ಭೂತಾಯಿಗೆ ನಮನ
ಲೇಖನ ಭೂತಾಯಿಗೆ ನಮನ ರಾಘವೇಂದ್ರ ಈ ಹೊರಬೈಲು ಇವತ್ತು ರಾತ್ರಿಯೆಲ್ಲಾ ಎಚ್ರಾಗಿರ್ಬೇಕು, ಮಲಗ್ಬಿಟ್ಟಿಯೋ. ರಾತ್ರಿಯೆಲ್ಲ ಹಬ್ಬ ಮಾಡ್ಬೇಕು, ಹಬ್ಬದಾಗೆ ಎಚ್ರಾಗಿರ್ದೆ ಹಂಗೆ ಮಲ್ಗಿದ್ರೆ ದೇವ್ರು ಶಾಪ ಕೊಡ್ತಾನೆ ಕಣೋ” ನಾನು ಚಿಕ್ಕ ಹುಡುಗನಾಗಿದ್ದಾಗ ನಮ್ಮಮ್ಮನಾಡಿದ ಮಾತುಗಳು ಎಂದಿಗೂ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಕುಳಿತಿವೆ. “ಇದ್ಯಾವ ಹಬ್ಬನಪ್ಪ, ರಾತ್ರಿಯೆಲ್ಲ ಎಚ್ರಾಗಿರ್ಬೇಕಂತೆ” ಎಂದು ಗೊಣಗುಟ್ಟುತ್ತಾ ತೂಕಡಿಸುತ್ತಾ, ಅಮ್ಮನೋ ಅಪ್ಪನೋ ಹೇಳ್ತಾಯಿದ್ದ ಸಣ್ಣಪುಟ್ಟ ಕೆಲಸಗಳನ್ನು ಒಲ್ಲದ ಮನಸ್ಸಿನಿಂದ ನಿದ್ರೆಗಣ್ಣಿನಲ್ಲೇ ಮಾಡುತ್ತಾ, ಕೆಲವೊಮ್ಮೆ ಹೆಚ್ಚು ಕಡಿಮೆಯಾಗಿ, ಬೈಸಿಕೊಳ್ಳುತ್ತಾ ರಾತ್ರಿ ಕಳೆಯುತ್ತಿದ್ದ ಆ ದಿನಗಳನ್ನು […]
ಗಝಲ್
ಗಝಲ್ ಸುಜಾತಾ ರವೀಶ್ ಅಕ್ಷರದ ಪಯಣಕ್ಕೆ ಒಂದಾಗಿ ಹೊರಡೋಣ ಬರುವೆಯಾ ಸಂಗಾತಿ ಅಕ್ಷಯದ ಒಲವಿನ ಸುಗಮ ಸಂಪ್ರೀತಿಯನು ತರುವೆಯಾ ಸಂಗಾತಿ ಶಬ್ದಗಳ ಮಾಲೆಯನ್ನು ಕಟ್ಟುತಾ ಹಾಕೋಣವೇ ಕನ್ನಡಮ್ಮನಿಗೆ ಹಾರ? ಪದಗಳ ಅಡಿಪಾಯ ನೆಡಲು ಶ್ರಮದಕಲ್ಲ ಹೊರುವೆಯಾ ಸಂಗಾತಿ ಸಾಹಿತ್ಯದ ತೇರನೆಳೆಯುತ ಮುಂದಡಿ ಇಡುತಲಿ ಸಾಗೋಣವೇ? ಸಾಂಗತ್ಯದ ಭರವಸೆ ಕೊಡುತ ಬಾಳಗಮ್ಯ ಸೇರುವೆಯಾ ಸಂಗಾತಿ ಕುಶಲ ಕರ್ಮಿಯಂತೆ ಮಾಡೋಣ ಚಿತ್ತಾರದ ಕುಸುರಿ ಕೆಲಸ ವಿಶಾಲ ಪುಸ್ತಕಗಳ ಆಗಸದಿ ನನ್ನೊಡನೆಯೇ ಹಾರುವೆಯಾ ಸಂಗಾತಿ ಅನನ್ಯವು ಕಾವ್ಯಪ್ರಪಂಚ ವಿಸ್ಮಯ ವಿನೂತನ ವಿಹಾರವಿದು ಅಮೂಲ್ಯವು ಸುಜಿಗೆ ಓದುವಿಕೆ ಕಡೆವರೆಗೂ ಇರುವೆಯಾ ಸಂಗಾತಿ *****************************
ಕನ್ನಡಮ್ಮನ ಬೆಡಗು
ಕವಿತೆ ಕನ್ನಡಮ್ಮನ ಬೆಡಗು ವೀಣಾ ರಮೇಶ್ ಕರುನಾಡು ನನ್ನದುಕನ್ನಡವದೇ ಸಾಕುನನಗೆ ಬಿರುದುಸಂಸ್ಕೃತಿಯ ತವರಿದುಹಸಿರು ಸಿರಿಯಶೃಂಗಾರದಲಿ ಬಿರಿದು ಧೀರ ಶರಧಿಯ ಬಗೆದುಕವಿಶ್ರೇಷ್ಠ ರ ಆಗೆದುಸಾಹಿತ್ಯ ಶಿಖರದನೆತ್ತಿಯಲಿ ಇಳಿದುಹರಿಸಿದಳು ಅಕ್ಷರಧಾರೆಮೊಗೆ ಮೊಗೆದು ಮಲೆನಾಡ ಕಾಡಲ್ಲಿಕಂಗೊಳಿಸಿದ ಸುಂದರಿರಸಋಷಿಗೆ ಜ್ಞಾನಪೀಠದಹೆಮ್ಮೆಯ ಗರಿನಾಲ್ಕು ತಂತಿಗಳಲಿಮೀಟಿದ ನಾದಲಹರಿನಮ್ಮ ವರಕವಿ ಶಿಲ್ಪಕಲೆ,ಬೇಲೂರು ಹಳೇಬೀಡಿನ ಬೆಡಗುರಾಜ ವೈಭೋಗದಮೈಸೂರಿನ ಸೊಬಗುಹಂಪಿಯ ಸುವರ್ಣ ಯುಗ ಕನ್ನಡಾಂಬೆಯಮೆರುಗು. ಯಕ್ಷ ಪ್ರೇಮಿಗಳ ಹೃದಯದಲಿಯಕ್ಷಗಾನದ ಹೆಜ್ಜೆಗಳಲಿಮದ್ದಳೆಯ ಸದ್ದಲ್ಲಿಕುಣಿಯಿತು ಯಕ್ಷಗಾನಕಾರಂತರ ಹೆಜ್ಜೆಗಳಲಿ ಎಲ್ಲೆಲ್ಲೂಮೊಳಗಲಿ ನಿನ್ನ ಕಹಳೆಸಮರಸದ ಸಹಬಾಳ್ವೆಬೆಳಗಲಿ ,ಹರಡಲಿಕನ್ನಡ ದೇವಿಯಪ್ರಭಾವಳಿ **********
ಉಪಯೋಗಿಸೋಣ, ಉಳಿಯೋಣ
ಲೇಖನ ಉಪಯೋಗಿಸೋಣ, ಉಳಿಯೋಣ ಶಾಂತಿವಾಸು ನಮ್ಮ ದೇಶದ ಪ್ರತಿ ರಾಜ್ಯವೂ ಅದರದೇ ಆದ ವೈಶಿಷ್ಟ್ಯ ಹಾಗೂ ಹಲವಾರು ಪದ್ಧತಿಯ ಆಚರಣೆಗಳು ಇರುವಂತೆ ನಮ್ಮ ಕರ್ನಾಟಕದ ನೆಲದ ಮೇಲಿನ ಪ್ರತಿಯೊಂದು ಪಂಗಡಗಳಿಗೆ, ಜಾತಿಗಳಿಗೆ, ಪ್ರಾಣಿಗಳು, ಜಾನುವಾರುಗಳಿಗೆ, ವಸ್ತುಗಳಿಗೆ ಹೀಗೆ ಎಲ್ಲಕ್ಕೂ ಪ್ರತ್ಯೇಕ ಹಬ್ಬಗಳಿವೆ. ಬೇರೆ ಬೇರೆ ಪ್ರದೇಶಗಳು ಹಾಗೂ ರಾಜ್ಯಗಳಿಂದ ಜೀವನವನ್ನರಸಿ ಬಂದು ನೆಲೆ ಕಂಡುಕೊಂಡ ಲಕ್ಷಾಂತರ ಜನರ ನೆಮ್ಮದಿಯ ನಮ್ಮ ಕರುನಾಡು, ಬಂದವರು ನಮ್ಮವರೇ ಎನ್ನುವ ಔದಾರ್ಯ ಮೆರೆದು, “ಬದುಕು, ಬದುಕಲು ಬಿಡು” ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ವಿಭಿನ್ನ […]
ರಾಜ್ಯೋತ್ಸವದ ಶುಭಾಶಯಗಳು
ಪ್ರಿಯರೆ, ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತಿದ್ದೇವೆ. ಕರ್ನಾಟಕ ಹಾಗೂ ಅದಕ್ಕೂ ಮೊದಲು ವಿಶಾಲ ಮೈಸೂರು ಎಂಬ ಹೆಸರು ಮತ್ತು ಒಗ್ಗೂಡುವಿಕೆಯ ಹಿಂದಿನ ಇತಿಹಾಸ ಅರಿಯುವುದು ಲೇಖಕರಾದ ನಮ್ಮೆಲ್ಲರ ಹೊಣೆ. ೧೯೦೫ ರಿಂದ ೧೯೨೦ ರ ಸಮಯದಲ್ಲಿ ಕನ್ನಡ ಮಾತಾಡುವ ಪ್ರದೇಶದ ಒಗ್ಗೂಡುವಿಕೆಯ ಹೋರಾಟ ಸಹ ಆರಂಭವಾಯಿತು. ಕರ್ನಾಟಕ ವಿದ್ಯಾವರ್ದಕ ಸಂಘ ಹಾಗೂ ಕನ್ನಡ ಸಾಹಿತ್ಯ ಪರಿಷತ್ತನ ಹೋರಾಟವೂ ಕನ್ನಡ ಮಾತಾಡುವ ಪ್ರದೇಶಗಳ ಒಗ್ಗೂಡಿಸುವಿಕೆಯಲ್ಲಿದೆ. ಮದ್ರಾಸ್ , ಹೈದರಾಬಾದ್, ಮುಂಬಯಿ ಪ್ರಾಂತಗಳಲ್ಲಿ ಹರಿದು ಹಂಚಿ ಹೋಗಿದ್ದ ಕನ್ನಡ ನಾಡು ಒಗ್ಗೂಡುವಿಕೆಯಲ್ಲಿ […]