ಲೇಖನಿ

ಕಾವ್ಯ ಸಂಗಾತಿ

ಲೇಖನಿ

ಅನಿತಾ

ಸಿಕ್ಕಿತೊಂದು ಜಾದೂ ಲೇಖನಿ
ಹಣೆಬರಹ ಅಳಿಸಿ, ಮತ್ತೊಮ್ಮೆ ಬರೆಯಬಹುದಿತ್ತು, ಆ ವಿಧಾತನ ದನಿ

ಅಳುಬರಹ ಒರೆಸಿ
ನೋವು, ನಲಿವಾಗಿಸಿ ಬದುಕು
ಬದಲಾಯಿಸಬೇಕೆಂದಿತು
ಆಕಾಂಕ್ಷೆಯ ತಾಸು!

ಸಿರಿವಂತಿಕೆ, ಬಡತನ
ದ್ವೇಷ, ಪ್ರೀತಿ, ಮೇಲು ಕೀಳು
ಕಣ್ಮುಂದೆ ಹಾದುಹೋಗುತ್ತಿತ್ತು
ಅಂತರಾಳದ ಕನಸು!

ರವಿವರ್ಮನ ಕುಂಚದ ಬಣ್ಣ
ತುಂಬಿ, ನವಿರಾದ ಎಳೆಗಳಿಗೆ
ರಂಗುರಂಗಿನ ಹೊಸತನ
ಮೂಡಿಸುವ ಹುಮ್ಮಸ್ಸು!

ಅವೇನು ಕಠಿಣ ಕಾರ್ಯವಾಗಲಿಲ್ಲ
ಜೀವ, ಜೀವಂತಿಕೆಯ ಒಳಗೆ
ಮಾರ್ಪಾಟಾಗಿತ್ತು ಹಲವು ಮಜಲು!

…. ಆಯಸ್ಸು ಮೆಟ್ಟಿಲೊಳಗೆ ಇಳಿಯಲಾಗದೆ
ಸಾವಿನ ಕ್ಷಣ ಮುಂದೂಡಲಾಗದೆ…


Leave a Reply

Back To Top