ಕಾವ್ಯ ಸಂಗಾತಿ
ಗ್ಲೋಬಲ್ ವಿಲೇಜ್
ಬಾಪು ಖಾಡೆ
ಅಪ್ಪ ನನಗೆ ಲೆಕ್ಕ ಯಾಕೋ
ತಿಳಿತಾ ಇಲ್ಲ ನೋಡು
ಪುಟ್ಟು ನನಗೆ ಟೈಮ್ ಇಲ್ಲ
ಗೂಗಲ್ ಸರ್ಚ್ ಮಾಡು
ಅಮ್ಮ ನನಗೆ ಡ್ರೇಸ್ ಬೇಕು
ಪೇಟೆಗೆ ಹೋಗೊಣ ಬಾ ಅಮ್ಮ
ಮಹಿಳಾ ಮಂಡಳಿ ಮೀಟಿಂಗ್ ಇದೆ
ಆನ್‍ಲೈನ್ ಬುಕ್ ಮಾಡು
ಅಪ್ಪ ನನಗೆ ತುಂಬಾ ಬೋರು
ಚಂದದ ಕಥೆಗಳ ಹೇಳು
ಆಫೀಸಲ್ಲಿ ನನಗೆ ತುಂಬಾ ಕೆಲಸ
ಯುಟ್ಯೂಬ್ ಸರ್ಚ್ ಮಾಡು
ಅಮ್ಮ ಇಂದು ಫ್ರೆಂಡ್ ಬರ್ತಡೇ
ಗೆಳತಿ ಮನೆಗೆ ಹೋಗಿ ಬರ್ಲಾ
ಸುಮ್ಮನೆ ಯಾಕೆ ಓಡಾಡತೀಯ
ಫೇಸ್‍ಬುಕ್‍ನಲ್ಲಿ ವಿಶ್ ಮಾಡು
ಅಯ್ಯೋ ! ದೇವರೇ ಏನ್ ಮಾಡೋದು
ಕಾಲ ಬದಲಾಗಿ ಹೋಯಿತು
ಜಗತ್ತೇ ಒಂದು ವಿಲೇಜ್ ಆಗಿ
ಅಂಗೈಯಲ್ಲಿ ಸಿಕ್ತು
*****************