ಕಾವ್ಯ ಸಂಗಾತಿ
ಗಜಲ್
ವಾಣಿ ಭಂಡಾರಿ
ನೀನಿರದೆ ಮನದ ಗೋಡೆಯ ಮೇಲೊಂದು ಚಿತ್ತಾರ ಹೇಗೆ ಬರೆಯಲಿ ನಾನು
ಒಳಗಿನ ನೋವಿಗೆ ಮೂಲಾಮಿರದೆ ಹೇಗೆ ಜೀವಿಸಲಿ ನಾನು.
ಸೋತ ಕಾಲುಗಳು ನಿನ್ನನ್ನೆ ಧ್ಯಾನಿಸಿ ಮರುಗಿರೋದಿಸುತ್ತಿವೆ
ಮನದ ಮಾಯೆ ಕಳಚದೆ ಬಿಕ್ಕುತ ಬಳಲಿರುವೆ ಹೇಗೆ ಬದುಕಲಿ ನಾನು.
ನಿನ್ನ ಮೊಹಬತ್ ನ ನೆನಪಿನ ಮೇಲೊಂದು ಬಿಳಿ ಹೂ ನೆಟ್ಟಿರುವೆ
ದಿನದ ಬಾನು ಕರಗುತಲಿದೆ ಜೀವಸ್ವರವಿರದೆ ಹೇಗೆ ನಲಿಯಲಿ ನಾನು.
ನಿನ್ನ ಹೆಸರಿನ ಉಸಿರು ನನ್ನೊಳಗೆ ಐಕ್ಯಗಾನದ ನಾದವಾಗಿದೆ
ಬೊಗಸೆ ತುಂಬಿದ ಪ್ರೀತಿ ಮಸಣ ಸೇರಿರುವಾಗ ಹೇಗೆ ನಡೆಯಲಿ ನಾನು.
ವಾಣಿಪ್ರೀತಿಗೆ ಸಾವಿಲ್ಲ ಸಾವದ ಜೀವ ನೋವುಣ್ಣದಿರಲಿ ಗೋರಿಯೊಳಗೆ
ನಲ್ಮೆಯ ನಿನ್ನ ಬಿಸಿಯುಸಿರ ಮರೆತು ಎದೆ ಕದವ ಹೇಗೆ ತೆರೆಯಲಿ ನಾನು.
ದೇಹ ಬಿಟ್ಟು ಮಣ್ಣ ಮಣ್ಣಾದರು ಪ್ರೀತಿಯ ಮರೆಯಲು ಆಗಲವೆಂಬ ಚಂದ ಗಜಲ್ ಮೇಡಂ