ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com


ದಫನ್ ಮಾಡುವ ಮುನ್ನ,ಕಫ಼ನ್ ಸರಿಸಿ ನನ್ನನೊಮ್ಮೆ ನೋಡೆಂದು ಅವನಿಗೆ ಹೇಳಿಬಿಡಿ
ನಿಂತ ಉಸಿರೂ, ಅವನ ಹೆಸರ ಉಸುರುವುದನೊಮ್ಮೆ ಕೇಳೆಂದು ಅವನಿಗೆ ಹೇಳಿಬಿಡಿ

ನನ್ನವರೆನಿಸಿಕೊಂಡವರ ಹುಸಿ ಮಾತುಗಳು ಮುಗಿಲು ಮುಟ್ಟುತಿರುವವು
ಎರಡೇ ಪದಗಳಲ್ಲಾದರೂ ಪ್ರೀತಿಯನೊಮ್ಮೆ ಹೇಳೆಂದು ಅವನಿಗೆ ಹೇಳಿಬಿಡಿ

ಹಿಂದಿರುಗಿ ಬರಲು, ಹಾದಿಯಿಲ್ಲದ ಊರಿನೆಡೆಗೆ ಸಾಗಿದೆ ಪಯಣ
ಜನಾಜಾ ಹೊತ್ತವರ ಹತ್ತಿರ ಸುಳಿದೊಮ್ಮೆ ಹೋಗೆಂದು ಅವನಿಗೆ ಹೇಳಿಬಿಡಿ

ನನ್ನೊಲವನು ದಿಟ್ಟಿಸಿದರೇ, ದೃಷ್ಠಿಯಾದಿತೆಂದು, ಎಂದೂ ನಾ ಕಣ್ಣೆತ್ತಲಿಲ್ಲ
ನಾ ಹಗಲಲಿ ಬದುಕುತಿದ್ದ ಕನಸನೊಮ್ಮೆ ಬಾಳೆಂದು ಅವನಿಗೆ ಹೇಳಿಬಿಡಿ

ನಿನ್ನ ನಜರಲಿ , ತನ್ನನು ಕಾಣಲು ತವಕದಿ ಕಾದಳು ಈ ವಾಣಿ ಅನುದಿನ
 ಒಂದೇ ಕ್ಷಣ ಎದುರು ನಿಂತು, ಹಿಡಿ ಮಣ್ಣನೊಮ್ಮೆ ಹಾಕೆಂದು ಅವನಿಗೆ ಹೇಳಿಬಿಡಿ


About The Author

Leave a Reply

You cannot copy content of this page

Scroll to Top