ಡಾ ಸಾವಿತ್ರಿ ಕಮಲಾಪೂರ ಅವರ ಕವಿತೆ-ಹಾರಿ ಹೋದ ಪಕ್ಷಿ

ನನ್ನೆದೆಯ ದೊಡ್ಡ
ಆಲದ ಮರದ ನೆರಳಿನಲ್ಲಿ
ಕಟ್ಟಿದ ಗೂಡಿನೊಳಗಿನ
ಪಕ್ಷಿಯೇ ಹಾರಿ ಹೋಗಿ ಬಿಟ್ಟೆಯಾ ಶಾಶ್ವತ

ಇದಿರು ಕಾಯುತ್ತಿರುವೆ
ನೀ ಹಾರಿ ಬರುವ
ದಿಕ್ಕನ್ನು ನೋಡುತ್ತ
ಕುಳಿತಿರುವೆ
ಸುನಿಶ್ಚಿತ

ಯಾರು ಕುಕ್ಕಿ ಕಳುಹಿಸಿದರು
ಮರಿ ಕೋಗಿಲೆಯೇ
ಮದುರ ಇಂಪನದ
ಸವಿ ಗಾನ
ಅನಿಶ್ಚಿತ

ಕಟ್ಟುವಾ ಗೂಡಿನಲಿ
ಒಟ್ಟಿದ ಕಾಳುಗಳು
ಮುಕ್ಕಿ ತಿನ್ನುತ್ತಿವೆ
ಬಳಿ ಬಾ ಹಾರಿ
ಶಾಶ್ವತ.


Leave a Reply

Back To Top