ಕವಲೊಡೆದ ದಾರಿ

ರಾಬರ್ಟ್ ಪ್ರಾಸ್ಟ್ ಅವರ ಕವಿತೆಯ

ಕನ್ನಡಾನುವಾದ

ಗಣೇಶ್ ವಿ.

ಕವಲೊಡೆದ ದಾರಿ

ಪಯಣಿಸುವ ದಾರಿಯಲಿ ಕವಲೆರಡು ಒಡೆದಿತ್ತು
ಒಂಟಿ ಪಯಣಿಗ ನಾನು ನೋಡುತ್ತ ನಿಂತೆ
ನಾನೆರಡು ದಾರಿಯ ಚಲಿಸುವಂತಿರಲಿಲ್ಲ
ತುದಿಕಾಣದಾ ಆ ಪಥವು ಓಡುತ್ತಲಿತ್ತು
ಅನತಿ ದೂರದವರೆಗೆ ಅದು ಮಿಂಚುತ್ತಲಿತ್ತು

ಮತ್ತೊಂದು ಮಾರ್ಗವನು ತುಳಿಯುತ್ತ ನಾ ಹೊರಟೆ
ಬದುಕಿನೊಳಗೊಂದು ಹೊಸತನವ ಕಾಣಲು
ತುಸು ತುಳಿದ ಪಥವೆಂದೆಣಿಸುತ್ತ ನಾ ಚಲಿಸಿದರೆ
ನಡೆಯುತ್ತ ನಡೆಯುತ್ತ ಸತ್ಯವೊಂದನು ಅರಿತೆ
ಎಲ್ಲಾ ಪಯಣದೊಳಗಿರುವ ತಿರುಳೊಂದೇ ಎಂದು.

ಅಂದು ಬೆಳಗಿನ ಝಾಮ ಕವಲೊಡೆದ ಹಾದಿಯಲಿ
ಮೊದಲನೆಯ ಮಾರ್ಗವನು ಮತ್ತೊಂದು ದಿನಕುಳಿಸಿ
ಎರಡನೆಯ ಮಾರ್ಗವನು ತುಳಿಯುತ್ತ ನಾ ಬಂದೆ
ಹಾದಿಗೆ ಹಾದಿ ಯೇ ಹಾದಿ ತೋರುತ ಹೊರಟಾಗ
`ಮರಳಿ ಬರಲೇ?’ ಎಂದು ಮನವು ತವಕಿಸುತಲಿತ್ತು

ಇಷ್ಟು ವರುಷದ ಬಳಿಕ ದುಗುಡದಿಂದಲೆ ನುಡಿವೆ
ಬದುಕಿನ ಹಾದಿಯಲಿ ಕವಲೆರಡು ಒಡೆದಿತ್ತು
ತುಸುತುಳಿದ ಪಥವೆಂದೇ ತುಳಿಯುತ್ತ ನಾ ಬಂದೆ
ಅದುವೆ ಕಾರಣವಾಯ್ತು ಹೊಸಬಗೆಯ ಬದುಕಿಗೆ.


***************************

Road not taken By Rober Frost

Leave a Reply

Back To Top