ಕಾವ್ಯಯಾನ
ಅಂತಃಸಾಕ್ಷಿ ವೀಣಾ ರಮೇಶ್ ನನ್ನ ಪ್ರತಿಹೆಜ್ಜೆಯಲ್ಲೂ ನೀಹೆಜ್ಜೆ ಹಾಕು ಎಂದು ನಾನುಕೇಳುವುದಿಲ್ಲ ನನ್ನ ಪ್ರತಿಮಾತಿಗೂಕಿವಿಯಾಗಿರು ಎಂದುನಾನು ಹೇಳುವುದಿಲ್ಲ ನನ್ನ ನುಡಿಗೆ ದನಿಯಾಗಿರುನನ್ನ ಉಸಿರಿಗೆಎದೆಯ ಬಡಿತದ ಸದ್ದಾಗಿರು ಎಂದು ಕೇಳುವುದಿಲ್ಲ ತಂಪಾಗಿ,ನನ್ನ ಬೆನ್ನ ಹಿಂದೆನೆರಳಾಗಿ, ಕಾವಲಾಗಿರುಎಂದು ನಾನು ಕೇಳುವುದಿಲ್ಲ ನನ್ನ ಆತ್ಮಸಾಂಗತ್ಯಕ್ಕೆನಿನ್ನ ಅಂತರಾತ್ಮನೀಡುವ ಸಂವೇದನೆಗೆಸುಪ್ತಮನಸ್ಸಾಗಿರೂ ಎಂದೂಬೇಡುವುದಿಲ್ಲ ಆದರೆ ನಾನು,ನೀನು,ನಾವಿಬ್ಬರೂಒಂದೇ ಅನ್ನುವ ಅಂತಃಸಾಕ್ಷಿನಿನ್ನ ಅಂತರಂಗ ಹೇಳಿದರೆಸಾಕು,ನಾನೇನೂ ಕೇಳುವುದಿಲ್ಲ ***********
ಕಾವ್ಯಯಾನ
ವೈದ್ಯರ ಚುಟುಕುಗಳು ಡಾ ಅರುಣಾ ಯಡಿಯಾಳ್ 1. ಅದೇನು ವೈದ್ಯರ ಫೀಸು ಈ ಪಾಟಿ ದುಬಾರಿ!ಹಣ ಮಾಡುತ್ತಾರೆ ರೋಗಿಯ ರಕ್ತ ಹೀರಿ ಹೀರಿ!”“ ಅಲ್ರೀ,ನಮ್ಮ ಜೀವನುದ್ದಕ್ಕೂ ಇರುವುದು ಬವಣೆಯೇ!ರಕ್ತ ಹೀರಿ ಬದುಕ ಸಾಗಿಸಲು ನಾವೇನು ತಿಗಣೆಯೇ??!?” 2. ಡಾಕ್ಟರನ ಕಾರು ಡಾಕ್ಟರಿನಂತೆಯೇ ಇದ್ದರೆ ಒಳ್ಳೇದು!ಆರಕ್ಕೆ ಏರಬಾರದು;ಮೂರಕ್ಕೆ ಇಳೀಬಾರದು!ಭಾರೀ ಶೋಕಿಯಾದರೆ ಕಾಯುತ್ತದೆ ಜನರ ಕಣ್ಣು..ತೀರಾ ಕಳಪೆಯಾದರೆ ತಿನ್ನಬೇಕಾದೀತು ತಿರಸ್ಕಾರದ ಹಣ್ಣು 3. ಐಷಾರಾಮಿ ಕಾರು ,ಜೀವನ ಬೇಕೇ??ಹಾಗಾದರೆ ವೈದ್ಯರೊಂದಾಗದಿರಿ ಜೋಕೆ!!ಈ ವೃತ್ತಿಯಲ್ಲೂ ಗಳಿಸಬಹುದು ಹೇರಳ ಹಣ…ಎದುರಿಸಬೇಕಾದೀತು ಸಮಾಜದ ಉರಿಗಣ್ಣು;ಗೊಣಗೊಣ!! […]
ಕಾವ್ಯಯಾನ
ಜೋಗಿಗಳು ನಟರಾಜು ಎಸ್. ಎಂ. ಪಿತೃಪಕ್ಷದಿ ತಾತನ ಎಡೆಗೆಂದುಬಾಳೆ ಎಲೆಯ ಮೇಲೆ ಇಟ್ಟಿದ್ದಮುದ್ದೆ ಗೊಜ್ಜು ಅನ್ನ ಪಾಯಸದಪಕ್ಕ ಬಿಳಿ ಪಂಚೆ ಬಣ್ಣದ ಚೌಕಹುಳಿ ಹುಳಿಯಾದ ಬಿಳಿಯ ಯೆಂಡ ಬಾಡುಗ್ಲಾಸಿನ ಮೇಲೆ ಹಚ್ಚಿಟ್ಟ ಬೀಡಿ ಸಿಗರೇಟುತಟ್ಟೆಯಲಿ ದ್ರಾಕ್ಷಿ ಬಾಳೆಯ ಜೊತೆಒಂದೆರಡು ಕಿತ್ತಳೆ ಸೇಬುಇವೆಲ್ಲದರ ಮಧ್ಯೆ ಅವಿತು ಕುಳಿತಿರುವಅರಿಸಿನ ಕುಂಕುಮ ವಿಭೂತಿ ಬಳಿದಕಂಚಿನ ದೇವರ ಜೊತೆ ಪುಟ್ಟ ತ್ರಿಶೂಲಗೋಡೆಯ ಹಲಗೆಯ ಮೇಲೆಜೋಡಿಸಿಟ್ಟ ಚಾಮುಂಡಿ ಶಿವ ಪಾರ್ವತಿಡೊಳ್ಳು ಹೊಟ್ಟೆ ಗಣೇಶನ ಚಿತ್ರಪಟಎಲ್ಲವೂ ಅಲಂಕೃತ ಕಟ್ಟಿದ ಕಾಕಡಕನಕಾಂಬರ ಚೆಂಡೂವುಗಳಿಂದ ನಾಟಿ ಹೆಂಚಿನ ಒಳಗೆ […]
ಪುಸ್ತಕ ಸಂಗಾತಿ
ಕಾನನದ ಸುಮ ಶ್ರೀ ಉಮೇಶ ಮುನವಳ್ಳಿಯವರ‘ಕಾನನದ ಸುಮ’ ಕವನ ಸಂಕಲನ. ಸಾಹಿತ್ಯ ನಿರ್ಮಾಣದ ಪರಮ ಉದ್ದೇಶ ಒಳ್ಳೆಯದನ್ನು ಹೇಳುವುದು, ಒಳ್ಳೆಯದನ್ನು ಮಾಡಲು ಪ್ರೇರೇಪಿಸುವುದು ಮತ್ತು ಮುಂದಿನವರಿಗೆ ಸಾಗಿಸಿ ಸಾಗುವುದು. ಸಾಹಿತ್ಯ ವಸ್ತು ಯಾವುದೇ ಇರಲಿ, ಅದರ ಹಿಂದೆ ನಿಸರ್ಗವಿರುತ್ತದೆ ಮತ್ತು ಜಗತ್ತು ಇರುತ್ತದೆಯೆಂಬುದನ್ನು ಮರೆತು ಬರೆದರೆ ಅಂಥ ಸಾಹಿತ್ಯಕ್ಕೆ ಭವಿಷ್ಯವಿರುವುದಿಲ್ಲ. ಕವಿತೆಯಲ್ಲಿ ಉತ್ತಮ ಕವಿತೆ, ಕೆಟ್ಟ ಕವಿತೆ ಎಂಬುದಿರುವುದಿಲ್ಲ, ಅದು ಕವಿತೆ ಹೌದೋ ಅಲ್ಲವೋ? ಎಂಬುದಷ್ಟೇ ಗಣನೆಗೆ ಬರುತ್ತದೆ. ಅದು ಹೌದಾದರೆ ಉತ್ತಮವಾಗಿಯೇ ಇರುತ್ತದೆ. ಯಾವುದಕ್ಕೂ ಕಮಿಟೆಡ್ […]
ಪುಸ್ತಕ ಸಂಗಾತಿ
ಬಾಗಿಲು ತೆರೆಯೇ ಸೇಸಮ್ಮ ಬಾಗಿಲು ತೆರೆಯೇ ಸೇಸಮ್ಮವೈಚಾರಿಕ ಲಲಿತ ಪ್ರಬಂಧಗಳುಲೇಖಕರು- ಶರತ್ ಭಟ್ ಸೇರಾಜೆಅಂಕಿತ ಪುಸ್ತಕ ಅಂಕಿತ ಪ್ರತಿಭೆ ಮಾಲಿಕೆ-5 ಅಡಿಯಲ್ಲಿ ಅದರ ಸಂಪಾದಕರಾದ ಜೋಗಿಯವರು ಶರತ್ ಭಟ್ಟರನ್ನು ಗುರುತಿಸಿ ಈ ಕೃತಿಯನ್ನು ಪ್ರಕಟಿಸಲು ಅನುವು ಮಾಡಿಕೊಟ್ಟಿದ್ದಾರೆ.ಶರತರ ಈ ಎಲ್ಲಾ ಹದಿನೈದು ಪ್ರಬಂಧಗಳು ಈ ಗೌರವಕ್ಕೆ ಅರ್ಹವಾಗಿವೆ. ಈ ಲೇಖನಗಳನ್ನು ಓದಿದಾಗ ಅವರು ಅಪಾರವಾಗಿ ಓದಿಕೊಂಡವರು ಎಂಬುದೂ ಗೊತ್ತಾಗುತ್ತದೆ.ಬಳಸಿದ ಭಾಷೆ ಬಹಳ ಚೆನ್ನಾಗಿದೆ.ಅವರ ತರ್ಕ, ತಮಾಷೆ ಮತ್ತು ವಿಷಯವನ್ನು ವಿವರಿಸಲು ಕೊಡುವ ಉದಾಹರಣೆಗಳು ವಿಶಿಷ್ಟವಾಗಿವೆ. ಗುರುತ್ವದ ಅಲೆ […]
ಕಾವ್ಯಯಾನ
ಮುಗಿಯದ ಮಾತು ಅಕ್ಷತಾ ಕೃಷ್ಣಮೂರ್ತಿ ಮನದ ಪ್ರಶ್ನೆಗಳಿಗೆ ಉತ್ತರವಿಲ್ಲಕೇಳಿದರೆ ಸಿಟ್ಟುಜಮದಗ್ನಿಯಂಥವರುಮೌನದಲಿ ಉತ್ತರವಿದೆ ಎನಿಸಿದರೂಆಲಿಸಲು ನಿಶಕ್ತಿಯಿದೆಹೇಳಿದರೆ ಸಲೀಸುಗೊತ್ತಿದ್ದರೂಗೊತ್ತಿಲ್ಲದಂತಿರುವುದೇ ಒಲವಿಗೆಶ್ರೇಯಸ್ಸು ಆದರೂಹೊಟ್ಟೆಕಿಚ್ವು ಎಂದನವ ಯಾಕಾಗಿ ಯಾರಿಗಾಗಿಸ್ವಂತದ್ದು ಆಗಿದ್ದರೆಒಪ್ಪುತ್ತಿದ್ದೆನೆನೋರವಿ ಕಿರಣಕೆಪಾಲುದಾರರೆ ಹೆಚ್ಚಿರುವಾಗಈಗ ಹುಟ್ಟಿದ ನಾನುನೀ ನನ್ನವನೆನಲು ಒಪ್ಪಿತವೇನು?ಅಷ್ಟಕ್ಕೂ ಅವನೊಲವುಅರಿವಿಗೂ ದಕ್ಕದಿರುವಾಗಗೆಲ್ಲುವೆನೆಂಬ ಉಮೇದುತಕ್ಕಡಿಯಲ್ಲಿ ಲೆಕ್ಕ ಹಾಕುತಿದೆಒಲವು ಅಂಟಿಸಿಕೊಳ್ಳುವುದಲ್ಲ. ಅವನೇಕೆ ಒಂದು ನಮೂನಿನೇರ ಇದ್ದಾನೆ ನುಡಿಯುತ್ತಾನೆಎದುರಿಗಿರುವುದು ಪ್ರೀತಿಸುವಮನಸು ಮರೆಯುತ್ತಾನೆಹೇಳಿಯೇ ಬಿಡುತ್ತಾನೆಎಲೆ ಉದುರುವ ಕಾರಣವನಾ ನೀರೆರೆಯುತ್ತೇನೆನಂಬಿ ನನ್ನ ವಸಂತತಪ್ಪದೆ ಬರುವ ಎಲ್ಲತಪ್ಪುಗಳ ಮೀರಿಎಂದೆ ಅಂವ ಆಡಿದ ಮಾತುಮರೆತು ಮತ್ತೆಹೇಳಿಯೇ ಬಿಡುತ್ತಾನೆನೆಟ್ಟ ಮರ ಮುರಿಯಲು ಬಿಡೆ ಎಂದು […]
ಮೂರನೇ ಆಯಾಮ
ಸುಪ್ತಮನದೊಳಗಿನ ಗುಪ್ತತೆಗಳ ಅನಾವರಣ ಸುಪ್ತಲೇಖಕರು- ಡಾ. ಕೆಬಿ ಶ್ರೀಧರಬೆಲೆ- ೨೦೦ ತ್ರೀ ಈಡಿಯೆಟ್ಸ್ ನೋಡಿದ್ದೀರಲ್ಲ? ಅಲ್ಲಿನ ಒಂದು ದೃಶ್ಯ. ಇಂಜಿನಿಯರ್ ಕಾಲೇಜಿನ ರಿಸಲ್ಟ್ ಬಂದಿರುತ್ತದೆ. ಸ್ನೇಹಿತರಾದ ಫರ್ಹಾನ್ ಖಾನ್ ಮತ್ತು ರಾಜು ತಮ್ಮ ತಮ್ಮ ರಿಸಲ್ಟ್ ನೋಡಲು ಅಂಕಪಟ್ಟಿಯ ಕೆಳಗಿನಿಂದ ಮೇಲಕ್ಕೆ ನೋಡುತ್ತಿರುತ್ತಾರೆ. ಅಲ್ಲೆಲ್ಲೋ ಮಧ್ಯದಲ್ಲಿ ಅವರ ಹೆಸರುಗಳು ಕಾಣಿಸುತ್ತವೆ. ತಮ್ಮ ಹೆಸರು ಸಿಕ್ಕ ಖುಷಿಯಲ್ಲಿ ಕುಣಿದು ಕುಪ್ಪಳಿಸುತ್ತಾರೆ. ಆದರೆ ತಮಗಿಂತ ಒಂದಿಷ್ಟು ಮೇಲಿನವರೆಗೆ ನೋಡಿದರೂ ರಾಂಚೋ ನಂಬರ್ ಸಿಕ್ಕುವುದೇ ಇಲ್ಲ. ಗೆಳೆಯರಿಗೆ ಬೇಸರ. ತಮ್ಮದೇ ಜೊತೆ […]
ಅಜ್ಜನಮನೆಯೆನ್ನುವ ಜೀವನಪಾಠ….. ಅಜ್ಜ ನೆನಪಿಗೆ ಬಂದಾಗಲೆಲ್ಲ ಅಜ್ಜನಮನೆ ಎನ್ನುವ ಮಮತೆಯ ಮಲ್ಹಾರವೊಂದು ಮನಸ್ಸನ್ನೆಲ್ಲ ತುಂಬಿಕೊಳ್ಳುತ್ತದೆ. ಈ ಪ್ರೀತಿ-ಮಮಕಾರಗಳ ಮೂಲವನ್ನೊಮ್ಮೆ ಕೆದಕಿ ನೋಡಿ! ಅಜ್ಜಿಯ ಸೆರಗಿನಂಚಿನ ಪ್ರೀತಿಯ ಸೆಲೆಯೊಂದು, ಅಜ್ಜನ ಕಿರುಬೆರಳಿನ ಅಭಯವೊಂದು ನಾವಿಡುವ ಪ್ರತೀ ಹೆಜ್ಜೆಯನ್ನೂ ಸಲಹುತ್ತಿರುತ್ತದೆ. ಎಷ್ಟೇ ಆಧುನಿಕ ಜೀವನಶೈಲಿಯಾದರೂ, ಅಪಾರವಾದ ಸ್ನೇಹಬಳಗವಿದ್ದರೂ ಅಜ್ಜ-ಅಜ್ಜಿ ಎನ್ನುವ ಪ್ರೀತಿಯ ಬಲೆಯೊಂದರಲ್ಲಿ ಬದುಕಿನುದ್ದಕ್ಕೂ ಬಂದಿಯಾಗಿರುತ್ತೇವೆ; ಅಚ್ಚರಿಯೆಂದರೆ ಆ ಬಂಧನ ನಮಗೆಂದೂ ಹೊರೆಯೆನ್ನಿಸುವುದಿಲ್ಲ. ಅಜ್ಜನ ಕಥೆಯಲ್ಲಿ ಬರುವ ನೂರಾರು ಮೂಟೆಗಳ ಭತ್ತದ ದಾಸ್ತಾನನ್ನು ರಾತ್ರೋರಾತ್ರಿ ಖಾಲಿ ಮಾಡಿದ ಇರುವೆಗಳ ದಂಡು, […]