪೇಡೆಯ ಸಿಹಿ ಉಣಬಡಿಸಿದ ಕವಿಗ್ಗಜ. ಮೇಲೆ ಕಾವ್ಯ ರಸಗಳ ಪ್ರೀತಿ ಪ್ರೇಮದ ಭಾಷೆಗೆ ಹೊಸತು ವ್ಯಾಖ್ಯಾನ ಕೊಟ್ಟ ಮುದ್ದು ಕವಿ. ರಸಕಾವ್ಯಗಳ ಮೇಲೆ ಪಾತಾರ ಗಿತ್ತಿಯ ಬಣ್ಣ ತು0ಬಿ, ಚೆಲುವು ಬೆರಸಿ ಅ0ದ ಚೆ0ದದ ಪುಕ್ಖಗಳನಿಟ್ಟು ಮನಸುಗಳ ಮರೆಯಲಿ ಕುಣಿದು ಹಾರುವ ಪದಗಳ ಕಟ್ಟಿದ ಬೇ0ದ್ರೆ ಸಾಹಿತ್ಯ. ಮೀಟಿದ ನಾಲ್ಕು ತ0ತಿಗಳಲ್ಲಿ ಹೊಮ್ಮಿದ ನಾದಲೀಲೆ ಕನ್ನಡದ ಶಿಖಿರದ ಮೇಲೆ ಪ್ರತಿಧ್ವನಿಸಿದ ನಮ್ಮ ಅಜ್ಜ ಬೇ0ದ್ರೆ. ಕನ್ನಡದ ಭಾಷೆಯಲ್ಲಿ ಜವಾರಿ ಭಾಷೆ ಆಗಿರುವ ಧಾರವಾಡ ಕನ್ನಡವನ್ನು ಸೂಕ್ಷ್ಮವಾಗಿ ಸೃಜನಾತ್ಮಕವಾಗಿ ಬಳಸಿಕೊ0ಡವರು ಬೇ0ದ್ರೆ ಯವರು ತನ್ನ ಕಾವ್ಯದ ಕ್ರಾ0ತಿಕಾರಿ ಸಾಲುಗಳಿ0ದ ಜೈಲು ಸೇರಿದ ಕವಿ ದ.ರಾ.ಬೇ0ದ್ರೆ. ಸ್ವಾತ0ತ್ರ್ಯ ಸ0ಗ್ರಾಮದಲ್ಲಿ ಬ್ರಿಟಿಷರ ವಿರುದ್ಧ ಸಿಡಿದೆದ್ದ ಬೇ0ದ್ರೆ ನರಬಲಿ ಕವಿತೆಯಿ0ದ ಅದನ್ನು ತಿಳಿದು ಅರ್ಥ ಮಾಡಿಕೊ0ಡ ಬ್ರಿಟಿಷರು ಅಧ್ಯಾಪಕ ವೃತ್ತಿಯಿ0ದ ವಜಾ ಗೊಳಿಸಿದರು ಅವರ ಮಾತ್ರ ಭಾಷೆ ಮರಾಠಿ, ಆದರೆ ಅವರಿಗೆ ಒಲಿದು ಬ0ದದ್ದು ಕನ್ನಡ ಭಾಷೆ, ಕನ್ನಡಕ್ಕೆ ಜ್ಞಾನಪೀಠ ತ0ದುಕೊಟ್ಟರು. ಬೇ0ದ್ರೆಯವರ ಮೊನಚಾದ ಸಾಹಿತ್ಯದಿ0ದ ಸೆರೆವಾಸ ಅನುಭವಿಸಿದರು. ಜೈಲು ಸೇರಿದ ಬೇ0ದ್ರೆ ಆದರೆ ಅವರ ಕಾವ್ಯ ಸ್ಪೂತರ್ಿಗೆ ಧಕ್ಕೆ ಯಾಗಲಿಲ್ಲ. ಅವರ ಸಾಹಿತ್ಯ ಪ್ರೇಮಕ್ಕೆ ಕೊರತೆಯಾಗಲಿಲ್ಲ. ಬದುಕಿನ ಬಗ್ಗೆ ಅತ್ಯ0ತ ಪರಿಣಾಮಕಾರಿ ಸಾಹಿತ್ಯ ಬರೆದ ಧೀಮ0ತ ಬೇ0ದ್ರೆ. ಉತ್ಸಾಹದ ಚಿಲುಮೆ. ನೊ0ದ ಜೀವಕ್ಕೆ ಸಾ0ತ್ವಾನ ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು. ಇದು ಅವರ ಬದುಕಿನ ಕಾವ್ಯ ಪ್ರೀತಿ. ಧಾರವಾಡದ ಸಾಧನಕೇರಿಯಲ್ಲಿ ಜನನ. ವೈಧಿಕ ಕುಟು0ಬದಲ್ಲಿ ಜನಿಸಿದ ಬೇ0ದ್ರೆ ಕನ್ನಡವನ್ನು ಅಪ್ಪಿಕೊ0ಡರು. ಕನ್ನಡದ ಒಡನಾಟ, ಬದುಕಿಗೆ ಅ0ಟದ ಬಡತನ ಅವರ ಕಾವ್ಯಕ್ಕೆ ಮೂಲಸೆಲೆಯಾಗಿ ಹೋಯಿತು. ಅವರ ಬದುಕಲ್ಲಿ ನಡೆದ ಘಟನೆ. ನಿಜಕ್ಕೂ ರೋಚಕ, ಬಾಲ್ಯದಲ್ಲೇ ಕವಿತೆಗಳನ್ನು ಬರೆಯುತ್ತಿದ್ದರು ಬೇ0ದ್ರೆ. ಅವರು ರಚಿಸಿದ ಒ0ದು ಕವನ ಪುಣೆಯಲ್ಲಿ ಬಿ.ಎ. ಮಾಡುತ್ತಿದ್ದಾಗ, ಪಠ್ಯದಲ್ಲಿ ಬ0ತಿತ್ತು. ಅದನ್ನು ಸ್ವತಃ ಬೇ0ದ್ರೆಯವರೆ ಬರೆದದ್ದು ಎ0ದು ಕನ್ನಡ ಪಾಠ ಮಾಡುತ್ತಿದ್ದ ಅಧ್ಯಾಪಕರಿಗೆ ತಿಳಿದಿಲ್ಲ. ಕಾಲೇಜು ಮುಗಿಯುವ ವೇಳೆಗೆ ಸ್ವತಃ ಬೇ0ದ್ರೆಯವರೇ ಬರೆದದ್ದು ಎ0ದು ಕನ್ನಡ ಪಾಠ ಮಾಡುತ್ತಿದ್ದ ಅಧ್ಯಾಪಕರಿಗೆ ತಿಳಿದಿಲ್ಲ. ಕಾಲೇಜು ಮುಗಿಯುವ ವೇಳೆಗೆ ಸ್ವತಃ ಬೇ0ದ್ರೆಯವರೇ ತಿಳಿಸಿದರ0ತೆ, ಮೇರು ಕವಿ ಬೇ0ದ್ರೆ. ರಸವೇ ಜನನ ವಿರಸವೇ ಮರಣ ಸಮರಸವೇ ಜೀವನ ಬದುಕಿನ ನೈಜ ಪ0ಕ್ತಿಯ ಸಾಲುಗಳು ಕಾವ್ಯರೂಪದಲ್ಲಿ ಚಲ್ಲಿದರು ಬೇ0ದ್ರೆ. ಮಹಾರಾಷ್ಟ್ರ ಸೊಲ್ಲಾಪುರದಲ್ಲಿ ಅಧ್ಯಾಪಕರಾಗಿ ಬೇ0ದ್ರೆ ಕನ್ನಡದಲ್ಲೇ ಕಾವ್ಯ ರಚಿಸಿದರು. ಅ0ಬಿಕಾತನಯದತ್ತ ಎನ್ನುವ ಕಾವ್ಯನಾಮದಿ0ದ ಕನ್ನಡ ವರ ಕವಿ ಎನಿಸಿಕೊ0ಡರು. ಬದುಕಿನುದ್ದಕ್ಕು ನೋವುಗಳನ್ನು ಅನುಭವಿಸಿದರು. ಬೇ0ದ್ರೆ ಅನುಭವಕ್ಕೆ ಬ0ದ ಪ್ರತಿ ಕ್ಷಣಗಳಿಗೂ ಅಕ್ಷರ ರೂಪ ತ0ದುಕೊಟ್ಟರು. ಕೈಯಲ್ಲಿದ್ದ ಹೈಸ್ಕೂಲ್ ಕೆಲಸವು ಹೋಯಿತು ಕೈಯಲ್ಲಿ ಬಿಡಿಗಾಸು ಇರಲಿಲ್ಲ. ಹುಟ್ಟಿದ ನಾಲ್ಕು ಮಕ್ಕಳು ಒಟ್ಟೊಟ್ಟಿಗೆ ಹಾಸಿಗೆ ಹಿಡಿದಾಗ ಚಿಕಿತ್ಸೆ ಕೊಡಲಾಗಲಿಲ್ಲ. ಅದರಲ್ಲಿ ಒ0ದು ಮಗು ಸತ್ತು ಹೋಯಿತು. ಆ ಕ್ಷಣ ಪತ್ನಿಯ ಕಣ್ಣೀರು ಕ0ಡು ಬೇ0ದ್ರೆ, ಮಾತಲ್ಲಿ ಹೇಳಲಾಗದನ್ನು ಕವಿತೆಯ ಮೂಲಕ ತಿಳಿಸಿದರು. ನೀ ಹಿ0ಗೆ ನೋಡಬೇಡ ನನ್ನ ನೀ ಹಿ0ಗೆ ನೋಡಿದರೆ ನನ್ನ ತಿರುಗಿ ನಾ ಹೆ0ಗ ನೀಡಲಿ ನಿನ್ನ ಇದು ಅವರ ಕಣ್ಣೀರಲ್ಲಿ ಉಕ್ಕಿದ ಹಾಡು.

Image result for photos of dara bendre

          ಬೇ0ದ್ರೆ ಕಾವ್ಯಶಕ್ತಿ ಅ0ತದ್ದು ಎಷ್ಟು ಕಷ್ಟ ಬ0ದರೂ ಎ0ತ ಪರಿಸ್ಥಿತಿ ಎದುರಾದರೂ ದೃತಿಗೆಡಲಿಲ್ಲ ಅಳುಕಲಿಲ್ಲ ಅವರ ಪ್ರತಿ ನೋವಿಗೂ        ಅವರ ಸಾಹಿತ್ಯ ಮದ್ದಾಗಿತ್ತು. ಅವರ ಕವನಗಳೇ ಎಲ್ಲದಕ್ಕೂ ಸಮಾಧಾನ ನೀಡಿತ್ತು. ಅವರ ಕವನ ಓದಿದ ಒಬ್ಬರು ಬೇ0ದ್ರೆಗೆ ಹೇಳಿದರ0ತೆ ನಾನು ಬೇ0ದ್ರೆ ಆಗಬೇಕು ಅ0ತ ಅದಕ್ಕೆ ಬೇ0ದ್ರೆ ಹೇಳದರ0ತೆ ಬೇ0ದ್ರೆ ಯಾರಲ್ಲೂ ಹೇಳಿಕೊ0ಡಿಲ್ಲ, ಯಾರ ಸಹಾಯವೂ ಕೇಳಿಲ್ಲ. ವರಕವಿ ಎನಿಸಿಕೊ0ಡತು ಇಳಿದು ಬಾ ಬೇ0ದ್ರೆ ಇಳಿದು ಬಾ…. ಕನ್ನಡದ ಕಾವ್ಯಗೀತೆಗಳಲ್ಲಿ ಹರಿದು…. ಬಾ…. ಸಾಹಿತ್ಯ ಶಿಬಿರದ ನೆತ್ತಿಯಿ0ದ ಇಳಿದು…ಬಾ….ಬೇ0ದ್ರೆ ಇಳಿದು ಬಾ…ವರಕವಿಗಿ0ದು ಹೃದಯದಾಳದಲ್ಲೊ0ದು ನಮನ.   

**************

Leave a Reply

Back To Top