ಕಾವ್ಯ ಸಂಗಾತಿ
ಮಿಥ್ಯ ಸತ್ಯ…
ಪ್ರೊ ವಿಜಯಲಕ್ಷ್ಮಿ ಪುಟ್ಟಿ
ನಾನೆಂಬ ನಾನು ನಾನಲ್ಲದ ನಾನು
ನನ್ನೊಳಗಿದ್ದು
ಇರದ ನಾನು
ನನ್ನೊಳಗೆ ಇರದೆಯೂ ಇದ್ದ ನೀನು
ನಿನ್ನೊಳಗಿದ್ದೇನೆ ಎಂದು ತಿಳಿದ ನಾನು
ನಿನ್ನೊಳಗೆ ಇಲ್ಲದೆಯೂ ಇದ್ದ ನಾನು
ನನ್ನೊಳಗೆ ಇದ್ದು ಇಲ್ಲದ ನೀನು
ಪರಸ್ಪರ ಇಬ್ಬರಲ್ಲಿ ಇಬ್ಬರೂ ಇರದೇ ಈದ್ದಂತಿದ್ದ ನಾವು
ಜೊತೆಜೊತೆಗೆ ಇಬ್ಬರು ಇದ್ದೂ
ಇಲ್ಲದಂತಿದ್ದ ನಾವು
ಯಾರೊಳಗೆ ಯಾರು ಯಾರೊಳಗೆ ಯಾರಿಲ್ಲ
ನಾನು ನೀನಿನ ಎರಡು ತಂತಿಗಳು ಪಸರಿಸಿ
ಹರಿದು ಮೀಟಿ ಪದೇಪದೇ ಜೋಡಿಸಿ
ಸಾವಿರಾರು ತಂತಿಗಳ ನಾದ ಭಾವ ಕಲರವ
ನಾನು ನೀನು ಮಿಥ್ಯ ನಾವು ನಮ್ಮ ಭಾವ
…….ಸತ್ಯ
**************