ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ರೇಮಾಸಂ

ಮುಖವಾಡ ಮರೆಯಾಗಿ ಕಾಣದಂತೆ ಕುಳಿತಿದೆ/
ದ್ವೇಷ ಪ್ರೇಮದ ಸೋಗು ಹಾಕಿದಂತೆ ಕಾಣುತಿದೆ//

ಬಾಗಿಲು ನೂರಿದ್ದರೂ ಹೊರಗೆ ಹೋಗದಂತಿದೆ/
ಹುಲಿ ಪಂಜರದಿ ಹಾರಿ ಬಂದಂತೆ ಅನಿಸುತಿದೆ//

ಮಾತು ಗಟ್ಟಿ ವ್ಯಾಪಾರದ ಬಂಡವಾಳವಾಗಿದೆ/
ಬಿಚ್ಚುನುಡಿ ಕಿವಿಗಳು ಮುಚ್ಚುವಂತೆ ಕೇಳುತಿದೆ//

ಕಚ್ಚುವ ಕೆರವುಗಳು ದಾರಿಯನು ತಪ್ಪಿಸುತಿದೆ/
ಮೆಚ್ಚುವ ನಡತೆಯು ಕನಸಂತೆ ಮುಗಿಯುತಿದೆ//

ಜಗದ ಜಗುಲಿಯ ಬಿರುಕುಗಳು ದೊಡ್ಡದಾಗಿವೆ/
ತಾಯಿಹೆಜ್ಜೆ ಗುರುತು ಅಳಿಸಿದಂತೆ ತೋರುತಿದೆ


About The Author

1 thought on “ಗಜಲ್”

Leave a Reply

You cannot copy content of this page

Scroll to Top