ಗಜಲ್-ಮಾಜಾನ್ ಮಸ್ಕಿ

ಕಾವ್ಯ ಸಂಗಾತಿ

ಗಜಲ್

ಮಾಜಾನ್ ಮಸ್ಕಿ

ಬದುಕಿನ ಕಲೆಯನ್ನು ಕಲಿಯುವುದು ತಡವಾಗಿದೆ
ಅದೇಕೋ ನನ್ನನ್ನು ನಾ ಅರಿಯುವುದು ತಡವಾಗಿದೆ

ಸಂಸಾರದ ಬಂಡಿಗೆ ಗಾಲಿಗಳೇನೊ ಜೋಡಿಸಿದೆ
ಹೊಂದಾಣಿಕೆಯ ಕೀಲು ಇಡುವುದು ತಡವಾಗಿದೆ

ಕಸೂತಿಯ ಚಿತ್ತಾರಕೆ ದಾರ ತುಂಬುವುದರಲ್ಲೇ ಮೈಮರೆತೆ
ನಿನ್ನೊಲುಮೆಯ ಸಾಂಗತ್ಯ ಬಯಸುವುದು ತಡವಾಗಿದೆ

ವರ್ಷದಿಂದ ವರ್ಷಗಳು ಉರುಳುತ್ತಲೇ ಇವೆ
ಪ್ರೇಮದ ಚಿಗುರು ಕೊನರುವುದು ತಡವಾಗಿದೆ

ವಿರಹದಾಗ್ನಿಯಲ್ಲಿ ಸುಡುವುದೆ ಆಯಿತು “ಮಾಜಾ”
ಸೋನಿ ಸುರಿತದಲ್ಲಿ ತಂಪಾಗುವುದು ತಡವಾಗಿದೆ


Leave a Reply