ಕಾವ್ಯಯಾನ

ವೈದ್ಯರ ಚುಟುಕುಗಳು

Doctor, Medicine, Man, Medical

ಡಾ ಅರುಣಾ ಯಡಿಯಾಳ್

1.

ಅದೇನು ವೈದ್ಯರ ಫೀಸು ಈ ಪಾಟಿ ದುಬಾರಿ!
ಹಣ ಮಾಡುತ್ತಾರೆ ರೋಗಿಯ ರಕ್ತ ಹೀರಿ ಹೀರಿ!”
“ ಅಲ್ರೀ,ನಮ್ಮ ಜೀವನುದ್ದಕ್ಕೂ ಇರುವುದು ಬವಣೆಯೇ!
ರಕ್ತ ಹೀರಿ ಬದುಕ ಸಾಗಿಸಲು ನಾವೇನು ತಿಗಣೆಯೇ??!?”

2.

ಡಾಕ್ಟರನ ಕಾರು ಡಾಕ್ಟರಿನಂತೆಯೇ ಇದ್ದರೆ ಒಳ್ಳೇದು!
ಆರಕ್ಕೆ ಏರಬಾರದು;ಮೂರಕ್ಕೆ ಇಳೀಬಾರದು!
ಭಾರೀ ಶೋಕಿಯಾದರೆ ಕಾಯುತ್ತದೆ ಜನರ ಕಣ್ಣು..
ತೀರಾ ಕಳಪೆಯಾದರೆ ತಿನ್ನಬೇಕಾದೀತು ತಿರಸ್ಕಾರದ ಹಣ್ಣು

3.

ಐಷಾರಾಮಿ ಕಾರು ,ಜೀವನ ಬೇಕೇ??
ಹಾಗಾದರೆ ವೈದ್ಯರೊಂದಾಗದಿರಿ ಜೋಕೆ!!
ಈ ವೃತ್ತಿಯಲ್ಲೂ ಗಳಿಸಬಹುದು ಹೇರಳ ಹಣ…
ಎದುರಿಸಬೇಕಾದೀತು ಸಮಾಜದ ಉರಿಗಣ್ಣು;ಗೊಣಗೊಣ!!

4.

ರೋಗ ,ರೋಗಿಯ ಶ್ರುಶ್ರೂಷೆಗೆ ಬೇಕು ವ್ಯದ್ಯಕೀಯ ಚಾಕರಿ ..
ಆದಾಗ್ಯೂ ಸೇವೆಗೆಯ್ಯುವವರ ಜೇಬಿಗೇ ಕತ್ತರಿ !
“ ಇದು ನ್ಯಾಯವೇ ?ಧರ್ಮವೇ ?” ಎಂದು ಹಲುಬದಿರಿ..
ಅಸಮತೆ , ಅನ್ಯಾಯ ಜಗದ ರೀತಿಯೆಂದರಿತು ತೆಪ್ಪಗಿರಿ!

5.

ನಾವೆಲ್ಲಾ ಹೇಳಲು ತಯಾರು “ ವೈದ್ಯೊ ನಾರಾಯಣ ಹರಿ …
ಆದ್ರೂ ಡಾಕ್ಟ್ರು ಫೀಸ್ ಕೇಳುವುದು ಹೇಗೆ ಸರಿ ???”
ಯಮನೆಂದ ನಕ್ಕು -“ಹೌದೌದು ,ಆರೋಗ್ಯಕ್ಕಿಂತ ಮುಖ್ಯ ಕಾಸು …
ಅಲ್ಲಿರುವುದು ಸುಮ್ಮನೆ ..ಇಲ್ಲಿದೆ ನಿಮ್ಮನೆ ..ಬಂದುಬಿಡಿ..ಬೇಡ ಪಾಸು!

********

Leave a Reply

Back To Top