ಗಝಲ್
ಶಂಕರಾನಂದ ಹೆಬ್ಬಾಳ
ಗುಡಿಯೊಳಗೆ ಕಲ್ಲಾಗಿರುವೆ ದೇವ
ಬತ್ತಳಿಕೆಯಲಿ ಬಿಲ್ಲಾಗಿರುವೆ ದೇವ
ಅರಿವಿರದ ಜನ್ಮಕ್ಕೆ ಅನುಭವ ತಂದೆ
ಹಸಿರ ಸೂಸುವ ಹುಲ್ಲಾಗಿರುವೆ ದೇವ
ಆತ್ಮಸ್ತೈರ್ಯವ ತುಂಬುತಿರುವೆಯಲ್ಲ
ಅಳುವ ಕಂದನ ಜೊಲ್ಲಾಗಿರುವೆ ದೇವ
ಮಡುವಿನ ಮಂಡೂಕವ ಸಲಹಿರುವೆ
ಹಸಿದ ಉದರಕೆ ನೆಲ್ಲಾಗಿರುವೆ ದೇವ
ಕಷ್ಟಕಾಲದಿ ಕೈಹಿಡಿಯುವ ಮೃಡಹರನೇ
ಅಭಿನವ ಕವಿಗೆ ಸೊಲ್ಲಾಗಿರುವೆ ದೇವ