Month: August 2020

ನೂರು ಪದಗಳಮೂರು ಕಥೆಗಳು

ಕಥೆಗಳು ಡಾ.ಪ್ರೇಮಲತ ಬಿ. ಸಮಸ್ಯೆ ಆ ಮನೆಯಲ್ಲಿದ್ದ ಎಲ್ಲರೂ ಚಿಂತಾಕ್ರಾಂತರಾಗಿದ್ದರು. ವಿಷಯವೂ ಗಂಭೀರದ್ದೇ ಆಗಿತ್ತು. ಸಮಸ್ಯೆಯ ಜಾಡನ್ನಿಡಿದು ಅದು ಹೇಗೆ ಶುರುವಾಯ್ತು, ಹೇಗೆ ಬೆಳೆಯಿತು ಎಂದು ಮತ್ತೆ ಮತ್ತೆ ಎಷ್ಟು ಯೋಚಿಸಿದರೂ ಅದಕ್ಕೊಂದು ಉತ್ತಮ ಪರಿಹಾರ ಹೊಳೆದಿರಲಿಲ್ಲ. ಒಂದು ರೀತಿಯ ಒಪ್ಪಂದಮಾಡಿಸಿದರೆ, ನಿಮ್ಮಿ ಮತ್ತು ಶೈಲಜಾರ ಬದುಕು ಹಸನಾಗುತ್ತಿತ್ತು ಆದರೆ ರಾಘವನಿಗೆ ಘೋರ ಅನ್ಯಾಯವಾಗುತ್ತಿತ್ತು. ರಾಘವನ ಕಡೆ ವಾಲಿದರೆ ಇಡೀ ಸ್ತ್ರೀ ಕುಲಕ್ಕೇ ಮಸಿ ಬಳೆವಂತ ಪರಿಹಾರ ಹೇಳಿದ ಪಾಪ  ವೆಂಕಣ್ಣಯ್ಯನ ಹೆಗಲೇರಿ ಕಾಡುತ್ತಿತ್ತು. ಈ ಸಂದಿಗ್ದದಲ್ಲಿ […]

ವೃತ್ತಿಯಷ್ಟೇ ಹವ್ಯಾಸ ಮುಖ್ಯ

ಲೇಖನ ಚಂದಕಚರ್ಲ ರಮೇಶ ಬಾಬು ವೃತ್ತಿ ಅಂದರೆ ನಾವು ಜೀವನಕ್ಕಾಗಿ ಆರಿಸಿಕೊಂಡ ಕೆಲಸ. ಆ ಕೆಲಸದಲ್ಲಿ ನಮಗಿಷ್ಟವಿಲ್ಲದಿದ್ದರೂ ಹೊಟ್ಟೆ ಹೊರೆಯುವುದಕ್ಕಾಗಿ ಮಾಡಲೇಬೇಕಾದ ಅನಿವಾರ್ಯತೆ ಇರುತ್ತದೆ. ಮೇಲಧಿಕಾರಿಯ ದಬ್ಬಾಳಿಕೆ, ಅಲ್ಲಲ್ಲಿ ವರ್ಗಾವಣೆ, ಗ್ರಾಹಕರ ಜೊತೆ ಘರ್ಷಣೆ, ಸಹೋದ್ಯೋಗಿಗಳ ಕಿರುಕುಳ ಇವೆಲ್ಲ ವೃತ್ತಿಯ ಜೊತೆಯಿದ್ದು, ನಾವು ಗಳಿಸುವ ಸಂಬಳದ ಜೊತೆ ಬಂದು ಬೀಳುವ ಅಡ್ಡ ಒತ್ತಡಗಳು. ಇವನ್ನೆಲ್ಲ ತೂಗಿಸಿಕೊಂಡು ಹೋಗಲೇಬೇಕಾದ ಅನಿವಾರ್ಯತೆ. ಆಗ ನಮಗೆ ಗೊತ್ತಿಲ್ಲದೆಯೇ ನಮ್ಮಲ್ಲಿ ಒತ್ತಡ ಜಾಸ್ತಿಯಾಗುತ್ತದೆ. ಮನೆ, ಮಡದಿ, ಮಕ್ಕಳು ಮನೆಯಲ್ಲಿಯ ನೆಮ್ಮದಿ ಸ್ವಲ್ಪ ಮಟ್ಟಿಗೆ […]

ಜೀವನ ಪೂರ್ತಿ ಜೀವದ ಗೆಳೆಯ

ಜಯಶ್ರೀ ಜೆ.ಅಬ್ಬಿಗೇರಿ ಅದೆಷ್ಟೋ ದಿನಗಳಿಂದ ಹಗಲು ರಾತ್ರಿ ಪ್ರಯತ್ನಿಸಿದರೂ ನಿನ್ನನ್ನು ಮರೆಯಲಾಗುತ್ತಿಲ್ಲ. ನಿನ್ನ ನೆನಪುಗಳು ತಲೆಯಿಂದ ಆಚೀಚೆ ಕದಲದೇ ಕರಗದ ಗುಡ್ಡದಂತೆ ಕುಳಿತುಕೊಂಡು ಬಿಟ್ಟಿವೆ. ಅದ್ಯಾಕೋ ಮರೆಯಲಾಗುತ್ತಿಲ್ಲ. ಮರೆಯಬೇಕೆಂದಷ್ಟು ಹಟ ಹಿಡಿದರೂ ನಾ ಮುಂದು ತಾ ಮುಂದು ಎಂದು ಮನಃಪಟಲದ ಮೇಲೆ ನೆನಪಿಗೆ ಬಂದು ಕಾಡುತ್ತವೆ. ಹೀಗೇಕೆ? ಅಂತ ಹೃದಯ ನೂರಾರು ಬಾರಿ ಪ್ರಶ್ನಿಸಿದರೂ ಮನಸ್ಸು ತನ್ನ ಮಾತುಗಳನ್ನು ಹೇಳಲಾಗದೇ ತನ್ನ ನಾಲಿಗೆಗೆ ದೊಡ್ಡದೊಂದು ಬೀಗ ಹಾಕಿಕೊಂಡು ತನ್ನೊಳಗೆ ಮಾತುಗಳನ್ನು ಬಂಧಿಸಿಟ್ಟು ಮೌನದಲ್ಲೇ  ಕ್ಷಣ ಕ್ಷಣವೂ ನನ್ನನ್ನು […]

ಕಸಾಪಗೆ ಮಹಿಳಾ ಅಧ್ಯಕ್ಷರು

ಮಹಿಳಾ ಅಧ್ಯಕ್ಷರು ಸಾಹಿತ್ಯ ಪರಿಷತ್ ಅಧ್ಯಕ್ಷರಾಗುವದು ಗೌರವದ ಸಂಕೇತ ಕನ್ನಡ ಸಾಹಿತ್ಯ ಸೇವೆಯ ದ್ಯೇಯದಡಿ ಕನ್ನಡ ಸಾಹಿತ್ಯ ಪರಿಷತ್ ನೂರು ವರ್ಷದ ಸಂಭ್ರಮದಲ್ಲಿರುವದು ಅತ್ಯಂತ ಸಂತಸದ ಸಂಗತಿ. ಈಗಾಗಲೇ ಅನೇಕ ಸಾರಥಿಗಳು ಸಾಹಿತ್ಯ ಪರಿಷತ್ ಆಳಿದ್ದು ತಮಗೆಲ್ಲ ಗೊತ್ತಿರುವ ಸಂಗತಿ ಪ್ರಸ್ತುತ ಶ್ರೀ ಮನು ಬಳಿಗಾರ ಸೇರಿದಂತೆ ಅನೇಕರು ಇಲ್ಲಿ ಅಧ್ಯಕ್ಷೀಯ ಸೇವೆ ಸಲ್ಲಿಸಿದ್ದನ್ನು ಸ್ಮರಿಸಬಹುದು. ಜೊತೆಗೆ ಈ ನಡುವೆ ಗಮನಿಸಬೇಕಾದದ್ದು ಮಹಿಳೆಯರೊಬ್ಬರು ಇನ್ನು ಅಧ್ಯಕ್ಷರಾಗದೆ ಇತಿಹಾಸ ಸ್ರಷ್ಟಿಸದ ವಿಚಾರ. ಈ ದೇಶವನ್ನೇ ಆಳಿದ ಮಹಿಳಾ ಪ್ರಧಾನಿಗಳು […]

ಕಸಾಪಗೆ ಮಹಿಳಾ ಅಧ್ಯಕ್ಷರು???

ಹತ್ತಿರ ಬರುತ್ತಿರುವ ಕ.ಸಾ.ಪ. ಚುನಾವಣೆಗಳು ಆಕಾಶಕ್ಕೆ ಸಣ್ಣ, ಸಣ್ಣ ತೂತುಗಳು ಬಿದ್ದು, ಅವುಗಳಿಂದ ಸಣ್ಣ ಸಣ್ಣದಾಗಿ ತೊಟ್ಟಿಕ್ಕುವ ಸೋರುಮಳೆ. ಸೂರ್ಯನ ನಿಚ್ಚಳ ಬಿಸಿಲ ಬೆಳಕಿಲ್ಲದೇ ಸುಂಯ್ಯಂತ ಸಣ್ಣಗೆ ಸೂಸಿ ಬರುವ ತಂಗಾಳಿ ತುಂಬಿದ ಮಳೆ ಮೋಡಗಳು. ಉಣ್ಣೆಕಂಬಳಿ ಹೊದ್ದು ಮನೆಯೊಳಗೆ ಬೆಚ್ಚಗೆ ಮಲಗಬೇಕೆನ್ನುವ ಆಶ್ಲೇಷ ಮಳೆಯ ಸುಡುರುಗಾಳಿ. ಮುಗಿಲು ತುಂಬಾ ತುಂಬಿ ತುಳುಕುವ ಹೊಗೆಮಂಜು ಭರಿತ ಶೀತದ ವಾತಾವರಣ‌. ಇಂತಹ ಬರ್ಫಿನ ಶೀತಗಾಳಿಗಳ ನಡುವೆ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗಳ ಸಿದ್ದತೆಯ ಸುದ್ಧಿಗಳು ಸಣ್ಣಗೆ ಕೇಳಿ ಬರುತ್ತಿವೆ. […]

ಒಂದು ಪ್ರೇಮ ಕವಿತೆ

ಕವಿತೆ ಎಚ್.ಕೆ.ನಟರಾಜ್ ನಿಜಕ್ಕೂ ನಿನ್ನ ಮೇಲೆ ತುಂಭಾ ಮನಸಾಗಿದೆಹೇಗೇ ಹೇಳಲಿ. ನೀನೊಪ್ಪದೆ ಬಯ್ದರೆತಿರಸ್ಕರಿಸಿದರೆಆ ನೋವ ಹೇಗೆ ಸಹಿಸಲೀಈ ಮನದಾಳದೊಲವಿಗೆಏನೆಂದು ಹೆಸರಿಡಲಿ.ನಿದ್ದೆಗಳಿಲ್ರದ ರಾತ್ರೀಇರುಳ ನಿಶೆಯೂ ನಿನ್ನ ಮುಗುಳ್ನಗೆಯಹೊನಲಲ್ಲಿ ಬೆಳಕಾಗಿ ಕಾಡುತ್ತದೆನೀ ನನ್ನ ಒಲವು ತಾನೆ.ಹೇಳೇಕಾವ್ಯವನೆ ಉಲಿವ ಜಾಣೆಹೃದಯ ಕುದಿವ ಕುಲುಮೆ ಕೆಂಡವಿರಹದುರಿಯ ಹೊಂಡ..ಅಗ್ನೀಕುಂಡವಾಗಿದೆ.ಸವೆಸಿ ಬಂದ ದಾರಿಯಲ್ಲೆಲ್ಲಾ..ನಿನ್ನ ಗುರುತಿನ ನೆನಪುಗಳ ಬಳ್ಳಿ…ವೃಕ್ಷ… ಘಮಲಿನ ಪುಷ್ಪಹೇಗೆ ದಾಟಲಿ ಈ ಬದುಕ.. ಪ್ರೀತಿಯದೆಯಲ್ಲರಳಿದ ಉತ್ಥಾನದ ನೆನಪಹೇಗೆ ಬಂದರೂ.. ಸುತ್ತಿ ನಿಂತರೂಬಳಸಿ ಬಂದರೂ ಕಾಡುವುದು…ನಿಜಕ್ಕೂ ನಿನ ಮೇಲೆ ಮನಸಾಗಿದೆಕನಸುಗಳಲ್ಲಿ ಕಾಡದೆ ಬಂದು ಮುದ್ದಿಸಿಬಿಡೆ ನಿನದೇ […]

ಎಂಥಾ ಮಳೆ

ಕವಿತೆ ವಸುಂಧರಾ ಕದಲೂರು ಅಬ್ಬಾ..ಎಂಥಾ ಮಳೆಸುರಿದೂ ಸುರಿದೂಸುರಿದೂ ಸುರಿದೂತಟಕ್ಕನೆ ನಿಂತರೂತೊಟಕ್ ತೊಟಕ್ ಎಂದುತೊಟ್ಟಿಕ್ಕುತಾಮಲೆ ಕಾಡು ಮನೆ ಮಾಡುಮರದ ನೆತ್ತಿ ಗಿಡದ ಬೇರುಎಲ್ಲಾ ನೆನೆಸಿತು ಅಬ್ಬಾ…ಎಂಥಾ ಮಳೆಸುರಿದೂ ಸುರಿದೂಸುರಿದೂ ಸುರಿದೂನದಿ ತೊರೆ ಕೆರೆ ಝರಿಹಳ್ಳ ಕೊರಲು ಕೊಳ್ಳತುಂಬಿಸಿ ಚೆಲ್ಲಿ ತುಳುಕಿಸಿಹರಿದು ಹರಿದು ಹಾರಿತುಅಬ್ಬಾ… ಎಂಥಾ ಮಳೆಅಂಚಲಿ ಕೊರೆದು ಕೊಚ್ಚಿಆಳಕೆ ಸುರಿದು ಚಚ್ಚಿಒಂದೇ ಸಮನೆ ಹೊಡೆದುಹಾಸಿ ಬೀಸಿ ಬೆಚ್ಚಿ ಬೀಳಿಸಿತು.ಅಬ್ಬಾ…ಎಂಥಾ ಮಳೆಅಳತೆ ಮೀರಿ ಸುರಿದುಎಲ್ಲೆ ತೂರಿ ಹರಿದುದಿಕ್ಕು ತಪ್ಪಿಸಿ ಲೆಕ್ಕ ಒಪ್ಪಿಸಿದಿಢೀರನೆ ಧಡಾರನೆಮಿಂಚು ಗುಡುಗುಸಿಡಿಲು ನಡುಗುಬಡಿದೆಬ್ಬಿಸಿ ಮಗ್ಗಲು ಮುರಿಸಿಒಳ್ಳೆ ಪಾಠ […]

ಕಸಾಪಗೆ ಮಹಿಳಾ ಅಧ್ಯಕ್ಷರು

ಕನ್ನಡ ಸಾರಸ್ವತ ಲೋಕಕ್ಕೆ ವಿದ್ಯಾ ದೇವಿ ಸರಸ್ವತಿಯ ಪಾತ್ರ ಬಹುಮುಖ್ಯವಾದುದು.ಧನ ಕನಕಗಳಿಗೆ ಲಕ್ಷ್ಮಿ ಅಧಿದೇವತೆಯಾದಂತೆ ಎಲ್ಲ ದೇವತಾ ಕಾರ್ಯಗಳು ಸಮಾನತೆಯಲಿ ಬೇಧ ಭಾವವಿಲ್ಲದೆ ನಡೆಯುವುದು. ಪೂಜೆಗಷ್ಟೇ ಸಿಮೀತ. ಅದು ದೇವರ ರೂಪದಲ್ಲಿರುವ ಸ್ತ್ರೀ ಮೂರ್ತಿಗಳಿಗೆ ಮಾತ್ರ.ಆದರೆ ವಾಸ್ತವದಲ್ಲಿ ಅವೆಲ್ಲ ಸ್ಥಾನ ಗಳು ನಿಲುಕಲು ಸಾಧ್ಯವೇ. ಅವು ಶೋಕಿಸಿನಲ್ಲಿ‌ಡುವ ಮೂರ್ತಿಗಳು.ಇವೇ ನಮಗೆ ಉತ್ತರ ನೀಡಬಲ್ಲ ಮಾನ ದಂಡಗಳು. ಮಹಿಳಾ ಸಂಘಟನೆಗಳಿಗೇನು ಬರವಿಲ್ಲ.ಆದರೆ ಮುಂದೆ ನಿಂತು ನಿಭಾಯಿಸುವ ಜವಾಬ್ದಾರಿ ಬೇಕಲ್ಲ.ಪುರುಷರಂತೆ ಮೂರು ಹೊತ್ತು ಆ ಕೆಲಸ ಮಾಡಲು ಆತ್ಮ ನಿರ್ಭರತೆಯಿ […]

ಕಸಾಪಗೆ ಮಹಿಳಾ ಅಧ್ಯಕ್ಷರು

ಕರ್ನಾಟಕ ಸಾಹಿತ್ಯ ಪರಿಷತ್ ಎಂಬ ಹೆಸರಿನೊಂದಿಗೆ 1915 ರಲ್ಲೇ ಕನ್ನಡ ನಾಡು ನುಡಿಯ ರಕ್ಷಣೆ ಹಾಗೂ ಕನ್ನಡ ಲೇಖಕ ಲೇಖಕಿಯರನ್ನು ಪ್ರೋತ್ಸಾಹಿಸಲೆಂದೇ ಹುಟ್ಟಿಕೊಂಡ ಸಂಸ್ಥೆ, ನಂತರದಲ್ಲಿ 1935ರಲ್ಲಿ ಅರ್ಥಪೂರ್ಣವಾಗಿ ಕನ್ನಡ ಸಾಹಿತ್ಯ ಪರಿಷತ್ ಎಂದು ಮರು ನಾಮಕರಣಗೊಂಡಿದ್ದು ಕನ್ನಡ ಭಾಷೆಯ ಗರಿಮೆಗೆ ಸಾಕ್ಷಿ. ಇಲ್ಲಿಯವರೆಗೂ ಅನೇಕ ಕನ್ನಡ ಸಾಹಿತ್ಯ ಸಮ್ಮೇಳನಗಳು , ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ಜರುಗುವುದರೊಂದಿಗೆ ಎಲ್ಲೆಡೆ ಕನ್ನಡ ಸಾಹಿತ್ಯದ ಘಮ ಪಸರಿಸಿದ ಹಿರಿಮೆ ಕನ್ನಡ ಸಾಹಿತ್ಯ ಪರಿಷತ್ ಗೆ ಸೇರಿದೆ ಎಂದರೆ […]

ಕಸಾಪಗೆ ಮಹಿಳಾ ಅಧ್ಯಕ್ಷರು ಬೇಕು

‘ತೊಟ್ಟಿಲನ್ನು ತೂಗುವ ಕೈ ಜಗತ್ತನ್ನೇ ತೂಗಬಲ್ಲದು’ ಇದು ಸಾಬೀತಾಗಿ ಶತಮಾನಗಳೇ ಕಳೆದರೂ ನಮ್ಮ ಕಸಾಪ ಗೆ ಒಮ್ಮೆಯೂ ಮಹಿಳಾ ಅಧ್ಯಕ್ಷರ ಆಯ್ಕೆ ಆಗಿಲ್ಲ, ಯಾರೂ ಸಹ ಸ್ಪರ್ಧಿಸಲಾಗಿಲ್ಲ. ಭಾರತವೆಂಬ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರವನ್ನ ಇಂದಿರಾ ಗಾಂಧಿಯವರು ಆಳಿದರು. ಅಂತೆಯೇ ನಮ್ಮ ಕಸಾಪ ಗೂ ಮಹಿಳಾ ಅಧ್ಯಕ್ಷೆಯ ಆಯ್ಕೆ ಆಗಬೇಕು. ಮನೆಯಲ್ಲಿ ಅಡುಗೆ ಮಾಡುವುದರಿಂದ ಹಿಡಿದು ಆಕಾಶದಲ್ಲಿ ವಿಮಾನ ಚಾಲನೆ, ಅಷ್ಟೇ ಏಕೆ ಅಂತರಿಕ್ಷದವರೆಗೂ ಮಹಿಳೆ ತಲುಪಿಯಾಗಿದೆ. ಪ್ರತಿ ಕ್ಷೇತ್ರದಲ್ಲೂ ಮಹಿಳೆ ತನ್ನ ಪ್ರತಿಭೆ ಮೆರೆದಾಗಿದೆ. ಇಲ್ಲಿ ಮಹಿಳೆ […]

Back To Top