Month: September 2021

ಮರೆಯದ ನೆನಪು

ಕಾವ್ಯಯಾನ ಮರೆಯದ ನೆನಪು ಶೃತಿ ಮೇಲುಸೀಮೆ ಬೆಳಕು ಗಾಳಿ ಇಲ್ಲದಿದ್ರು,ಮನಿತುಂಬಾ ನಮ್ದೆ ಹವಾ,ಸದ್ದು ಗದ್ದಲ,ಯಾವಾಗ್ಲೂ ಆಟೋಟ,ಬೀದಿಯೆಲ್ಲಾ ರಂಪಾಟ ಚಪ್ಪರದ ಮನಿಯಾದ್ರೂ,ಅರಮನಿಗಿಂತ ಕಮ್ಮಿರ್ಲಿಲ್ಲಮನೆಗೂ,ಮನಸಿಗೂ ತೂತು ಬಿದ್ದು ಸೋರುತಿರ್ಲಿಲ್ಲ ನಿಷ್ಕಲ್ಮಶ ಸಣ್ಮನಸು,ಏನು ಅರಿಯದ ವಯಸುದೊಡ್ಡೋರಂದ್ರೆ ಭಯ,ಚಿಕ್ಕೋರಂದ್ರೆ ತಂಟೆ ತಕರಾರು ಹೊತ್ತೊತ್ತು ಊಟಕ್ಕೂ ,ಗಂಜಿಯ ಘಮಲುಸಾಲಾಗಿ ಕೂತ್ರೆ,ಸಾಲಿನ ಕೊನೆಯೊರಿಗೆ ಸಾಲುತ್ತಿರ್ಲಿಲ್ಲ ಕಿತ್ತು ತಿನ್ನೋ ಬಡತನಿದ್ರೂ,ಕತ್ತೆತ್ತಿ ನಡಿಯೋ ಶಕ್ತಿಕತ್ತಿಯಂತೆ ಇರಿಯೋ ತೊಂದ್ರೆತಾಪತ್ರೆ,ಕಿತ್ತೆಸೆಯಲು ದಾರಿ ನೀಡಿದ ಅಕ್ಷರದ ದ್ಯಾವರು ಬದುಕಿಗೆ ಒಂದರ್ಥ ಸಿಕ್ಕಿದ್ದೇ ಆ ಬಾಲ್ಯದ ದಿವಸದಲ್ಲಿತಂದಿ ಗದರಿಕೆ ಧ್ವನಿಲೇ ಕಾಳಜಿತ್ತು,ಅವ್ವನ ಪ್ರೀತಿಲೇ ನಗು […]

ಅಂಕಣ ಬರಹ ತೊರೆಯ ಹರಿವು ಆಟಕ್ಕುಂಟು ಲೆಕ್ಕಕ್ಕಿಲ್ಲ ಬಾಲ್ಯದಲ್ಲಿ ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂಬ ಮಾತನ್ನು ಸಾಕಷ್ಟು ಬಾರಿ ಕೇಳಿಸಿಕೊಂಡಿರ್ತೀವಿ ಅಥವಾ ಹೇಳಿರ್ತೀವಿ. ಅದರಲ್ಲೂ, ಸಮಾನ ವಯಸ್ಕ ಗೆಳೆಯರೊಡನೆ ಆಡುವಾಗ, ಚಿಕ್ಕವಯಸ್ಸಿನ ಮಕ್ಕಳು ತಮ್ಮನ್ನೂ ಆಟಕ್ಕೆ ಸೇರಿಸಿಕೊಳ್ಳಿರೆಂದು ಹಠ ಹಿಡಿದಾಗಲೋ ಅಥವಾ ಹಿರಿಯರು ಗದರಿಸಿ ಸಣ್ಣಮಕ್ಕಳನ್ನು ಆಟಕ್ಕೆ ಸೇರಿಸಿ ಹೋದಾಗಲೋ ಈ ಮಾತು ಬಳಕೆಯಾಗಿರುತ್ತೆ. ಎಂದರೆ, ಆಟದ ನಿಯಮಗಳು ಅರ್ಥವಾಗದ, ಅನುಸರಿಸಲಾಗದ ವಯಸ್ಸು ಹಾಗೂ  ಮನಃಸ್ಥಿತಿ ಇರುವವರೊಡನೆ ಗುದ್ದಾಡಿಕೊಂಡು ಆಟದ ಮಜಾ ಹಾಳು ಮಾಡಿಕೊಳ್ಳಲಾರದೆ ,ಅವರೂ ಇದ್ದರೆ ಇರಲಿ […]

ಅರಿತು ಮರೆತು

ಕಾವ್ಯಯಾನ ಅರಿತು ಮರೆತು ಲಕ್ಷ್ಮೀ ಮಾನಸ ನೆರಳ ಬೆಳಕಿನಕದನದಲ್ಲಿ,ಪ್ರತಿಬಿಂಬ ಅರಿಯದದರ್ಪಣವನ್ನು,ನೆರಳು ಎಂದೋ ತೊರೆದರೂ, ಬೆಳಕ ಗೈರುಹಾಜರಿಯಲ್ಲಿ,ಮೋಡ ಕವಿದಬಣ್ಣದ ಬಿಂಬವುಮರುಭೂಮಿಯಲ್ಲಿ ನೀರನ್ನರಸಿಹಾಕುವ ಹೆಜ್ಜೆಗಳುಎದೆಗೂಡಲ್ಲಿ ಪಿಸುಗುಟ್ಟುತ್ತಲಿವೆ..ಕಣ್ರೆಪ್ಪೆಯ ಶಬ್ಬಕ್ಕೆಎದುರುನಿಲ್ಲಲಾಗದೆ….. ಭಾವನೆಯ ಬಳ್ಳಿಯಲ್ಲಿಮುದುಡದ ಕುಸುಮಾಗಳಿಗೆಕಪ್ಪು ವರ್ಣವ ಪೂಸಿದರೂ, ಅರಿತು ಮರೆತು,ಗೀಚಿದ ಗೆರೆಯ ದಾಟಿ,ಕಾರ್ಮೋಡದ ಮಡಿಲಲ್ಲಿನಸುಖ ನಿದ್ರೆಯ ತೊರೆದು, ಬಯಸುತಲಿವೆಮಾತನರಿಯದ ಮೌನವಗೀತೆಯಾಗಿ ಬದಲಿಸಿ,ವಸಂತ ಕೋಗಿಲೆಯೊಡಗೂಡಿಮರೆತ ಹಾಡನ್ನುಮರಳಿ ಹಾಡಲು,ಅರಿತ ರಾಗದಲ್ಲಿಚಿರನಿದ್ರೆಗೆ ಜಾರಲು… ******

ಗಜಲ್

ಗಜಲ್ ಡಾ.ಯ.ಮಾ.ಯಾಕೊಳ್ಳಿ ನನ್ನ ಮಾತುಗಳು ಇಲ್ಲಿ ಅರಿಯದೆ ಹೊಗುತ್ತಿರುವದಕ್ಕೆ ವಿಷಾದವಿದೆಪದದೊಳಗಿನ ಅರ್ಥವೇ ಅಪಾರ್ಥವಾಗಿ ತಿರುಗಿ ಬೀಳುತ್ತಿರುವದಕ್ಕೆ ವಿಷಾದವಿದೆ ಪುಸ್ತಕದ ಸಾಲುಗಳು ವೇದಿಕೆಯ ತುಣುಕುಗಳು ವ್ಯರ್ಥ ಹರಡುತ್ತಿವೆಯಾರ ಎದೆಗೂ ತಟ್ಟದೆ ಅಂತರವುಂಟಾದುದಕ್ಕೆ ವಿಷಾದವಿದೆ ಕಾಲಕಾಲಕ್ಕೂ ಜನಿಸಿದ ಸಂತ ಮಹಂತರ ಜೀವ ತತ್ವಗಾಳಿಗೆ ತೂರಿವೆತೋರಿಕೆಯ ಆಚರಣೆಗಳು ಅವರವರ ಪ್ರತಿಷ್ಟೆಯೆನಿಸಿದ್ದಕ್ಕೆ ವಿಷಾದವಿದೆ ಎದೆಯ ದನಿ ಯಾರಿಗೂ ಕೇಳದೆ ಗಡಚಿಕ್ಕುವ ಅಬ್ಬರದಲ್ಲಿ ಅನಾಥವಾಗಿದೆಕೋಗಿಲೆಯ ಮಧುರ ಹಾಡು ಮೆರವಣಿಗೆಯಲ್ಲಿ ಮೌನವಾದುದಕ್ಕೆ ವಿಷಾದವಿದೆ ಸಾವಿರ ಸಾವಿರ ಪುಸ್ತಕಗಳು ನಾಗೊಂದಿಯ ಮೇಲೆ ಮೌನವಾಗಿ ಅಳುತ್ತಿವೆಯಯಾ ನಿನ್ನ ಲಾಲಿಹಾಡು […]

ಗಝಲ್

ಗಝಲ್ ಶಂಕರಾನಂದ ಹೆಬ್ಬಾಳ ಗುಡಿಯೊಳಗೆ ಕಲ್ಲಾಗಿರುವೆ ದೇವಬತ್ತಳಿಕೆಯಲಿ ಬಿಲ್ಲಾಗಿರುವೆ ದೇವ ಅರಿವಿರದ ಜನ್ಮಕ್ಕೆ ಅನುಭವ ತಂದೆಹಸಿರ ಸೂಸುವ ಹುಲ್ಲಾಗಿರುವೆ ದೇವ ಆತ್ಮಸ್ತೈರ್ಯವ ತುಂಬುತಿರುವೆಯಲ್ಲಅಳುವ ಕಂದನ ಜೊಲ್ಲಾಗಿರುವೆ ದೇವ ಮಡುವಿನ ಮಂಡೂಕವ ಸಲಹಿರುವೆಹಸಿದ ಉದರಕೆ ನೆಲ್ಲಾಗಿರುವೆ ದೇವ ಕಷ್ಟಕಾಲದಿ ಕೈಹಿಡಿಯುವ ಮೃಡಹರನೇಅಭಿನವ ಕವಿಗೆ ಸೊಲ್ಲಾಗಿರುವೆ ದೇವ

ಸೀರೆಯ ಸೆರಗು

ಕಾವ್ಯಯಾನ ಸೀರೆಯ ಸೆರಗು ಶಿವಲೀಲಾ ಹುಣಸಗಿ ಸೀರೆಗೊಂದು ಸೆರಗು ಮನಸಿಗೆ ಮೆರಗುಅತ್ತು ಕರೆವಾಗ ಕಣ್ಣೊರೆಸುವ ಸಾಧನವುಕಂಬನಿಯು ಮುತ್ತಾಗಿ ಅರಳಿದ ಸೊಬಗುಆಟಪಾಟಕೆ ಬೆವೆತ ಮೈಮನಕೆ ಬೆರಗುಬೀಸಕೆಯಾಗಿ ಕೈಯಂಚಲಿಹುದು ಸೆರಗುಆಸತ್ತು ಬೆಸತ್ತ ಬೆವರಿಗಿದೋ ಪ್ಯಾನು!ಅಡಿಗೆಮನೆಯ ಸಿದಾಸಾದಾ ಮಸಿಅರಿವೆತಲೆನೆಂದು ಬಂದವಗೆ ಟವಾಲ್ ಯಿದುನೇಸರನ ತಾಪಕೆ ಕೊಡೆಯಂತೆ ಅರಳಿಹುದುನಾಚಿ ನೀರಾಗೋ ಗಳಿಗೆಗೆ ಬಳ್ಳಿಯಾಗಿಹುದುಹೊಸಬರೆದುರು ಅಸ್ತ್ರದಂತೆ ಈ ಸೆರಗುಉಡಿಯಕ್ಕಿ,ಬಾಗಿನ ಪಡೆವ ಸೌಭಾಗ್ಯವಿದುಹೂಗಳ ಸೆಳೆತಕ್ಕೆ ಬುಟ್ಟಿಯಂತಾಗಿಹುದುತಿಂಡಿತಿಸುಗಳ ಬಚ್ಚಿಡಲು ಜೊತೆಗಿಹುದುತಲಿಮ್ಯಾಲೆ ಗೌರವದ ಕಿರೀಟದಂತಿಹುದುಅಮ್ಮನ ಸೆರಗಿನ ಅಂಚಿಡಿದು ಹೊಂಟರೆವಿಶ್ವಪರ್ಯಟನವಾದಂತೆಯೇ..ಸರಿ!ಸೆರಗೊಂದು ಮಾಂತ್ರಿಕ ದಂಡದಂತೆಗಿರಗಿಟ್ಲಿತರ ಸುತ್ತುವ ಅಪ್ಪನೆ ಚಂದಸಿಟ್ಟಿಗೆದ್ದು ಸೊಂಟಕೆ ಸೆರಗ […]

ವಿ.ಜೇ. ನಾಯಕ ಅವರ ತರುವಾಯ ಜಿಲ್ಲಾ ಘಟಕದ ಅಧ್ಯಕ್ಷಗಾದಿಯೇರಿದ ಟಿ.ಕೇ.ಮಹಮೂದ ಎಂಬ ಹಿರಿಯರು ಇಪ್ಪತ್ತೊಂದು ವರ್ಷಗಳ ಕಾಲ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿಯೂ ಜಿಲ್ಲಾಧ್ಯಕ್ಷರಾಗಲೀ, ತಾಲೂಕು ಘಟಕದ ಅಧ್ಯಕ್ಷರಾಗಿದ್ದ ಹಿರಿಯರಾಗಲೀ, ಅಂಕೋಲಾ ತಾಲೂಕು ಸಾಹಿತ್ಯ ಸಮ್ಮೇಳನ ನಡೆಸುವುದಾಗಲೀ, ಘಟಕವನ್ನು ಕ್ರಿಯಾಶೀಲ ಚಟುವಟಿಕೆಗಳಿಂದ ಮುನ್ನಡೆಸುವುದು ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ.

ನೀನಿನ್ನೂ ಅಪರಿಚಿತನೇನು….?

ಅನುವಾದಿತ ಕವಿತೆ ನೀನಿನ್ನೂ ಅಪರಿಚಿತನೇನು….? ಇಂಗ್ಲೀಷ್ ಮೂಲ-ವಿಜಯಲಕ್ಷ್ಮೀ ಪುಟ್ಟಿ ಕನ್ನಡಕ್ಕೆ-ಸಮತಾ ಆರ್. ನೀನಿನ್ನೂ ಅಪರಿಚಿತನೇನು….? ಇತ್ತೀಚೆಗೆ ಯಾಕೋನೀ ಅಪರಿಚಿತ ಅನಿಸತೊಡಗಿಮತ್ತಿನ್ನೊಮ್ಮೆ ನಂಟು ಬೆಳೆಸಲು ಯತ್ನಿಸಿದರೂಎದೆಯಲ್ಲಿ ಏನೋಪ್ರಶ್ನೆಯೊಂದುತಡಕುತಿದೆಏನಾಯಿತು?ಯಾಕೀ ಕೋಪ?ನನ್ನ ತಪ್ಪೇನು?ಎದುರಾದಾಗ ಹೇಗೆ ದಿಟ್ಟಿಸಲಿ ನಿನ್ನ ಕಣ್ಣ ? ಆದರೂ ಹೊಸ ಭರವಸೆ,ಹೊಸ ಪಯಣ,ಹೊಸ ಪ್ರಮಾಣ ಕಾಯುತಿರುವೆಹೃದಯತುಂಬಿ ನಾ..ಯಾರದೋ ಆಗಮನಅರಿಯದ ತಳಮಳ ಗಲಿಬಿಲಿ ಸುಗಂಧವೊಂದು ಗಾಳಿಯಲಿ ತೇಲಿದಂತೆ ನಿನ್ನ ಸಾವಿರಾರು ನೆನಪುಗಳು. ಇಂದೇನಿದು ನನ್ನಲ್ಲಿ,ಯಾವತ್ತೂ ನಾನರಿಯದ ಈ ಚಡಪಡಿಕೆ.ಹಿಂದೆಂದೂ ಇರದಿದ್ದ ಮನೋಕಾಮನೆ.ಕಾತುರದ ಕಂಗಳು ಹುಡುಕುತ್ತಿವೆ ನಿನ್ನನ್ನೇ.ಎನ್ನ ಜೀವನದ ಹೊತ್ತಿಗೆಯ ಚಿತ್ರಪಟವಾದಅವನಿಗಾಗಿ […]

ನಿರಾಕರಣ

ಕಥೆ ನಿರಾಕರಣ ಎಸ್.ನಾಗಶ್ರೀ ರಾಮಕ್ಕನವರು ಅವರ ರೇಷ್ಮೆಸೀರೆಗಳನ್ನೆಲ್ಲಾ ನೆಂಟರಿಷ್ಟರಿಗೆ, ಆಪ್ತರಿಗೆ ಹಂಚಿ ಇನ್ನು ಮೇಲೇನಿದ್ದರೂ ಹತ್ತಿ ಸೀರೆಯಷ್ಟೇ ಉಡುವುದೆಂಬ ನಿರ್ಧಾರ ಪ್ರಕಟಿಸಿದಾಗ ಅವರಿಗೆ ಎಪ್ಪತ್ತೈದಾಗಿತ್ತು. ಹಾಲಿಗೆ ಅರಿಶಿನ ಬೆರೆಸಿದಂತಹ ಮೈಬಣ್ಣ, ಕಡುಗಪ್ಪು ಕಣ್ಣು, ತುಸು ಉದ್ದವಾದ ಮೂಗು, ತುಂಬುದುಟಿ, ಪುಟ್ಟ ಚೆಂಡಿನ ಗಾತ್ರದ ತುರುಬಿನ ರಾಮಕ್ಕ ನೋಡಿದರೆ, ಮತ್ತೆ ತಿರುಗಿ ನೋಡಬೇಕೆನ್ನಿಸುವ ಲಕ್ಷಣವಂತೆ. ಮುತ್ತೈದೆಯಾಗಿದ್ದಾಗಿನ ಕಾಲದಲ್ಲಿ ಮಹಾಲಕ್ಷ್ಮಿಯೇ ಎಂದು ಜನ ಕೈಯೆತ್ತಿ ಮುಗಿಯುತ್ತಿದ್ದರಂತೆ. ಕರಿಮಣಿ ಸರ, ಕಾಲುಂಗುರ ತೆಗೆದರೂ ಚಿನ್ನದ ಸರ, ವಜ್ರದ ಮೂಗುತಿ, ಚಿನ್ನದ ಎರಡೆರಡು […]

Back To Top