ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಬೆಸೆದ ಮನಸು ಕನಸುಗಳ ಮೇಲೊಂದು ದೂರು ನೀಡಬೇಕಿದೆ
ಬಸಿದ ಹನಿಯು ನಯನಗಳ ಮೇಲೊಂದು ದೂರು ನೀಡಬೇಕಿದೆ

ತೊರೆದು ಭಾವ ಉರಿದ ಎದೆಯು ತಾಳಲಾರದು ಬೇಗುದಿ
ಮುರಿದು ಮೌನವು  ಮಾತುಗಳ ಮೇಲೊಂದು ದೂರು ನೀಡಬೇಕಿದೆ

ಎರೆದ ಪ್ರೀತಿ ಇರಿದ ರೀತಿ ತನುಮನಕೆ ತಾಗಿನಿಂತು ನರಳಿದೆ
ಬೆಂದ ಎದೆಯು ತುಡಿತಗಳ ಮೇಲೊಂದು ದೂರು ನೀಡಬೇಕಿದೆ

ಮುರಿದ ವೀಣೆ ಹರಿದ ತಂತಿ ಹಾಡಲಾಗದ ಅಪಸ್ವರ
ಬೆರೆತ ಸ್ವರವು ಬೆರಳುಗಳ ಮೇಲೊಂದು ದೂರು ನೀಡಬೇಕಿದೆ

ಬರೆದ ಕವಿಯು ಬ್ರಹ್ಮನಲ್ಲ ಗೀಚುತಿರುವನು  ತನ್ನ ಲಯದಲಿ
ಉರಿದ ಜ್ಯೋತಿಯು ತೆರೆಗಳ ಮೇಲೊಂದು ದೂರು ನೀಡಬೇಕಿದೆ

About The Author

Leave a Reply

You cannot copy content of this page

Scroll to Top