ಕವಿತೆ
ದಿವ್ಯ ಅನಿಕೇತನ
ನೂತನ
ದೇಹ ಆತ್ಮಗಳು ಮಾತಾಡಿಕೊಂಡವು
ನನ್ನೊಳಗೆ ನೀನೊ
ನಿನ್ನೊಳಗೆ ನಾನೊ?
ಯಾರೊಳಗೆ ಯಾರಿದ್ದರೇನು
ಇದ್ದೂ ಇರದಂತೆ ಇರುವವರೆಷ್ಟಿಲ್ಲ !
ರೇಷಿಮೆಯ ಸಣ್ಣ ಅಂಚಿನ ಪತ್ತಲ
ನಿಟ್ಟುಸಿರ ಬಿಡುವುದ ಕಾಣದಂತೆ
ನಾವೀರ್ವರು ಒಂದಾದ ಕ್ಷಣಕ್ಕೆ
ಹುಣ್ಣಿಮೆಯೇ ಸಾಕ್ಷಿ
ಛಾಯೆ ಕನವರಿಸುತ್ತಾಳೆ
ನೂರ್ಕಾಲದ ಬಾಳಿಗೆ
ಹೊರನೋಟಕ್ಕೆ ಒಂದಾದರೆ
ಒಳ ಹರಿವಿಗೆ ಒಂದು
ನಾನು ನೀನೆಂಬ
ಗಡಿಯಿರದ ಗೂಡಿನಲಿ
ಜೇನು ಸವಿ ಹೀರಲು
ದೇಹದೊಲುಮೆಯಲಿ
ಆತ್ಮಜ್ಯೋತಿ ಬೆಳಗಬೇಕು ಸದಾ
ಆತ್ಮ ಬಿರಿದು ಕಣಕಣದಲಿ ಬೆಳೆದು
ಮಿಲನವ ಮೀರಿ ನಿಂತು
ಈಗ ಸರ್ವವ್ಯಾಪಿ
ಬೇಧವಿರದ, ಬಂಧವೂ ಇರದ
ದಿವ್ಯ ಅನಿಕೇತನ
**************************
ಪ್ರಕಟಣೆಗೆ ಧನ್ಯವಾದಗಳು ಸಂಗಾತಿ .
ಚೆನ್ನಾಗಿದೆ,ಅಭಿನಂದನೆಗಳು.
ಮನದ ಭಾವನೆಯನ್ನು ಚೆನ್ನಾಗಿ ವ್ಯಕ್ತಪಡಿಸಿದ್ದಿ. ನೂತನ ಅಭಿನಂದನೆಗಳು