ಕಾವ್ಯ ಸಂಗಾತಿ
ಕಲ್ಪನಾ ಎಸ್ ಪಾಟೀಲ
“ಏಕೈಕ ಜೀವ, ನನ್ನಪ್ಪ”


Background ನಲ್ಲಿ ಅಳುವ
ನಮ್ಮ ಮುಂದೆ ನಗುತ ಇರುವ
ಏಕೈಕ ಜೀವ ಅದೇ ಅಪ್ಪ…
ಆತನ ಬೆವರ ಹನಿ ಕಾಣ್ತದ
ಆದ್ರ ಆತನ ಕಣ್ಣೀರ ಹನಿ
ಯಾರಿಗೂ ಕಾಣದು…
ತನ್ನವರ ಮೊಗದ ಮೇಲಿನ
ನಗುವ ಕಂಡು ನಗುತಲಿರುವ
ತನ್ನ ನೋವನೆಂದು ತೋರಿಸದವ…
ಉಸಿರು ಕೊಟ್ಟ ಜೀವಕೆ ಹೆಸರು
ಕೊಟ್ಟ ಹೃದಯ ಅವನ ಹೆಸರೆ
ಹೆಮ್ಮೆಯದು ಮಕ್ಕಳಿಗೆ…
ಈ ಒಂದಿನ ಸಾಕೇನು ಮಾಡಲು
ಅಪ್ಪನ ಗುಣಗಾನ ಈ ಕಾಲ ಸಾಲದು
ಪಡೆಯಬೇಕು ಮರುಜನ್ಮಾನ…
ಈ ಅಕ್ಷರಗಳಿಗೆ ಹೋಲಿಸಲಾಗದವ
ನಮ್ಮ ಭಾವಕ್ಕೂ ನಿಲುಕದವ
ಆಗಸದಗಲ ವಿಶಾಲ ಮನೋಭಾವದವ….
ನಗುವ ನಗಿಸುವ ಹೂವಿಗಿಂತಲೂ
ಮೃದು ಮನದವ ಕೋಪ
ಬಂದರಂತೂ ಕಾಲಭೈರವ…
ಈ ಜಗದಲಿ ಅಪ್ಪನ ಮುಂದೆ
ಸರಿಸಾಟಿ ಯಾರಿಲ್ಲವೊ
ಅವ ನಮ್ಮ ಜೀವ ದೈವ….
ಕಲ್ಪನಾ ಎಸ್ ಪಾಟೀಲ
ಕಾವ್ಯಧರೆ



