ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ನಿನ್ನ ಪ್ರೀತಿಯ ಹಂಸವೇ ನಾನು
ನಿನ್ನ ಮುಗುಳ್ನಗೆಯ ಬೆಳಕೇ ಚೆಂದ
ನಮ್ಮ ಒಡನಾಟದ ಒಲವೇ ಅಂದ//

ಎದೆಯ ಗೂಡಿನ ಉಸಿರೇ ನೀನು
ನಿನ್ನ ನೆರಳಲಿ ಬೆರೆತಿರುವೆ  ನಾನು
ಕಣ್ಣ ಸನ್ನೆಯ ಸವಿಯೇ ಹೊಸತು
ನಿನ್ನೋಲವ ಸುಖವೇ ಅಮೃತವು//

ನನ್ನ ಬಾಳಿಗೆ ನೀನೇ ಬೆಳಕು
ನಿನ್ನ ಪ್ರೀತಿಯೇ ನನಗೆ ಬೆರಗು
ಕಾಲ ಕಳೆಯಲಿ ನಿನ್ನೊಡನೆ ನಡೆಯುತ
ಜೀವ ಸಾಗಲಿ ನಿನ್ನನ್ನೇ ನಂಬುತ//

ನೂರು ವಸಂತ ನಗುತಾ ಬಾಳು
ನನ್ನ ಪ್ರೀತಿಯ ಮುದ್ದಿನ ಜೇನು
ಹುಟ್ಟು ಹಬ್ಬದ ಶುಭಾಶಯಗಳು
ಕಣ್ಣಲ್ಲೇ ಮಾತನಾಡುವ ಜಾಣನಿಗೆ //


About The Author

2 thoughts on “ರುತಿ(ರುದ್ರಮ್ಮ ಸಂ ಗಿಡ್ಡಪ್ಪಗೋಳ) ಕೊಲ್ಹಾರ ಅವರ ಕವಿತೆ “ನನ್ನೊಲವೇ….””

Leave a Reply

You cannot copy content of this page

Scroll to Top