“ಒಣರೊಟ್ಟಿ ತಿಂದು
ತಣ್ಣೀರ ಕುಡಿ, ಫರೀದ್
ಇತರರ ತುಪ್ಪ ರೊಟ್ಟಿಯ ಕಡೆ
ನೋಡದಿರು ಹಂಬಲಿಸಿ”
-ಬಾಬಾ ಷೇಖ್ ಫರೀದ್
ಸಮಾಜ ಸೇವಕಿ ಬೇಗಂ ಐಜಾಜ್ ರಸೂಲ್ (1909-2001)
ಮಾಗಿದಾಗಲೆಲ್ಲ ಚಿತ್ರಗಳು
ಒತ್ತೆಯಾಳು ಕಣ್ಣ ಬೆಳಕಿನ ಕೂಳು
ಉಣ್ಣುವಾಗಲೆಲ್ಲ ನಾಲಿಗೆ ಚಿತ್ರವೂ
ಅಣಕಿಸುತ್ತದೆ
ಕಾಲವೆಂಬ ಗಿರಿಯ ಏರುತ್ತಾ ಏರುತ್ತಾ ಹಿಂತಿರುಗಿ ನೋಡಿದಾಗ ಅದೆಷ್ಟೋ ಅಂದಿನ ಸಾಮಾನ್ಯ ಸಂಗತಿಗಳು ಇಂದು ವಿಶಿಷ್ಟವೆನಿಸ ತೊಡಗುತ್ತವೆ. ಕಾಡುವ ನೆನಪುಗಳಾಗಿ ಹಂಚಿಕೊಳ್ಳಲೇಬೇಕೆಂಬ ತಹತಹ ಮೂಡಿಸುತ್ತವೆ. ಅಂತಹ ನೆನಪುಗಳ ಮಾಲಿಕೆ ಈ ಅಂಕಣ. ಬನ್ನಿ ನೆನಪಿನ ದೋಣಿಯನ್ನೇರಿ ಗತ ವೆಂಬ ಸಾಗರದ ಪರ್ಯಟನೆ ಮಾಡಿ ಬರೋಣ.
ಸೋಮಣ್ಣನ ಸಂಕಟಗಳು
ಹಾಸ್ಯ ಲೇಖನ ಸೋಮಣ್ಣನ ಸಂಕಟಗಳು ಸೋಮಣ್ಣ ನಮ್ಮ ಮನೆಗೆ ಹಾಲು ಹಾಕಲು ಬರುತ್ತಾರೆ.ಮನೆ ಕಡೆ ಹೊಲ,ಗದ್ದೆ ,ತೋಟ ಅಂತ ಜಮೀನು ಕೂಡ ಚೆನ್ನಾಗಿದೆ.ಒಂದಷ್ಟು ಮನೆ ಕಟ್ಟಿ ಬಾಡಿಗೆ ಕೂಡ ಕೊಟ್ಟಿದ್ದಾರೆ.ಇಷ್ಟು ಆದಾಯ ಸಾಲದು ಅಂತ ಡೈರಿ ಏಜೆನ್ಸಿ ಕೂಡ ತೊಗೊಂಡು ಮನೆ ಮನೆಗೆ ಹಾಲು ಹಾಕುತ್ತಾರೆ.ಒಟ್ಟಾರೆಯಾಗಿ ಮನೆ ಕಡೆ ಚೆನ್ನಾಗಿದ್ದಾರೆ. ಸೋಮಣ್ಣ ಒಳ್ಳೆ ಹಸನ್ಮುಖ ವ್ಯಕ್ತಿ.ಹಾಲು ಕೊಡಲು ಬಂದಾಗ ,ನನಗೆ ರಜೆಯಿದ್ದ ದಿನವಾಗಿ, ಒಂದಷ್ಟು ಬಿಡುವಿದ್ದರೆ ಒಂದು ನಾಲ್ಕು ಕಷ್ಟ ಸುಖದ ಮಾತನಾಡಿ ಹೋಗುತ್ತಾರೆ.ಅಂತಹ ಒಂದು ದಿನ […]
ಗಜಲ್
ಗಜಲ್ ಪ್ರಕಾಶಸಿಂಗ್ ರಜಪೂತ ಒಡೆಯನಾ ಸಂದೇಶ ಒಂದಾಗಿ ಬಾಳುಬೀದಿ ಗಳು ಹಂಚಿ ಆಗದಿರು ಹಾಳು ಬರುವಾಗ ತಂದಿ ಏನು ಜಗಳಾಡಲು ಬಂದಿ ಏನುನಿನ್ನ ಕಾಡುವದು ಇಲ್ಲಿ ನಿತ್ಯ ಈ ಸವಾಲು ಒಂದೇ ಕುಲ ಒಂದು ಮತ ಒಂದು ನಿನ್ನ ಜಾತಿಕರ್ಮವೇ ಪರಿಚಯ ತಿಳಿಕೋ ನಿನ ಪಾಲು ಗುಡಿಯಲ್ಲಿ ಹುಡುಕಿದರೆ ಸಿಗುವನಾ ಒಡೆಯಾಇಳಿಯಬೇಕು ಅದಕ್ಕೆ ನೀ ಮನದ ಆಳು ಜೊತೆಯಲ್ಲಿ ಬರುವದಿಲ್ಲ ನೀ ಮಾಡಿದ ಸಂಚಯದುಖ್ಖ ನೀಡತೈತಿ ಅಯ್ಯ ನೀ ಕಟ್ಟಿದ ಜಾಲು ನೆನಪಿನಲ್ಲಿ ಇರಲಿ”ಪ್ರಕಾಶ”ನಾ ಸದಾ ಮಾತುಜಾತಿ […]
ಬಿ.ಶ್ರೀನಿವಾಸ ಎರಡು ಕವಿತೆಗಳು
ಆದರೆ ಪಾಪ …
ಅವನಿಗೆ
ಇಂಗ್ಲಿಷ್ ಬರುತ್ತಿರಲಿಲ್ಲ
ಅಕ್ಷರ ಸಂತ ಹಾಜಬ್ಬ
ಕಾವ್ಯ ಸಂಗಾತಿ ಅಕ್ಷರ ಸಂತ ಹಾಜಬ್ಬ ಕಮಲಾಕ್ಷಿ ಕೌಜಲಗಿ ಅನಕ್ಷರಸ್ಥರೆ ಆದರು ಕೂಡಅಕ್ಷರ ಸಂತರು ಹಾಜಬ್ಬನಿಮ್ಮನ್ನೋಡಿ ಇಡೀ ದೇಶಹಾರಿಸುವಂತಾಗಿದೆ ಹುಬ್ಬ! ಕಿತ್ತಳೆ ಮಾರಿ ಕಟ್ಟಿಸಿಕೊಟ್ಟಿರಿಕಲಿಯಲು ಮಕ್ಕಳಿಗೆ ಶಾಲೆಅಕ್ಕರೆಯಿಂದಲಿ ಸಾಧನೆಗೈದಿರಿನಿಮಗಿದೋ ಸಾವಿರ ಚಪ್ಪಾಳೆ! ವಿಶಾಲ ಮನಸಿನ ಕಾಯಕಯೋಗಿಸರಳತೆ ತುಂಬಿದೆ ಕಣಕಣವುನಿಮ್ಮಯ ನೆರಳಲಿ ಕಲಿತವರೆಲ್ಲರುತೀರಿಸಲುಂಟೇ ನಿಮ್ಮ ಋಣವು? ಹಸುಳೆಯ ಮನಸಿನ ಮುಗ್ಧತೆ ಅಡಗಿದೆಹೃದಯ ಶ್ರೀಮಂತಿಕೆ ನಿಮ್ಮ ಆಸ್ತಿಎಲ್ಲರು ಅಕ್ಷರ ಕಲಿಯಲಿ ಎಂಬುದೆನಿಮ್ಮಲಿ ತುಡಿಯುವ ಆಸಕ್ತಿ ಜ್ಞಾನದ ಹಸಿವನು ತೀರಿಸಲೋಸುಗತಿರುಗಾಡಿ ಮಾರುತ ಜೀವವ ತೇಯ್ದೆಈ ಪರಿ ನಿಷ್ಠೆಯ ಕಾಯಕದಿಂದಲೆಪದ್ಮಶ್ರೀ ಪ್ರಶಸ್ತಿಯು ನಿಮ್ಮನ್ನಾರಿಸಿದೆ.
ಅನುವಾದಿತ ಅಬಾಬಿಗಳು
ಹಕೀಮಾ
ತಕ್ಕಡಿ ತಡಬಡಿಸುತ್ತಿದೆ ನೋಡು
ಅಂಕಣ ಸಂಗಾತಿ ತೊರೆಯ ಹರಿವು ‘ಸಾವಿಗೊಂದು ಘನತೆ ಕೊಡುವ…’ ಅಪ್ಪು ಎಂಬ ಮನದ ಮಗನ ಸಾವಿಗೆ ಕರ್ನಾಟಕ ಇನ್ನಿಲ್ಲದಂತೆ ಕೊರಗುತ್ತಿದೆ. ‘ಈ ಸಾವು ನ್ಯಾಯವೇ ?’ ಎಂದು ಪ್ರಶ್ನಿಸುತ್ತಿದೆ. ‘ಸಾಯೋ ವಯಸ್ಸಾ ಇದು? ವಿಧಿಗೆ ಕುರುಡೇ? ಯಮನ ಕಿಂಕರರಿಗೆ ಕರುಣೆ ಇಲ್ಲವೇ?’ ಎಂದೆಲ್ಲಾ ನೂರಾರು ಪ್ರಶ್ನೆಗಳನ್ನು ಎಲ್ಲರ ಮನಸ್ಸು ಜಗ್ಗಿ ಕೇಳುತ್ತಿದೆ. ಇದಂತೂ ಈ ಕಾಲಮಾನದಲ್ಲಿನ ಎಲ್ಲಾ ವಯೋಮಾನದವರ ಮನದಲ್ಲಿ ಉಳಿದು ಹೋದ ಅಹಿತಕರ ಘಟನೆ. ಯಾರೂ ಊಹಿಸದಿದ್ದ ಆಘಾತ! ‘ಹುಟ್ಟಿದ ಮೇಲೆ ಸಾವು […]