ಸಂಗಾತಿ ಬರಹಗಾರರಿಗೆ ಕಾವ್ಯ ಮಾಣಿಕ್ಯ ಪ್ರಶಸ್ತಿ-2021
ಸಂಗಾತಿಯ ಇಬ್ಬರು ಬರಹಗಾರರಿಗೆ 2021 ನೇ ಸಾಲಿನ ರಾಜ್ಯಮಟ್ಟದ ಕಾವ್ಯ ಮಾಣಿಕ್ಯ ಪ್ರಶಸ್ತಿ ದೊರಕಿದ್ದು ಪತ್ರಿಕೆ ಅವರಿಗೆಅಭಿನಂದನೆ ಸಲ್ಲಿಸುತ್ತದೆ
ಗಜಲ್
ಗಜಲ್ ನಯನ. ಜಿ. ಎಸ್ ನೋವುಗಳ ಕಾವಿನಲಿ ಬೆಂದು ಬಳಲದಿರು ಕರೆಯುತಿದೆ ಬಾಳಿನ ರಹದಾರಿವ್ಯಥೆಗಳೊಳು ಸಿಲುಕುತ ನಿತ್ಯ ಕುಗ್ಗದಿರು ಆದರಿಸುತಿದೆ ಬಾಳಿನ ರಹದಾರಿ ! ಉಳಿವು ಅಳಿವುಗಳು ಸೃಷ್ಟಿಯ ನಿಯಮ ಅರಿತು ಬದುಕು ಉತ್ಸಾಹದಿನಿರಾಸೆಗಳ ಗುಂಗಿನಲಿ ಮುಳುಗದಿರು ಸೆಳೆಯುತಿದೆ ಬಾಳಿನ ರಹದಾರಿ ! ಎಡೆಬಿಡದೆ ಸುರಿಸಿದ ಶ್ರಮದ ಬೆವರನು ಹಾಳು ಗೆಡವದಿರು ಮನವೇಪ್ರತಿಫಲವು ಇರಲು ನೊಂದು ದೂರ ತಳ್ಳದಿರು ಸಾಗುತಿದೆ ಬಾಳಿನ ರಹದಾರಿ ! ಬುದ್ಧಿ ಜೀವಿಯು ಮನುಜ ಎಂಬುದ ಅರಿತು ತಿಳಿ ಸ್ಥಿತಿ ಗತಿಯ ಸೂಕ್ಷ್ಮದಿಭವಿಷ್ಯವಿದೆ […]
ಗಜಲ್
ಗಜಲ್ ರಾಹುಲ ಮರಳಿ ಮನಸಿನ ಹಿಡಿತ ತಪ್ಪಿ ಭಾವನೆಗಳ ಬರವಾಗಿದೆ ಸಾಕಿಹೃದಯದಿ ಭಾವನೆಗಳಿಲ್ಲದೆ ಮನಸಿಗೆ ಘಾಸಿಯಾಗಿದೆ ಸಾಕಿ ಬೇಕು ಬೇಕೆಂಬ ಹಪಹಪಿಯಲಿ ಇದ್ದ ವೈಭವ ಅನುಭವಿಸುತಿಲ್ಲಸಾಕು ಎಂಬ ತೃಪ್ತಿ ಸುಖದ ಸುಪತ್ತಿಗೆಯಾಗಿದೆ ಸಾಕಿ ಅನ್ಯರ ಕಷ್ಟ ನೋಡುತಿರೆ ಕರಳು ಚುರ್ ಎನ್ನುವುದುಎನ್ನ ಹೃದಯ ಕಿವುಚಿದರೂ ಕೇಳವರಿಲ್ಲದಂತಾಗಿದೆ ಸಾಕಿ ಕೊಂಚ ಮದಿರೆ ದೊರೆತರೆ ನಶೆಯಲಿ ಹಾಯಾಗಿರಬಹುದುಮನದ ತುಮುಲಗಳನು ಹೊರಹಾಕಲು ಕಾವ್ಯ ರಚಿಸಬೇಕಾಗಿದೆ ಸಾಕಿ ಪ್ರೀತಿ ಪ್ರೇಮ ಸ್ನೇಹಗಳೆಂಬ ಸಂಬಂಧಗಳನು ಮನ ನಂಬಿದೆಜೀವಕವಿ ನೋವಿಂದ ಬಳಲಿದರೂ ಉಸಿರಾಡುವಂತಾಗಿದೆ ಸಾಕಿ
ಸರಣಿ ಬರಹ ಅಂಬೇಡ್ಕರ್ ಓದು ಭಾಗ-2 ಬಾಲ್ಯ ಮಧ್ಯಾಹ್ನದ ಬಿಸಿಲಿನಲ್ಲೊಮ್ಮೆ ಅತೀವ ಬಾಯಾರಿಕೆಯಾಗಿ ಸಾರ್ವಜನಿಕ ನಲ್ಲಿ ತಿರುಗಿಸಿ ನೀರು ಕುಡಿದಾಗ ಸವರ್ಣೀಯರಿಂದ ಮೈಲಿಗೆ ಮಾಡಿದನೆಂದು ಬೈಗುಳ ತಿಂದು ಹೊಡೆಯಿಸಿ ಕೊಂಡಿದ್ದು, ತನ್ನ ರೇಷ್ಮೆಯಂತ ತೆಲೆಗೂದಲನ್ನು ಕತ್ತರಿಸಲು ಕ್ಷೌರಿಕನು ನಿರಾಕರಿಸಿದಾಗ ಭೀಮನ ಮನಸ್ಸು ಜರ್ಜಿತವಾಗಿ ಚಿಂತಿತವಾಗುತಿತ್ತು. ಹಿರಿಯ ಅಕ್ಕನೆ ಭೀಮನ ತೆಲೆಗೂದಲನ್ನು ಕತ್ತರಿಸುತ್ತಿದ್ದಳು ಅದೇ ಹಿಂದು ದೇವರಗಳನ್ನು ಪೂಜಿಸಿದರು, ಅದೇ ಹಿಂದು ಹಬ್ಬ ಹರಿದಿನಗಳನ್ನು ಆಚರಿಸಿದರೂ, ಅದೇ ಹಿಂದು ಹೆಸರುಗಳನ್ನಿಟ್ಟುಕೊಂಡರೂ ಸವರ್ಣೀಯರು, ಹೀಗೇಕೆ ನಮ್ಮನ್ನು ಕೀಳಾಗಿ ನಡೆಸಿಕೊಳ್ಳುತ್ತಾರೆ, ಮುಟ್ಟಿದೆಲ್ಲ, […]
ಸ್ವರ ವ್ಯಂಜನಳಿಗೆ ಒಂದೇ ಮಣೆ, ಕ-ನಾದ ಕೀಲಿಮಣೆ
ಸ್ವರ ವ್ಯಂಜನಳಿಗೆ ಒಂದೇ ಮಣೆ, ಕ-ನಾದ ಕೀಲಿಮಣೆ ಸರೋಜಾ ಪ್ರಭಾಕರ್ ʻಕ-ನಾದ ಫೋನೆಟಿಕ್ಸ್ ಪ್ರೈ. ಲಿ.ʼ ಇದು ಕರ್ನಾಟಕ ಸ್ಟಾರ್ಟ್ ಅಪ್ ಅಡಿಯಲ್ಲಿನ ಒಂದು ಪುಟ್ಟ ಕಂಪೆನಿ. ಫೋನೆಟಿಕ್ಸ್ ಎಂದರೆ ಧ್ವನಿಶಾಸ್ತ್ರ, ಸ್ವರಶಾಸ್ತ್ರ, ಭಾಷಾಧ್ವನಿ ಶಾಸ್ತ್ರ ಎನ್ನುವ ಅರ್ಥವಿದೆ. ಈ ಪುಟ್ಟ ಕಂಪೆನಿಯ ಮುಂದೆಯೂ ಭಾರತೀಯ ಭಾಷೆ ಮತ್ತು ಲಿಪಿಯ ಅಳಿವು, ಉಳಿವು ಬೆಳವಣಿಗೆಯ ಮಹದಾಸೆಯಿದೆ, ಸವಾಲೂ ಇದೆ. ʻಕನ್ನಡ ಅನ್ನ ನೀಡುವ ಭಾಷೆ ಅಲ್ಲʼ ಎನ್ನುವ ಮಾತನ್ನು ಸುಳ್ಳಾಗಿಸಿ, ಭಾರತೀಯ ಭಾಷೆಗೆ ತಂತ್ರಜ್ಞಾನದ ಸ್ಪರ್ಶ ನೀಡುವ […]
ನಿನ್ನ ಬೆರೆವ ಹಠ
ಮೌನದ ಮುಂಗುರುಳು ನಲಿದಂತೆ
ಅಧರಗಳು ಕಂಪಿಸಿದ ಹನಿಯಂತೆ
ಭಾವ ರೇಚನೆ.
ಬೇಡ ನಮಗೆ
ಅದರ ಗೊಡವೆ
ಅವು ನನ್ನ
ಭಾವ ಒಡವೆ ..
ಗಝಲ್
ಗಝಲ್ ತೂತು ಬಿದ್ದ ಹಚ್ಚಡದಲ್ಲಿ ಒದ್ದಾಡುತಿದೆದೇವನಿಟ್ಟ ಕನಸುಕಾದ ಹೆಂಚಿನ ರೊಟ್ಟಿಯಂತೆ ಸುಡುತಿದೆದೇವನಿಟ್ಟ ಕನಸು ನಿಗಿನಿಗಿ ಕೆಂಡವಾಗಿ ಮನವು ಕಂಪನೆಕಾಯ್ದು ಹೋಯಿತೇಬನದ ಸುಮದ ಆಸೆಯ ಕಮರಿಸುತಿದೆದೇವನಿಟ್ಟ ಕನಸು ತುತ್ತು ಕೂಳಿಗೂ ನಾನಾ ಬಗೆಯಲಿವೇಷ ತೊಡಿಸಿತೆಢಂಢಂಯೆಂದು ವಾದ್ಯ ಬಾರಿಸುತಿದೆದೇವನಿಟ್ಟ ಕನಸು ಶಾಪಗ್ರಸ್ತ ಅಹಲ್ಯೆಯಂತೆ ಹೃದಯಮುಕ್ತಿ ಬೇಡುತಿದೆಬಡತನದ ಬಾಣಲೆಯಲಿ ಬೇಯುತಿದೆದೇವನಿಟ್ಟ ಕನಸು ಸನ್ಯಾಸಿಯಂತೆ ಸನ್ಮಾರ್ಗ ಅರಸುತಿದೆಅಭಿನವನ ಕಾವ್ಯವಿದೂಷಕನ ತೆರದಿ ಹಾಸ್ಯ ಮಾಡುತಿದೆದೇವನಿಟ್ಟ ಕನಸು ಶಂಕರಾನಂದ ಹೆಬ್ಬಾಳ
ಅನುವಾದಿತ ಅಬಾಬಿಗಳು
ಅನುವಾದ ಸಂಗಾತಿ ಅನುವಾದಿತ ಅಬಾಬಿಗಳು ಆಕರ : ಕಾಲಂ ಸಾಕ್ಷಿಗಾ(ತೆಲುಗು ಅಬಾಬಿಗಳ ಸಂಕಲನ) ಮೂಲ ಲೇಖಕರು : ಷೇಕ್ ಅಬ್ದುಲ್ ಹಕೀಮ್ಕನ್ನಡಾನುವಾದ : ಧನಪಾಲ ನಾಗರಾಜಪ್ಪ ೧೩)ಮನುಷ್ಯ ಮನುಷ್ಯನನ್ನೇ ದ್ವೇಷಿಸುವಂತೆಭೇದಭಾವಗಳನ್ನು ಸೃಷ್ಟಿಸುತ್ತಅಮಾಯಕ ಜನರನ್ನು ಹಿಂಸಿಸುತ್ತಹಕೀಮಾಮೇಕೆಬಣ್ಣದ ಹುಲಿಗಳಾಗಿ ಹೊಂಚುಹಾಕಿದರಲ್ಲಾ! ೧೪)ವೇಷಧಾರಣೆಗಳೇ ಗುರುತುಗಳಾದವೆಮನುಷ್ಯ ಮನುಷ್ಯತ್ವ ಏನಾಯಿತು?ಪಶುವಿಗಾಗಿ ಪರದಾಡುತ್ತಿವೆಯಾ?ಹಕೀಮಾದೇಶದಲ್ಲಿ ಪಶುಗಳು ರಾಜ್ಯವೆ? ೧೫)ದೇಶದಲ್ಲಿ ಕಳ್ಳರು ಹೆಚ್ಚಾಗಿದ್ದಾರೆದೇಗುಲಗಳಲ್ಲಿನ ದೇವರುಗಳೇ ಇವರ ಗುರಿಅಧಿಕಾರಿದಲ್ಲಿ ಹೂ ಇದ್ದರೆ ಇಷ್ಟೇನಾ?ಹಕೀಮಾ
ಸುಭಾಷಿತಗಳ ಸ್ವಾರಸ್ಯ
ಲೇಖನ ಸಂಗಾತಿ ಸುಭಾಷಿತಗಳ ಸ್ವಾರಸ್ಯ ಎಂ. ಆರ್. ಅನಸೂಯ ಬಾಲ್ಯದಲ್ಲಿ ಅವಳು ಮನೆಯ ಹಿರಿಯರು ತಮ್ಮ ಮಾತು ಕತೆಗಳಲ್ಲಿ ಸಮಯಾನುಸಾರ ಬಳಸುತ್ತಿದ್ದ ಗಾದೆಗಳನ್ನು ಕೇಳಿಸಿಕೊಂಡೇ ಬೆಳೆದವಳು. ಹೀಗಾಗಿಯೇ ನೂರಾರು ಗಾದೆಗಳು ಅವಳ ನಾಲಿಗೆಯ ತುದಿಯಲ್ಲಿದ್ದವು. ಅವಳ ಹಿರಿಯರು ಅನಕ್ಷರಸ್ಥರಾದರೂ ಸಹ ಅವರ ನಾಲಿಗೆಯ ಮೇಲೆ ಸರಾಗವಾಗಿ ಬಳಸಲ್ಪಡುತ್ತಿದ್ದ ಗಾದೆಗಳ ಕುರಿತ ಮೆಚ್ಚುಗೆಯ ಜೊತೆಯಲ್ಲೇ ಹಿರಿಯರ ಸಂದರ್ಭೋಚಿತ ಗಾದೆಗಳ ಬಳಕೆಯ ವಾಕ್ಚಾತುರ್ಯಕ್ಕೆ ಬೆರಗಾಗುತ್ತಿದ್ದಳು ಗಾದೆಗಳಂತೆ ಸರ್ವಜ್ಞನ ಹಾಗೂ ಬಸವಣ್ಣನ ವಚನಗಳು ನಮ್ಮ ನಾಡಾಡಿಗಳ ಮಾತುಕತೆಗಳ ನಡುವೆ ನುಸುಳಲು ಕಾರಣ […]