ಅಕ್ಷರ ಸಂತ ಹಾಜಬ್ಬ

ಕಾವ್ಯ ಸಂಗಾತಿ

ಅಕ್ಷರ ಸಂತ ಹಾಜಬ್ಬ

ಕಮಲಾಕ್ಷಿ ಕೌಜಲಗಿ

One man's orange revolution: Harekala Hajabba

ಅನಕ್ಷರಸ್ಥರೆ ಆದರು ಕೂಡ
ಅಕ್ಷರ ಸಂತರು ಹಾಜಬ್ಬ
ನಿಮ್ಮನ್ನೋಡಿ ಇಡೀ ದೇಶ
ಹಾರಿಸುವಂತಾಗಿದೆ ಹುಬ್ಬ!

ಕಿತ್ತಳೆ ಮಾರಿ ಕಟ್ಟಿಸಿಕೊಟ್ಟಿರಿ
ಕಲಿಯಲು ಮಕ್ಕಳಿಗೆ ಶಾಲೆ
ಅಕ್ಕರೆಯಿಂದಲಿ ಸಾಧನೆಗೈದಿರಿ
ನಿಮಗಿದೋ ಸಾವಿರ ಚಪ್ಪಾಳೆ!

ವಿಶಾಲ ಮನಸಿನ ಕಾಯಕಯೋಗಿ
ಸರಳತೆ ತುಂಬಿದೆ ಕಣಕಣವು
ನಿಮ್ಮಯ ನೆರಳಲಿ ಕಲಿತವರೆಲ್ಲರು
ತೀರಿಸಲುಂಟೇ ನಿಮ್ಮ ಋಣವು?

ಹಸುಳೆಯ ಮನಸಿನ ಮುಗ್ಧತೆ ಅಡಗಿದೆ
ಹೃದಯ ಶ್ರೀಮಂತಿಕೆ ನಿಮ್ಮ ಆಸ್ತಿ
ಎಲ್ಲರು ಅಕ್ಷರ ಕಲಿಯಲಿ ಎಂಬುದೆ
ನಿಮ್ಮಲಿ ತುಡಿಯುವ ಆಸಕ್ತಿ

ಜ್ಞಾನದ ಹಸಿವನು ತೀರಿಸಲೋಸುಗ
ತಿರುಗಾಡಿ ಮಾರುತ ಜೀವವ ತೇಯ್ದೆ
ಈ ಪರಿ ನಿಷ್ಠೆಯ ಕಾಯಕದಿಂದಲೆ
ಪದ್ಮಶ್ರೀ ಪ್ರಶಸ್ತಿಯು ನಿಮ್ಮನ್ನಾರಿಸಿದೆ.


Leave a Reply

Back To Top