ವೈರಸ್


ಅಶ್ವಥ್
ಏನೋ ಬಲ್‌ಶಾಲಿ ಅನ್ಕೊಂಡ್‌ಬುಟ್ಟು
ಬೇಕಾದ್ದೆಲ್ಲ ಮಾಡ್ಕೊಂಡ್‌ಬುಟ್ಟು
ಭೂತಾಯ್ ಮುಂದ್ ಗತ್ತು ಗಮ್ಮತ್ತು
ವೈರಸ್ ಬಂತು ಮಂಡಿಯೂರು ಅಂತು
ನವರಂಗೀ ಮಾಧ್ಯಮ್‌ಗಳಾಗೆ
ಪಟತೆಕ್ಕಂಡ್ ವಾಲಾಡುವಾಗೇ
ಕಣ್ಣಿಗ್ ಕಾಣ್ದಿರ್ ಅಣುವೊಂದ್ ಬಂತು
ಕೈಕಾಲ್ ಕಟ್ಕಂಡ್ ಮನೆಲ್ಕೂರ್ ಅಂತು
ಜಗತ್ತೆಲ್ಲಾ ಚಿಂದಿ ಚೂರಾದ್ರೂನೇ
ಕಣ್ಣಾಗ್ ಕಣ್ಣಿಟ್ ನೋಡೋದಾಗ್ದೇನೆ
ಕಿಂಚಿತ್ ಅನ್ನೋ ವೈರಸ್ಸೇ ಬರ್‌ಬೇಕಾತು
ನಮ್ ಸಂಬಂಧ್‌ಗೋಳ್ ಏನಂತ ತಿಳ್‌ಸ್ತು
ನಮ್ ಕೈತೊಳ್ಕೊಂಡ್ರಷ್ಟ್ ಸಾಕಾಗಲ್ಲ
ಮನ್ಸ್ ಉಜ್ಜುಜ್ಜಿ ತೊಳ್ಕೊಬೇಕೆಲ್ಲ
ವದ್ದ್ ವೋಡ್ಸೋಕ್ ಮುಂಚೆ ವೈರಸ್ಸನ್ನ
ಎತ್ತ್ ಹಿಡೀಬೇಕಾಗೈತೆ ಮನ್ಸತ್ವಾನಾ
********************