ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ದೇವರ ಕೊಡುಗೆಗಳು.

ಇಂಗ್ಲೀಷ್ ಕವಿತೆಯೊಂದರ ಭಾವಾನುವಾದ

God”s gifts – Alon calunao

ಎಂ. ಅರ್. ಅನಸೂಯ

ನೀಡಿದನು ದೇವರೆನಗೆ ಲೇಖನಿ ಮತ್ತು ಕಾಗದವ ಬರೆಯಲು
ದಯಪಾಲಿಸಿದನು ದೇವರೆನಗೆ ಜ್ಞಾನವ
ಹಂಚಲು
ಇತ್ತನು ದೇವರೆನಗೆ ಪ್ರೀತಿಸುವ ಹೃದಯವ
ಕ್ಷಮಿಸಲು
ಒದಗಿಸಿದನು ದೇವರೆನಗೆ ಹೊಸ ಜೀವನವ
ಸಜ್ಜನನಾಗಲು
ವರವಾಗಿತ್ತನು ದೇವರೆನಗೆ ಅದ್ಭುತ ಕುಟುಂಬವ
ಪ್ರೀತಿ ಮಾಡಲು.
ವೃದ್ಧಿಸಿದನು ದೇವರೆನಗೆ ಸಿರಿಸಂಪತ್ತನು
ವಿವೇಕದಿ ವ್ಯಯಿಸಲು
ಕೊಟ್ಟನು ದೇವರೆನಗೆ ಕಡು ಕ್ಲೇಶಗಳ
ನನ್ನನ್ನು ಗಟ್ಟಿಗೊಳಿಸಲು
ಅನುಗ್ರಹಿಸಿದನು ದೇವರೆನಗೆ ಅಧಿಕಾರವ
ಕೆಡುಕನ್ನು ಖಂಡಿಸಲು
ಕರುಣಿಸಿದನು ದೇವರೆನಗೆ ಘನ ವೃತ್ತಿಯ
ಅಸ್ವಸ್ಥರ ಆರೈಸಲು
ದಯಪಾಲಿಸುತ್ತಾನೆ ದೇವರೆನಗೆ ಜೀವನದಿ
ನಾ ಬಯಸಿದ್ದೆಲ್ಲವನು


About The Author

Leave a Reply

You cannot copy content of this page

Scroll to Top