ಮಕ್ಕಳ ವಿಭಾಗ
ಮಕ್ಕಳ ಗೀತೆ ಮಂಜುಳಾ ಗೌಡ ಬನ್ನಿರಿ ಬನ್ನಿರಿ ಗೆಳೆಯರೆಶಾಲೆಗೆ ಹೊಗೋಣವಿದ್ಯೆಬುದ್ದಿ ಕಲಿತು ನಾವುಜಾಣರಾಗೋಣ. ಹೂವುಗಳಂತೆ ನಾವೆಲ್ಲನಗುತ ಅರಳೋಣಅರಳಿ ನಿಂತು ಕೀರ್ತಿಯಪರಿಮಳ ಹರಡೋಣ. ಪಾಠವ ಕಲಿಯೋಣನಾವು ಆಟವ ಆಡೋಣಪಾಠವ ಕಲಿತು ಆಟವ ಆಡಿನಕ್ಕು ನಲಿಯೋಣ. ಹಕ್ಕಿಯಂತೆ ಹಾರಾಡೋಣದುಂಬಿಯಂತೆ ಝೇಂಕರಿಸೋಣನವಿಲಿನಂತೆ ನರ್ತಿಸೋಣಕೋಗಿಲೆಯಂತೆ ಹಾಡೋಣ. ಕಥೆಗಳ ಹೆಳೋಣ ನಾವುನೀತಿಯ ತಿಳಿಯೋಣ.ರಂಗುರಂಗಿನ ಚಿತ್ರವ ಬಿಡಿಸುತಖುಷಿಯಾಗಿರೋಣ. ಪುಸ್ತಕ ಓದೋಣ ವಿಧವಿಧವಿಷಯವ ಅರಿಯೋಣ.ಜ್ಞಾನವಪಡೆದು ಸುಜ್ಞಾನಿಗಳಾಗಿದೇಶವ ಕಟ್ಟೋಣ. *******
ಕಾವ್ಯಯಾನ
ಅವನಾಗದಿರಲಿ. ಪ್ರಮೀಳಾ. ಎಸ್.ಪಿ.ಜಯಾನಂದ. ಸದ್ದು ನಿಲ್ಲಿಸಿದ್ದ ನಾಯಿಮತ್ತೇಕೆ ಸದ್ದು ಮಾಡುತ್ತಿದೆ…?ಇಷ್ಟು ದಿನ ಮೌನವಾಗಿದ್ದ ಶುನಕ…ಇಂದೇಕೆ ಸದ್ದು..?? ಅದೊ..ಅವನು ಬಂದಿರುವನೆ..ಚಪ್ಪರದ ಸಂಭ್ರಮ..ವಾಲಗದ ಸದ್ದು ಕೇಳಿಸಿತೆ ಅವನಿಗೆ ಹೂಹುಂ…ಇಲ್ಲ,ಇಲ್ಲ.. ಆ ಹೊತ್ತುಸದ್ದು ಮಾಡದೇ ಎದ್ದು ಹೋದನಲ್ಲ… ಆ ರಾಜ..ಜಗದ ಉದ್ದಾರ ಕ್ಕೆಂದು ನಂಬಿತು ಜಗತ್ತು ಆದರವಳ ಮಗ…ಏನೆಂದು ದುಃಖಿಸಿದನೋ ಇವನುಮಗ್ಗಲು ಬದಲಿಸುವುದರೊಳಗೆ ಎದ್ದು ಹೋಗಿದ್ದು ಯಾಕೆಂದು ತಿಳಿಯಬಲ್ಲದೆ ನನ್ನ ಹಸುಗೂಸು..?? ಗಟ್ಟಿಯಾಗದಿದ್ದರೂ ಮನಸ್ಸುಕಲ್ಲಾದ ದೇಹದುಡಿಯಿತುಮಗಳ ಸಾಕುವುದು ಸುಲಭದ ಮಾತೇನು.. ಅದು ಬರೆಯಲಾಗದ ಕವಿತೆ,ಹಾಡಲು ಬರದ ಹಾಡು.. ಅಳುವ ಕೂಸಿಗೆ ಹಾಲುಣಿಸಿಕಂಬನಿ […]
ಅನುವಾದ ಸಂಗಾತಿ
ಗ್ರಂಥಾಲಯದಲ್ಲಿ ಮೂಲ ಮಲಯಾಲಂ:ರವೀಂದ್ರನ್ ಪಾಡಿ ಕನ್ನಡಕ್ಕೆ:ಚೇತನಾ ಕುಂಬ್ಳೆ ಗ್ರಂಥಾಲಯದಲ್ಲಿ ಎಲ್ಲವೂಬಂಧನಕ್ಕೊಳಗಾಗಿವೆ.ಕಪಾಟಿನ ತುಂಬಪುಸ್ತಕಗಳು ಎಷ್ಟೊಂದು ಬದುಕುಗಳುಎಷ್ಟೊಂದು ಕಾಲ,ಎಷ್ಟೊಂದು ಜ್ಞಾನಗಳುಪೆಟ್ಟಿಗೆಯೊಳಗೆ ಅದರಲ್ಲಿ ಕೆಲವುಮಮ್ಮಿಗಳ ಹಾಗೆನಿತ್ಯ ವಿಶ್ರಾಂತಿ ಪಡೆಯುತ್ತಿವೆಗಾಜಿನ ಮನೆಯೊಳಗೆ ಒಂದಿಷ್ಟು ಉಸಿರುಮತ್ತೊಂದಿಷ್ಟು ಬೆಳಕುಹಂಬಲಿಸಿತುಅವುಗಳನ್ನು ತಲುಪಲು ಒಂದು ಪ್ರಪಂಚವೇ ಅಲ್ಲವೇಎಲ್ಲ ಕೃತಿಗಳೂನಾನಂದುಕೊಂಡೆಮನದೊಳಗೆ ತೆರೆದಿಡಬೇಕು ನಿತ್ಯವೂಗ್ರಂಥಾಲಯಗಳ ಬಾಗಿಲುಗಳನ್ನುಜೊತೆಗೆ ಕಪಾಟುಗಳಬಾಗಿಲುಗಳನ್ನೂ ಹಾಳೆಗಳನ್ನೊಮ್ಮೆ ತಿರುವಿ ಹಾಕಿಗಂಧವನ್ನು ಆಘ್ರಾಣಿಸಬೇಕುಪುನಃ ಸ್ಥಾನ ಬದಲಿಸಿಇಡಬೇಕಿದೆ ಅವುಗಳನ್ನೂ ತಲುಪಿ ಬಿಡಲಿವರ್ತಮಾನದ ವಿಚಾರಗಳುಹೊಸ ಬೆಳಕು,ಹೊಸ ಗಾಳಿ ***********
ಕಾವ್ಯಯಾನ
ಅಮ್ಮನಿಗೀಗ ೬೬ ನಾಗರಾಜ ಮಸೂತಿ ದುಡಿಯುವ ದೇಹಕ್ಕೆ ವಾಕಿಂಗ್ ಅನಗತ್ಯ ಎಂದವಳುಮೆಲ್ಲ ಹೆಜ್ಜೆ ಇರಿಸುತ್ತಿದ್ದಾಳೆ ಆರು ಹೆರಿಗೆಗೆ ನಲುಗದವಳುಮಂಡೆ ನೋವಿಗೆ ಕುಸಿದಿದ್ದಾಳೆ ಬಿಸಿ ರೊಟ್ಟಿ ಉಣಬಡಿಸಿದವಳುಊಟಕ್ಕೆ ಮೆತ್ತನೆ ರೊಟ್ಟಿಯನ್ನು ಕೇಳಲು ಮುಜುಗರಕ್ಕೊಳಗಾಗುತ್ತಾಳೆ ಮೈಲು ದಾರಿ ಸವೆಸಿ ಬಿಸಿಯೂಟ ಬಡಿಸಿದಅವಳ ಪ್ರತಿ ಹೆಜ್ಜೆನನ್ನೆದೆಗೆ ಭಾರ ಅನಿಸುತ್ತಿವೆ ತಿಂಡಿ ತಿನಿಸು, ಧಿರಿಸು ತಂದಿಡುವಎನಗೆ ಆರೋಗ್ಯ ಮರುಕಳಿಸಲಾಗುತ್ತಿಲ್ಲಅವಳಿಗೀಗ ಅರವತ್ತಾರರ ಹರೆಯ ಅಮ್ಮನಿಗೆ ವಯಸ್ಸಾಗ್ತಿದೆಅದೇ ಬೇಸರವಾಗ್ತಿದೆ… **************
ಕಾವ್ಯಯಾನ
ಕಿಟಕಿ ದೀಪ್ತಿ ಭದ್ರಾವತಿ ನೀನು ನನ್ನಿಂದ ದೂರ ಸರಿದಿದ್ದೀಯೆಆದರೂ ಮೋಡದಅಂಚುಗಳಲಿನಾನು ನಿನ್ನನ್ನು ಕಾಣುತ್ತೇನೆ ಮುಸ್ಸಂಜೆ ಕೆಂಬಣ್ಣದಲಿ ನೆನಪ ಅಲೆಗಳುಓಕುಳಿಯಾಡುವಾಗಲೆಲ್ಲನಿನ್ನ ಮುಂಗುರುಳು ನನ್ನಕಣ್ಣಿನಲಿಇಣುಕಿದಂತೆ ಭಾಸವಾಗುತ್ತದೆ ವ್ಯಾಖ್ಯಾನಿಸುತ್ತೇನೆನಾನು ನಿನ್ನನ್ನು ಮರೆತಿದ್ದೇನೆ ಎಂತಲೇ..ಆದರೆಬಿಟ್ಟು ಹೋದ ಹೆಜ್ಜೆ ಗುರುತುಗಳಹಾದಿ ಮಳೆಗಾಲದಲಿ ಮಿದುವಾಗಿಬೇಸಿಗೆಯಲಿ ಒರಟಾಗಿಬೆರಳಿಗಂಟುವಾಗಅರ್ಧ ಬರೆದಿಟ್ಟ ಕವಿತೆಯೊಂದುಎದೆಯಲ್ಲಿ ಗೂಡುಕಟ್ಟುತ್ತದೆ ಮತ್ತೆ ಇನ್ನೆಂದು ನಿನ್ನ ಭೇಟಿಯಾಗುವುದಿಲ್ಲಎಂದೆ ನಂಬುತ್ತೇನೆ.ಮುಚ್ಚಿ ಎದ್ದು ಹೋದ ಕಿಟಕಿಯಲಿಬೆಳಕ ಗೀರೊಂದು ತಡತಡಕಿ ಬರುವಾಗನಿನ್ನ ಕಣ್ಣ ಮಿಂಚುಇರುಳ ಸರಳುಗಳತೂರಿ ನನ್ನೆಡೆಗೆ ಬಂದಂತೆ ಅನ್ನಿಸುತ್ತದೆ ಮತ್ತೆ ಮತ್ತೆ ನಿನ್ನ ನೆನಪುಗಳಬೇಕೆಂದೆ ದೂರ ಅಟ್ಟುತ್ತೇನೆಅವು ಜಾತ್ರೆಯಲಿ ಕೈ […]