ಕಸಾಪಗೆ ಮಹಿಳಾ ಅಧ್ಯಕ್ಷರು

ಮಹಿಳಾ ಅಧ್ಯಕ್ಷರು ಸಾಹಿತ್ಯ ಪರಿಷತ್ ಅಧ್ಯಕ್ಷರಾಗುವದು ಗೌರವದ ಸಂಕೇತ

ಕನ್ನಡ ಸಾಹಿತ್ಯ ಸೇವೆಯ ದ್ಯೇಯದಡಿ ಕನ್ನಡ ಸಾಹಿತ್ಯ ಪರಿಷತ್ ನೂರು ವರ್ಷದ ಸಂಭ್ರಮದಲ್ಲಿರುವದು ಅತ್ಯಂತ ಸಂತಸದ ಸಂಗತಿ.

ಈಗಾಗಲೇ ಅನೇಕ ಸಾರಥಿಗಳು ಸಾಹಿತ್ಯ ಪರಿಷತ್ ಆಳಿದ್ದು ತಮಗೆಲ್ಲ ಗೊತ್ತಿರುವ ಸಂಗತಿ ಪ್ರಸ್ತುತ ಶ್ರೀ ಮನು ಬಳಿಗಾರ ಸೇರಿದಂತೆ ಅನೇಕರು ಇಲ್ಲಿ ಅಧ್ಯಕ್ಷೀಯ ಸೇವೆ ಸಲ್ಲಿಸಿದ್ದನ್ನು ಸ್ಮರಿಸಬಹುದು. ಜೊತೆಗೆ ಈ ನಡುವೆ ಗಮನಿಸಬೇಕಾದದ್ದು ಮಹಿಳೆಯರೊಬ್ಬರು ಇನ್ನು ಅಧ್ಯಕ್ಷರಾಗದೆ ಇತಿಹಾಸ ಸ್ರಷ್ಟಿಸದ ವಿಚಾರ. ಈ ದೇಶವನ್ನೇ ಆಳಿದ ಮಹಿಳಾ ಪ್ರಧಾನಿಗಳು ಮಾದರಿ -ಹಾಗೂ ಪರ ವಿರೋದಗಳ ತಿಕ್ಕಾಟ ಸ್ವಾಭಾವಿಕವಿದ್ದರೂ ಕೆಲವು ಬದಲಾವಣೆ ಸಹಜಸಾಧ್ಯ. ಈ ಸಾಹಿತ್ಯ ಕ್ಷೇತ್ರದಲ್ಲೂ ನಾವು ಅಳೆದು ತೂಗಿ ನೋಡಿದರೆ ಸಾಹಿತ್ಯ ಕ್ರಷಿಯಲ್ಲಿ ಹೆಚ್ಚಿಗರು ಮಹಿಳೆಯರೇ. ಹಾಗೂ ಸಂಘಟನೆ ,ಶಿಸ್ತು, ಹಾಗೂ ಇನ್ನೂ ಹೆಚ್ಚಿನ ಕ್ರಾಂತಿ ಸಾಹಿತ್ಯ ಪರಿಷತ್ ನಲ್ಲಿ ಆಗಬೇಕಾಗಿದ್ದು ಇದ್ದು ಆಗುವ ಭರವಸೆ ಭವಿಷ್ಯತ್ ಕಾಲವೇ ಸರಿ. ಯಾಕೆಂದರೆ ಇನ್ನೂ ಅಧಿಕಾರ ಸಿಕ್ಕಿಲ್ಲ, ಅಷ್ಟಕ್ಕೂ ಈ ಎಲ್ಲ ಕೂಗಿಗೆ ಉತ್ತರ ಯಾರು ಮಹಿಳೆಯಾದರೆ ಯಾರು ಸಮರ್ಥರು ?ಎನ್ನುವ ಪ್ರಶ್ನೆ ಹೊಸ ಅನ್ವೇಷಣೆಯೋ ಅಥವಾ ಇದಕ್ಕೆ ಸೂಕ್ತ ಅಕ್ಷರಶಃ ತಯಾರಿಯಲ್ಲಿ ಇದ್ದಾರೋ ಅಥವಾ ಅವರಲ್ಲಿನ ಕೆಲ ಕಷ್ಟ ಸಾಧ್ಯಗಳು ಹೇಗೆ ನೆರವೇರುವವು. ಈ ಎಲ್ಲ ಪ್ರಶ್ನೆಗಳು ಹೊಸ ನಾಳೆಗೆ ಸಿಗುವದಂತೂ ನಿಶ್ಚಿತ .ಎಕಾ ಏಕಿ ಇಂತಹ ಕೂಗಿಗೆ ಸ್ವಾಗತ ಹೇಳಬೇಕಾದರೂ ಸೂಕ್ತರ ಲಭ್ಯತೆ ಕೂಡ ಅಷ್ಟೇ ಮುಖ್ಯ. ಬದಲಾವಣೆ ಜಗದ ನಿಯಮ ಎನ್ನುವ ಹಾಗೆ ಶತಮಾನದ ಈ ಕನಸು ಸಾಕಾರಗೊಳಿಸಲು ಯಾರೆಲ್ಲ ನಿರೀಕ್ಷೆ ಮಾಡುತ್ತ ಇದ್ದೀರಾ  ಅವರಿಗೆಲ್ಲ ಶುಭವಾಗಲಿ .ಆದರೆ ಎಲ್ಲ ಕ್ಷೇತ್ರಗಳಂತೆ ಇಲ್ಲಿ ಮಹಿಳಾ ಸ್ಥಾನ ಕೇಳಿದರೆ ಹಂತ ಹಂತವಾಗಿ ಮೀಸಲಾತಿ ,ಹೀಗೆ ಹತ್ತಲವು ರಾಜಕೀಯ ಅನುಕರಣೀಯ ಪ್ರತ್ಯಕ್ಷ ಬೆಳವಣಿಗೆಗೆ ಕಾರಣವಾಗಬಹುದೇ ?ಎಂಬ ಭಯ ಜೊತೆಗೆ ಶತಮಾನದ ಸಾಹಿತ್ಯ ಪರಿಷತ್ ಉತ್ತುಂಗಕ್ಕೆ ಏರಲಿ, ಶ್ರೇಷ್ಠತೆ ಉಳಿಸಿಕೊಳ್ಳಲಿ ಎಂಬುದೇ ನನ್ನ ಹಾರೈಕೆ.

ಶತಮಾನದ ಸಂಭ್ರಮಕೆ ಶುಭಾಶಯಗಳು.

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

*************************

ಅರುಣ್ ಕೊಪ್ಪ

Leave a Reply

Back To Top