ಕಾವ್ಯ ಸಂಗಾತಿ
ರುತಿ(ರುದ್ರಮ್ಮ ಸಂ ಗಿಡ್ಡಪ್ಪಗೋಳ) ಕೊಲ್ಹಾರ
“ನನ್ನೊಲವೇ….”


ನಿನ್ನ ಪ್ರೀತಿಯ ಹಂಸವೇ ನಾನು
ನಿನ್ನ ಮುಗುಳ್ನಗೆಯ ಬೆಳಕೇ ಚೆಂದ
ನಮ್ಮ ಒಡನಾಟದ ಒಲವೇ ಅಂದ//
ಎದೆಯ ಗೂಡಿನ ಉಸಿರೇ ನೀನು
ನಿನ್ನ ನೆರಳಲಿ ಬೆರೆತಿರುವೆ ನಾನು
ಕಣ್ಣ ಸನ್ನೆಯ ಸವಿಯೇ ಹೊಸತು
ನಿನ್ನೋಲವ ಸುಖವೇ ಅಮೃತವು//
ನನ್ನ ಬಾಳಿಗೆ ನೀನೇ ಬೆಳಕು
ನಿನ್ನ ಪ್ರೀತಿಯೇ ನನಗೆ ಬೆರಗು
ಕಾಲ ಕಳೆಯಲಿ ನಿನ್ನೊಡನೆ ನಡೆಯುತ
ಜೀವ ಸಾಗಲಿ ನಿನ್ನನ್ನೇ ನಂಬುತ//
ನೂರು ವಸಂತ ನಗುತಾ ಬಾಳು
ನನ್ನ ಪ್ರೀತಿಯ ಮುದ್ದಿನ ಜೇನು
ಹುಟ್ಟು ಹಬ್ಬದ ಶುಭಾಶಯಗಳು
ಕಣ್ಣಲ್ಲೇ ಮಾತನಾಡುವ ಜಾಣನಿಗೆ //
ರುತಿ (ರುದ್ರಮ್ಮ ಸಂ ಗಿಡ್ಡಪ್ಪಗೋಳ) ಕೊಲ್ಹಾರ



