ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

Background ನಲ್ಲಿ ಅಳುವ
ನಮ್ಮ ಮುಂದೆ ನಗುತ ಇರುವ
ಏಕೈಕ ಜೀವ ಅದೇ ಅಪ್ಪ…

ಆತನ ಬೆವರ ಹನಿ ಕಾಣ್ತದ
ಆದ್ರ ಆತನ ಕಣ್ಣೀರ ಹನಿ
ಯಾರಿಗೂ ಕಾಣದು…

ತನ್ನವರ ಮೊಗದ ಮೇಲಿನ
ನಗುವ ಕಂಡು ನಗುತಲಿರುವ
ತನ್ನ ನೋವನೆಂದು ತೋರಿಸದವ…

ಉಸಿರು ಕೊಟ್ಟ ಜೀವಕೆ ಹೆಸರು
ಕೊಟ್ಟ ಹೃದಯ ಅವನ ಹೆಸರೆ
ಹೆಮ್ಮೆಯದು ಮಕ್ಕಳಿಗೆ…

ಈ ಒಂದಿನ ಸಾಕೇನು ಮಾಡಲು
ಅಪ್ಪನ ಗುಣಗಾನ ಈ ಕಾಲ ಸಾಲದು
ಪಡೆಯಬೇಕು ಮರುಜನ್ಮಾನ…

ಈ ಅಕ್ಷರಗಳಿಗೆ ಹೋಲಿಸಲಾಗದವ
ನಮ್ಮ ಭಾವಕ್ಕೂ ನಿಲುಕದವ
ಆಗಸದಗಲ ವಿಶಾಲ ಮನೋಭಾವದವ….

ನಗುವ ನಗಿಸುವ ಹೂವಿಗಿಂತಲೂ
ಮೃದು ಮನದವ ಕೋಪ
ಬಂದರಂತೂ ಕಾಲಭೈರವ…

ಈ ಜಗದಲಿ ಅಪ್ಪನ ಮುಂದೆ
ಸರಿಸಾಟಿ ಯಾರಿಲ್ಲವೊ
ಅವ ನಮ್ಮ ಜೀವ ದೈವ….



About The Author

3 thoughts on “ಕಲ್ಪನಾ ಎಸ್‌ ಪಾಟೀಲ ಅವರ ಕವಿತೆ ” ಏಕೈಕ ಜೀವ, ನನ್ನಪ್ಪ””

  1. ಕಾವ್ಯಧರೆ

    ಅಪ್ಪನ ಗುಣಗಾನ ಮಾಡಲು ಅದೆಷ್ಟೊ ಜನುಮಗಳು ಬೇಕೆನೊ..ಅಂತಹ ಅಪ್ಪನಿಂದ ಪಡೆದ ಈ ಜನ್ಮಾನ ಮಾಡಿಕೊಳ್ಳಬೇಕಿದೆ ಸಾರ್ಥಕ ಜೀವನ..ನನ್ನ ಸಾಲುಗಳ ಪ್ರಕಟಿಸಿದ್ದಕ್ಕೆ ಅನಂತ ಧನ್ಯವಾದಗಳು ಕಾವ್ಯ ಸಂಗಾತಿಗೆ..

Leave a Reply

You cannot copy content of this page

Scroll to Top