ಕವಿತೆ
ಮೌನ
ತಿಲಕ ನಾಗರಾಜ್ ಹಿರಿಯಡಕ
ನಾನು ಸುಮ್ಮನಿದ್ದೆ
ನೀನೂ ಸುಮ್ಮನಾದೆ
ನಿನ್ನೆದೆಯ ಭಾವಾಂತರಂಗದ
ತುಡಿತಗಳ ಅರಿವ
ತವಕ ನನ್ನೊಳಗಿತ್ತು…
ದಿನ ಕಳೆಯುತ್ತಲೇ ಹೋಯಿತು
ಜಡಿದ ಮೌನದ ಬೀಗ
ಬಿಚ್ಚದೆ ಅಲ್ಲೇ ತುಕ್ಕು
ಹಿಡಿದಿತ್ತು..
ಜತೆಗೆ ಹಿಡಿದ ಹಠವೂ
ಕರಗದೆ ಹೆಪ್ಪುಗಟ್ಟಿತ್ತು..
ನೀ ಸೋಲುವೆಯೋ?
ಇಲ್ಲ ನಾನೋ?
ಇಲ್ಲ ಯಾರಿಗೂ ಸೋಲುವ
ಮನಸ್ಸಿಲ್ಲದೆ ಬದುಕು
ಕವಲು ದಾರಿಯಲ್ಲಿ ಸಾಗಿತ್ತು
ನೀ ಎಲ್ಲೋ… ನಾ ಇನ್ನೆಲ್ಲೋ..
*************************