ದೀಪಗಳ ಸಾಲು

ಕವಿತೆ

ದೀಪಗಳ ಸಾಲು

ಸುವಿಧಾ ಹಡಿನಬಾಳ

Butter lamps with flames. Near Bodhnath stupa in Gandan Monastery of Gelug Sect, Tibetan buddhism, lhasa stock photography

ಹಚ್ಚೋಣ ಸುತ್ತೆಲ್ಲಾ ದೀಪಗಳ ಸಾಲು
ಹೊದೆಸೋಣ ಎಲ್ಲರಿಗೂ ಪ್ರೀತಿಯ ಶಾಲು

ಬೆಳಕಿಂದೆ ಜಗವು ಬೆಳಗುತಿಹುದು
ಅನ್ಯಾಯ ಹಿಂಸೆಯಲಿ ದಹಿಸುತಿಹುದು
ಜ್ಞಾನದ ಬೆಳಕಿನಲಿ ತೆರೆಯಲಿ
ಕಣ್ಣು
ವಾಸಿಯಾಗಲಿ ಮನದ ಕಲ್ಮಶದ ಹುಣ್ಣು

ಜಗವ ಹಿಂಡುತಿಹ ‌ಅನಾರೋಗ್ಯ ದೂರಾಗಲಿ
ಎಲ್ಲರೂ ತಿಂದುಂಡು ನೆಮ್ಮದಿಯಾಗಿರಲಿ

ನೆಲಕಚ್ಚಿದ ಆರ್ಥಿಕತೆ ಮತ್ತೆ ಚೈತನ್ಯಗೊಳ್ಳಲಿ
ದುಡಿಯುವ ಕೈಗಳಿಗೆ ಕೆಲಸವು ಲಭಿಸಲಿ

ದಿನವೂ ಮೊರೆವ ಬಾಂಬು ಗುಂಡುಗಳ ಸದ್ದಡಗಲಿ
ಆತಂಕವಾದಿಗಳ ಹೃದಯದ ಕತ್ತಲೆ ಕಳೆಯಲಿ

ಬದುಕೆಂಬ ಅನಿಶ್ಚಿತ ಪಯಣದಲಿ
ಸಕಲರ ಸಹಕಾರ ಋಣಭಾರವಿದೆ
ಏಕೆ ವ್ಯಾಜ್ಯ, ಕಲಹ ಜೀವನದಲಿ
ಪಯಣ ಸಾಗಲಿ ಹೊಂದಾಣಿಕೆ ಸಮರಸದಲಿ

ಒಂದು ಸುದೀರ್ಘ ಸಂಕಟವ
ಕಳೆದು ಬಂದಿದೆ ದೀಪಾವಳಿ
ಮನೆ ಮನೆಯಲಿ ನೆಲೆಗೊಳ್ಳಲಿ
ಶಾಂತಿ ಸಂಭ್ರಮದ ರಂಗವಲ್ಲಿ

*********************************

2 thoughts on “ದೀಪಗಳ ಸಾಲು

Leave a Reply

Back To Top