ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾನನಳ ಕಂಗಾಲ ಕಂಗಳ ಕಣ್ಣೀರು
ಕಾಣದಾದರೆ ಇಹದ ಮನುಜ ಕುಲದವರು
ಆಧುನಿಕ ಭರ ಭರಾಟೆಯಲಿ ನಿಂದವರು!!೧!!

ಕಾಡಮ್ಮಳ ಒಡಲು ಪಶು ಪಕ್ಷಿ ಪ್ರಾಣಿ
ವನ್ಯಜೀವಿ ಮರ ಗಿಡ ಗುಡ್ಡ-ಹಳ್ಳ ಕೊಳ್ಳ
ಅವಳ ಬೆಚ್ಚನೆಯ ಗರ್ಭವೇ ಅವರ ತಾಣ!!೨!!

ಸಕಲ ಜೀವ ರಾಶಿಗಳಿಗೆ ಉಸಿರಾಗಿ
ಅಮೃತ ನಿಯುತ ನಿಂದಿಹಳು ಹಸಿರಾಗಿ
ಸಕಲ ಪ್ರಾಣಿ ಪ್ರಾಣ ಸಂಜೀವಿನಿಯಾಗಿ !!೩!!

ಹಚ್ಚ ಹಸಿರು ಬೆಚ್ಚನೆ ಸೌಖ್ಯದ ಹೊದಿಕೆ
ಹೊಚ್ಚಿ ,ಕೊಡುತಿಹಳು ಪೋಷಣೆ ಪುಷ್ಟಿಕೆ
ಸರ್ವರನು ಬೆಳೆಸಿ ತನ್ನೊಳಗೆ ಹುದುಗಿಸಿ !!೪!!

ಸಾವಿರಾರು ಗಿರಿ-ಪರ್ವತಗಳ ತೊಟ್ಟ
ಜಲ-ಹಣ್ಣು ಹಂಪಲ ಆಸರೆ ಕೊಟ್ಟು
ತಾಯಿಯಾಗಿ ನಿಂದವಳ ಕಟ್ಟಿಹರು ಚಟ್ಟ!!೫!!

ಇಂದು ಬಾಡಿ ಒಣಗಿ ನಸಿಸುತಿಹಳು
ಲೆಕ್ಕವಿರದ ಪಶುಗಳ ಮರಗಿಡಗಳು
ಉರುಳಿತಿವೆ ನಿರ್ದಾಕ್ಷಣೆ ಮತಿಗೇಡಿತನದಿ!!೬!!

ಎನಿತು ಪೇಳುಲಿ..ವೇದನೆಲಿ ಮರಗುತಿವೆ
ಕರುಣೆ ತೋರಿ ನಿಲ್ಲಿಸಿ ನಾಶ ಕನವರಿಸುತ್ತಿವೆ
ನದಿ ಹಳ್ಳ ಕೊಳ್ಳ ಬತ್ತುತಿವೆ ಬರಡಾಗುತಿವೆ!!೭!!

ಕಾಡಿನ ಕಂಗಳಂಚಿನಲ್ಲಿ ಕಣ್ಣಿರ ಹನಿಹನಿ
ಸುರಿಯುತ್ತಿವೆ ಬರಗಾಲದ ನೊರೆಯಾಗಿ
ಮನುಕುಲದ ವಿನಾಶದ ಕರೆ ಓಲೆಯಾಗಿ ‌‌!!೮!!

ಇನ್ನಾದರೂ ಎಚ್ಚೆತ್ತಲೇಬೇಕು- ಸಂರಕ್ಷಿಸು,
ಮನವಿಟ್ಟು ಒನವ ಸೀರಿಯ ಉಳಿಸಿಬೆಳಿಸು
ಸ್ವಾರ್ಥ ಬಿಟ್ಟು- ಮುಂದಿನ ಪೀಳಿಗೆ ನೆನಸು!!೯!!

ತಾಂತ್ರಿಕತೆ ಮುಂದುವರೆವ ವ್ಯವಹಾರದಿ
ಅನಿವಾರ್ಯತೆ ಒಡ್ಡಿದರೂ,ಮರ ಕೆಡವಿದರೆ
ವಿನಾಶ ನಿಶ್ಚಿತತೆ ಪರಿಜ್ಞಾನದ ಅರಿವು..!!೧೦!!

ಇಲ್ಲವೇ ನಮ್ಮಲಿ..!! ಬನ್ನಿ ಕೈಗೂಡಿಸೋಣ
ಒಂದು ಮರ ಕೆಡವಿದರೆ ಎರಡು ಮರವ ನೆಟ್ಟಿ..., ನಮ್ಮ ಕೃತಜ್ಞತೆ ಸಲ್ಲಿಸೋಣ!!೧೧!!

ಅವಳ ಉಸಿರಿಗೆ ನಾವು ಉಸಿರಾಗದ ಹೊರತು ನಮ್ಮ ಉಸಿರು ಉಳಿಯದು !!೧೨!! ತಿಳಿದು ಎಚ್ಚರದಿ ಮುನ್ನಡೆದರೆ ಮಾತ್ರ

ಉಳಿವು ನಿಮ್ಮದು..ನಮ್ಮ ಪ್ರತಿಯೊಬ್ಬರದು


About The Author

Leave a Reply

You cannot copy content of this page

Scroll to Top