ಗಜಲ್

ಗಜಲ್

ಪ್ರಕಾಶಸಿಂಗ್ ರಜಪೂತ

ಒಡೆಯನಾ ಸಂದೇಶ ಒಂದಾಗಿ ಬಾಳು
ಬೀದಿ ಗಳು ಹಂಚಿ ಆಗದಿರು ಹಾಳು

ಬರುವಾಗ ತಂದಿ ಏನು ಜಗಳಾಡಲು ಬಂದಿ ಏನು
ನಿನ್ನ ಕಾಡುವದು ಇಲ್ಲಿ ನಿತ್ಯ ಈ ಸವಾಲು

ಒಂದೇ ಕುಲ ಒಂದು ಮತ ಒಂದು ನಿನ್ನ ಜಾತಿ
ಕರ್ಮವೇ ಪರಿಚಯ ತಿಳಿಕೋ ನಿನ ಪಾಲು

ಗುಡಿಯಲ್ಲಿ ಹುಡುಕಿದರೆ ಸಿಗುವನಾ ಒಡೆಯಾ
ಇಳಿಯಬೇಕು ಅದಕ್ಕೆ ನೀ ಮನದ ಆಳು

ಜೊತೆಯಲ್ಲಿ ಬರುವದಿಲ್ಲ ನೀ ಮಾಡಿದ ಸಂಚಯ
ದುಖ್ಖ ನೀಡತೈತಿ ಅಯ್ಯ ನೀ ಕಟ್ಟಿದ ಜಾಲು

ನೆನಪಿನಲ್ಲಿ ಇರಲಿ”ಪ್ರಕಾಶ”ನಾ ಸದಾ ಮಾತು
ಜಾತಿ ಮತ ಬದಿಗಿಟ್ಟು ಅರಸಾಗಿ ಆಳು


Leave a Reply

Back To Top