ವಾರದ ಕವಿತೆ
ಆಟ
ದೀಪ್ತಿ ಭದ್ರಾವತಿ
ಸಾವಿನ ಆಟವಾಡುವಾಗ
ನಿಶ್ಯಬ್ಧ ನಿಶ್ಯಬ್ಧ ಮತ್ತು ನಿಶ್ಯಬ್ಧ
ತೂಕದ ತೋಳುಗಳ
ಹವಣಿಕೆಗೆ ನಿಲುಕದ್ದು
ಯಾವುದಿದೆ ಇಲ್ಲಿ?
ಮರೆ ಮರೆವ ಆಟ
ಬಿಟ್ಟು ಹೋಗುವ ಆಟ
ಸುತ್ತೆಲ್ಲ ಸಮಚಿತ್ತದಲಿ
ಕೂತ ಕೊಕ್ಕೆಗಳ
ನೂರು ಚಿತ್ತಾರಕೆ
ಇಹಪರದ ತರತಮವೆಲ್ಲಿ?
ಜೊತೆಗಿದ್ದವರು ಕೈ ಬೀಸುವ
ಬೆನ್ನು ಬಿದ್ದವರು
ಹೆಗಲು ನೀಡುವ ಸಾಕಾರ ಕ್ರಿಯೆಗಿಲ್ಲಿ
ಸಾವಿರದ ಸಾಸಿವೆ ದೀಕ್ಷೆ
ಬಿಟ್ಟು ಬಿಡುವ ರೆಕ್ಕೆಗಳ
ಪೇರಿಸಿಟ್ಟುಕೊಳ್ಳುವ ಸಾಹಸಕ್ಕೆ
ತುದಿ ಮೊದಲೇ ಭಾವ ಭಂಗಿ?
ಆದಿ ಅನಾದಿಗಳ ಲಕ್ಷ ಪ್ರಶ್ನೆಗೆ
ಉತ್ತರ ಹುಡುಹುಡುಕಿ ಸೋತವರ
ಪಟ್ಟಿಯೊಂದೆ
ಜಗದ ಜಂತಿಯಲಿ ನೇತು
ಬೀಳುವ
ಹೊಸ ಅಂಗಿ
******************************
ಕಾಡಿದ ಕವಿತೆ
Super deepthi
Very nice
Shanthala
ಚಂದವಿದೆ
ಉತ್ತಮ ಕವಿತೆ ಮತ್ತೆ ಮತ್ತೆ ಕಾಡುವಂಥದ್ದು.