ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ಮೌನವೆಂದರೆ ಶೂನ್ಯವಲ್ಲ
ಮನದ ಬೆಳಕು

ಹೇಳದ ನಿಶಬ್ದ ನಾದ
ಹೇಳಲಾಗದ ಆಳವಾದ ಹಾಡು

ಗದ್ದಲದಲ್ಲಿ ಕಳೆದುಹೋದ ಸತ್ಯ
ನಿಶ್ಚಲದಲ್ಲಿ ಕಾಣುವ ನಿತ್ಯ

ಕಣ್ಣೀರಲ್ಲಿ ಮರೆಯಾದ ಕಥೆ
ನಗುಮುಖದ ಹಿಂದಿನ  ವ್ಯಥೆ

ಮೌನವು ಸಹನೆಯ ಸುಹಾಸನೆ
ಸಮಾಧಾನದ ಪ್ರೇರಣೆ

ಹ್ರದಯದ ಹಂಬಲ
ಆತ್ಮದೊಳಗಿನ ನಂಬಲ

ಅಹಂಕಾರ ಶಮನವಾದಾಗ
ಆಂತರಿಕ ಶಾಂತಿ ಅರಳುವಾಗ

ಮಾತು ಮೀರಿದ ಭಾಷೆ
ಮಾನವೀಯತೆ ಉಳಿಸುವ  ಆಶೆ

ಮೌನ ಅರಿತ ಮನದೊಳಗೆ
ಜೀವನವೇ ಕಾವ್ಯವಾಯಿತು

ಮೌನವೆಂದರೆ ಖಾಲಿತನವಲ್ಲ
ಮನದ ಆಳದ  ಅಲೆ

 ಮೌನದಲ್ಲಿಯೇ  ಸಾಧನೆ
 ಮೌನದಲ್ಲಿಯೇ ಶಿಖಿರ


About The Author

Leave a Reply

You cannot copy content of this page

Scroll to Top