Day: June 15, 2020

ನನ್ನೊಳಗೂ ಮಳೆ ವರುಣ ನೀಡಿದ ಸಿಹಿ ಚುಂಬನದ ಮಳೆ,ನನ್ನೆದೆಯ ಅಂಗಳದಲಿ ನಾಚಿವೆತನುಮನದ ಹೂಗಳುನನ್ನೊಳಗೂ ಮುಂಗಾರು, ಮೌನದ ಪರದೆಯೊಳಗೆಅವಿತ ಮಾತುಗಳುಎದೆಯ ನೆಲದಲಿ ಒಣಗಿದ ನೆನಪುಗಳಿಗೆ,ಕತ್ತಲೆಯ ಬೇಲಿ ದಾಟಿ ಹರಿದು ಬಂದಳುನನ್ನೊಳಗೂ ಮುಂಗಾರು ಮೊಗೆ ಮೊಗೆದು ಸುರಿದಳು ವಿರಹದ ಕಣ್ಣೀರು,ಬಚ್ಚಿಟ್ಟುಕೊಂಡ ಮಾತು ಬಿಚ್ಚಿಡುವ ಸಂತಸನನ್ನೊಳಗೂ ಮುಂಗಾರು ಋತುಗಳ ಕನವರಿಕೆಯಲಿಮಿಲನದ ಲವಲವಿಕೆಮತ್ತೆ ಮೌನವೇ ನಾಚಿತುಬಾಚಿ ತಬ್ಬಿತು,ವಸಂತನಕುಂಚದಲಿ ಮತ್ತೆ ಬಣ್ಣ ಬಣ್ಣದ ಚಿತ್ತಾರಗಳುನನ್ನೊಳಗೂ ಮುಂಗಾರು ಕನಸುಗಳು ಗೂಡು ಕಟ್ಟಿವೆಮನದ ಕೂಜನದಲಿ ಇನಿದನಿ ಕೇಳಿಸುತಿದೆಎಳೆಬಿಸಿಲ ರಂಗು ಕಾಡಿದೆಕಾಮನಬಿಲ್ಲಿನ ವರ್ಣಗಳಲಿ ನನ್ನೊಳಗೂಮುಂಗಾರು ಸುರಿದಿದೆ ನನ್ನೊಳಗೂ ಕವಿತೆ […]

ಮಳೆ ಹುಯ್ಯಲಿ ಜಾರಿದವು ಮುತ್ತಿನ ಹನಿಗಳು ಅಂಜಿಕೆಯಿಲ್ಲದೆನಭದ ಗೇರೆಗಳ ದಾಟಿ ಅನಂತದೆಡೆಗೆಅವಕೊಂದೆ ಚಿಂತೆ ಹನಿದ ಹನಿಗಳೆಲ್ಲಹಸಿರಾಗಲು ಕಾತರಿಸಿದ ಭವದ ಒಡಲ ಸೇರಿಹಿಗ್ಗಿ ನುಲಿಯಲು,ಬೆಸೆಯಲು ಆತುರಯಾವ ಹನಿ ಮುತ್ತಾಗುವುದೋಯಾವ ಹನಿ ನತ್ತಾಗುವುದೋಇಳೆಯ ಮೈಸಿರಿಗೆ ಒನಪಾಗುವುದೋಸಿಡಿಲು ಗುಡುಗಿನ ಆರ್ಭಟಕೆಬೆಚ್ಚಿ ಬಿದ್ದು ಸದ್ದಿಲ್ಲದೆ ಸರಿದೂಗಿಸಲುಉಬ್ಬು ತಗ್ಗುಗಳೆಲ್ಲ ಕೊಂಚ ಸಾವರಿಸಿದಂತೆಮಳೆಯ ತುಂತುರು ಹನಿಗಳಿಗಾಗಿಮೆಲ್ಲುಸಿರಿನ ಪ್ರೇಮಕ್ಕೆ ಹಂಬಲಿಸಿದಂತೆಬೆಂದು ಬಸವಳಿದ ಮನಕಿಂದು ಆನಂದಮೈಮನಕೆಲ್ಲ ಸುಗ್ಗಿಯ ಹಬ್ಬದೂಟದಂತೆಕಾರ್ ಮೋಡಗಳು ಬಿಗಿದಪ್ಪಿ ಬೆವರ ಹರಿಸಿಉನ್ಮದಾದ ಬಿಸಿಗಾಳಿ ಧರೆಯ ನಡುಗಿಸಿದಾಗೆಲ್ಲಎಂಥ..! ಸುಮಧುರ ಮಳೆಗಾಳಿ ಹೊಳಪುಕಾಗದದ ದೋಣಿ ತೇಲಿ ಬಿಟ್ಟ ನೆನಪುಆಣಿ […]

ಆಮಂತ್ರಣ ಒಣಗಿದೆದೆಯ ಬೆಂಗಾಡಿನಲಿ,ಭ್ರಮೆಯ ದೂಳಡಗಿಸುವಂತೆ,ಬಾ ಮಳೆಯೇ, ದಣಿವಾರದ ಮೂಲೆಯಲಿ,ಜೇಡಭಾವ ಜಾಡಿಸುವಂತೆ,ಬಾ ಮಳೆಯೇ, ಮನದ ಬಯಕೆ ಕತ್ತಲಲಿ,ಕರುಡು ಕಳೆವ ಬೆಳಕಂತೆ,ಬಾ ಮಳೆಯೇ, ಗದ್ದಲಗಳ ಗದ್ದೆಯಲಿ,ಹಸಿರೂಡಲು ನೇಗಿಲಂತೆ,ಬಾ ಮಳೆಯೇ, ನನ್ನ ಮನದ ಮೌನದಲಿ,ಹನಿಯ ಶಬ್ದ ಉಳಿವಂತೆ,ಬಾ ಮಳೆಯೇ, ಬದುಕ ಬಟ್ಟಲ ಬವಣೆಗಳಲಿ,ಉಕ್ಕಿ ಹರಿವ ಕರುಣೆಯಂತೆ,ಬಾ ಮಳೆಯೇ, ಒಂಟಿಯಾದ ಮನದಲಿ,ತಂಪನೀವ ಎಲರಂತೆ,ಬಾ ಮಳೆಯೇ, ಹನಿ ಹನಿಗಳು ಕಾಡುವಂತೆ,ಬಂದಗಳಿಗೆಗಳಿಗೆಲ್ಲ ಬೇಡಿಯಂತೆ,ಬಾ ಮಳೆಯೇ, ಬಾಯಾರಿದ ಪಯಣದಲಿ,ಇನಿಯನ ಜೇನದನಿ ಹನಿಯಂತೆ,ಬಾ ಮಳೆಯೇ, ಬರಿದೆ ಬೊಗಸೆಯಲಿ,ಎದೆ ತುಂಬಿದಾ ಕನಸು ಸುರಿವಂತೆ,ಬಾ ಮಳೆಯೇ, ಸತ್ತ ಕನಸುಗಳ ಮಧ್ಯದಲಿ,ಸೂಚಿ ಮಲ್ಲೆ […]

ಲಹರಿ

ಒಂದು ಪತ್ರ ಜಯಶ್ರೀ ಜೆ.ಅಬ್ಬಿಗೇರಿ ಕಾಲೇಜಿನಂಗಳದಿ ಕಾಲಿಟ್ಟ ದಿನದಂದೇ ನೀ ಕಣ್ಣಿಗೆ ಬಿದ್ದೆ. ಸುರಿವ ಸೋನೆ ಮಳೆಗೆ ಹಾಡೊಂದ ಗುಣುಗುಣಿಸುತ ಕಣ್ಮುಂದೆ ನಿಂದೆ. ತುಸುವೇ ತುಸು ದೂರದ ರಸ್ತೆಯಂಚಿನಲ್ಲಿ ನಿಂತು ಹರಿವ ಸಿಹಿ ಝರಿಯಂತೆ ನನ್ನೆಡೆ ಕಣ್ಣೋಟ ಹರಿಸಿದೆ. ಬೀಸುವ ತಂಗಾಳಿಯ ಜತೆ ನಿನ್ನ ಮೈಯ ಸುಗಂಧ ತೇಲಿ ಬಂದು ನನ್ನ ಮೈಯ ಸವರಿದಂತೆನಿಸಿ ನಿಂತಲ್ಲೇ ಒಮ್ಮೆ ನಡುಗಿದೆ.ಒಮ್ಮಿಂದೊಮ್ಮೆಲೇ ಬೀಸಿದ ಜೋರಾದ ಗಾಳಿಗೆ ಬಲು ದೂರದ ತನಕ ಹಾರಿದ ನಿನ್ನೆದೆಯ ಅಂದದ ಆಕಾರ ಮುಚ್ಚಿದ್ದ ದುಪ್ಪಟ್ಟಾ ತಂದು […]

ಮತ್ತೆ ಮಳೆಯಾಗಿದೆ ನಿನ್ನೊಲವಿನ ವರ್ಷಧಾರೆಗೆನನ್ನೊಳಗಿನ ನವಿಲುಗರಿದೆದರಿ ನರ್ತಿಸುತಿದೆಖುಷಿಗೆ ಪಾರವೇ ಇಲ್ಲದಂತೆ !ಮತ್ತೆ ಮಳೆಯಾಗಿದೆಕನಸು ಹೊಸದಾಗಿದೆ.. ಫಸಲಿಲ್ಲದ ಬಂಜರುಭೂಮಿಮುಂಗಾರಿನ ಸ್ಪರ್ಶಕೆ ತಾ ಚಿಗುರೊಡೆದಿದೆಒಡಲಕಾವ ತಣಿಸಿ ಹನಿಯ ಸಿಂಚನಕೆಬೀಜ ಮೊಳೆತು ಜೀವ ಅಂಕುರಿಸಿದೆ ಸತ್ತಬೇರುಗಳೆಲ್ಲ ಉಕ್ಕಿ ಮರುಕನಸುಸುಪ್ತ ಚೇತನದಲ್ಲಿ ಜಾಗೃತವಾಗಿದೆನಿಸ್ತೇಜದಿ ಜಡವಾಗಿದ್ದ ಬೇರುವರ್ಷ ಪೋಷಕಕ್ಕಾಗಿ ಹಂಬಲಿಸಿದೆ ಬೆಳೆದು ವೃಕ್ಷವಾಗಲೀಗ ಅದಕೊಂದುದೃಢರಕ್ಷಣೆಯ ಆಸರೆ ದೊರೆತಿದೆಜಾತಿಮತದಾಚೆಗಿನ ಸಹಬಾಳ್ವೆಯಲಿ ತಾನುಬೆಳೆದು ಹೆಮ್ಮರವಾಗ ಹೊರಟಿದೆ. ***** ಹೆಚ್.ಡಿ.ತೇಜಾವತಿ

ಮತ್ತೆ ಮರೆಯಾಗುವ ತವಕವೇತಕೆ ಮೋಡಗಳೆ ಮೋಡಗಳೆ      ಏಕಿಷ್ಟು  ಅವಸರ       ಹೊರಟಿರುವಿರೇತಕೆ       ತಿರುಗಿ ನೋಡದೇ .        ಬಾನಂಗಳದಲಿ         ಚಿತ್ತಾರ ಮೂಡಿಸಿ        ಮತ್ತೆ ಮರೆಯಾಗುವ        ತವಕವೇತಕೆ?         ಒಂದು ಹನಿಯೂ          ಸುರಿಸದೆ.           ಬಾಯಾರಿದ          ಭೂಮಿಯು ಬಾಯ್ತೆರೆದು ನಿಂತಿದೆ ನೀವು ಸುರಿಸುವ ಹನಿಗಳಿಗಾಗಿ. ಕವಲೊಡೆದಿದೆ ಮಣ್ಣು ಜೀವಜಲದ ಆಸೆಯಿಂದ ಅತ್ತಲೊ ಇತ್ತಲೊ ಒಮ್ಮೆ ಜೊರಾಗಿ ಗಾಳಿ ಬಿಸುತಿರಲು ಹೊರಟೆ ಬಿಟ್ಟಿರಾ ಗಾಳಿಯ ಜೊತೆಯಾಗಿ. ಭೂಮಿಯದು ನಳನಳಿಸುತಿದೆ ಹಸಿರು […]

ಚಿಲುಮೆ ಮಳೆಹನಿಗಡಿಯಾರದ ಮೂರು ಮುಳ್ಳುಗಳಿದ್ದಂತೆಕಾಲಕಾಲಕ್ಕೆ ತಿರುಗುತಿವೆಋತುಗಳು ಭಾಗವಾಗಿ ಬೇಸಿಗೆಯಲ್ಲಿ ಅದುಮಿಟ್ಟಶಿಶ್ನಮಳೆಯಲಿ ಚಿಗುರೊಡೆದುಪುಟಿದೇಳುತ್ತದೆ ಚಳಿಯಲಿಹಿಡಿತ ಮೀರಿ ಮುಪ್ಪಾಗದ ಯೋನಿಸ್ವಾಗತಿಸುತ್ತಿದೆಕಾಲದ ನಾಚಿಕೆ ಬದಿಗಿಟ್ಟುಅಲೆಯುತ್ತಿದೆ ಪಕ್ವಗೊಂಡ ಅಪ್ರಜ್ಞೆಬೆಡ್ ರೂಮ್ ಬಾತ್ ರೂಮ್ ಗಳಪರಿಧಿ ಆಚೆ ಮಿಡುಕಾಡುತ್ತಿದೆ ಮಳೆಹನಿಸರಿಸೃಪಗಳು ತಲೆಯೆತ್ತಿಹೆಡೆಯೆತ್ತಿತಣಿಸಿಕೊಂಡಂತೆ ಮೋಹಚಂದಿರನ ರಾತ್ರಿಯಲಿಪುಟಿವ ನೀರ ಚಿಲುಮೆಯಂತೆ ********* ದೇವು ಮಾಕೊಂಡ

ಮಳೆಗಾಲದ ಕನವರಿಕೆ ಮಳೆಗಾಲದ ರಾತ್ರಿಗಳಿಗೆಮಾರನೇ ದಿನಕ್ಕೆ ತಂಗಳುನಿದ್ದೆಯುಳಿಸುವ ಬಾಬತ್ತುಹೇಗೆ ಮಲಗಿದರೂಮುಂಜಾವಿನ ಕಾಲುಸೆಳೆತತಲೆಬಾಲವಿಲ್ಲದ ಉದ್ದುದ್ದಕನಸುಗಳ ಮುಸುಗುಒಂದೊಳ್ಳೆ ಸವಿಘಟ್ಟಕ್ಕೆಒಯ್ದು ನಿಲ್ಲಿಸಿದ ಕ್ಷಣವೇಫಳಾರನೆ ಗುಡುಗು- ಸಿಡಿಲುಯಾರ ಮನೆಯ ಮಾಳಿಗೆಯಮೇಲೋ ಕುಳಿತು ಗೊಳೋಅಳುವ ಬೆಕ್ಕುಅತ್ತಿತ್ತ ಹೊರಳಿದರೆಮಳೆಯಲ್ಲೇ ನಡುಗುತ್ತಾ ನೆನೆಯುತ್ತಾಸ್ವಿಗ್ಗಿ ಡೆಲಿವರಿ ಕೊಟ್ಟವನಕಣ್ಣೇಕೆ ನೋಡಲಿಲ್ಲ?ಮನೆಯೊಳಗೆ ಕರೆದುಬಿಸಿ ಕಾಫಿ/ ಕಷಾಯ ಕೊಟ್ಟುಕಳಿಸಬಹುದಿತ್ತೇನೋ!ಅಮ್ಮ ಹಸಿದ ಬೀದಿನಾಯಿಗೂಬಿಸಿಬಿಸಿ ಬೋಡುಪ್ಪಿಟ್ಟುಕೆಲವೊಮ್ಮೆ ಚೂರಿಷ್ಟು ಕಾಫಿಮೆಟ್ಟಿಲ ಕೆಳಗೆರಡು ಗೋಣಿತಾಟುಹೊಂಚುತ್ತಿದ್ದು ನೆನಪಾಗಿಮತ್ತೆಲ್ಲೋ ಎಳೆದು ನಿಲ್ಲಿಸುವಕಣ್ಣಮುಚ್ಚಾಲೆ ನೀರು ಕುಡಿ- ಕಾಲ್ತೊಳೆದುಮುದುರಿ ಮಲಗುಮತ್ತೆ ಹೊರಳಾಡಿಗಂಟೆ ಎಂಟಾಯ್ತೆಂದುದಡಬಡಿಸಿ ಓಡುಛೇ ಮಳೆಗಾಲದ ರಾತ್ರಿಗೆಏಕಿಂಥ ಮರುಳು? ಮಳೆಯೊಂದಿನ ಹನಿಯಾಗಿನದಿ, ಕೆರೆ, ಜಲಧಾರೆಯಾಗಿನೆನಪುಗಳ […]

ಎರಡು ಮಳೆ ಕವಿತೆಗಳು ಮಳೆ ಸುರಿದೇ ಇದೆ ಮಳೆ ಬಾನ ಸಂಕಟವೆಲ್ಲ ಕರಗಿಕಣ್ಣೀರಾಗಿ ಇಳಿದಿದೆಯೇ ಹೊಳೆಇಳೆಯ ಅಳಲಿಗೆ ಎದೆ ಕರಗಿಸುರಿಸಿದೆಯೇ ನಭ ತನ್ನೊಲವ ಬಾನು ಬುವಿ ಒಂದಾಗಿಸಿದೂರಗಳ ಇಲ್ಲವಾಗಿಸಿಕಳೆಕೊಳೆ ಗುಡಿಸಿ ತೊಳೆತೊಳೆದು ತೊರೆ ಹರಿಸಿಸುರಿದಿದೆ ಮಳೆ ಬಿಸಿಲಬೇಗೆಗೆ ಬತ್ತಿ ಆಳಆಳ ನೆಲದಲ್ಲಿ ನೀರ ಪಸೆಗೆಚಾಚಿ ಚಾಚಿ ತುಟಿ ಬಸವಳಿದಬೇರಿಗೆ ಈಗ ಜೀವನ ಸೆಲೆಬಾನ ಕರುಣೆಗೆ ತಲೆಯೊಲೆದುತುಟಿಯೊಡ್ಡಿ ಹಿಗ್ಗುವ ಎಲೆ-ಎಲೆ !ಮೊಗ್ಗು ಹೂವು ಕೊಂಬೆಯ ಹಕ್ಕಿಮಣ್ಣಹುಳು ಎಲ್ಲಕ್ಕೂ ಈಗಜೀವ ಚೈತನ್ಯದ ಆವಾಹನೆ- ಅಲೆ ಉಳುವ ಊಡುವ ಮೂಡುವಚಿಗಿತು ಹೊಡೆ […]

ಮಳೆ ಮಳೆನೆಲ‌ ಮುಗಿಲಿನ ಅನುಸಂಧಾನಪ್ರೀತಿಯಂತೆ ಮಳೆ ಮೋಡ ಕಪ್ಪು ಮೋಡ ಮುಗಿಲ ಚುಂಬಿಸಿ, ಕಡಲ ಮಾತಾಡಿಸಿ, ಗಿರಿಯ ಸವರಿ ,ಕಣಿವೆ ಹೊದ್ದು ಸಾಗಿದವು…ಮಳೆ ; ಎಲ್ಲಲ್ಲೂ ಮಳೆಪ್ರೀತಿಯ ವರ್ಷಧಾರೆ ಆಕೆ ಆತ ದೂರದಲ್ಲಿ ಕುಳಿತುಮಾತಾಡಿದರು ;ಮಳೆಯ ಜೊತೆಹೃದಯಗಳು ಒದ್ದೆಯಾದವುಕಣ್ಣೀರು ಮಳೆಯ ಹನಿಗಳ ಬೆರೆತವು ಮಳೆ ಲೋಕವನ್ನೆಲ್ಲಾ ಸುತ್ತಾಡಿತುಪ್ರೇಮಿಗಳೆಲ್ಲಾ ಮಳೆಯ‌ ಎದುರುಗೊಂಡರು , ಸಂಭ್ರಮಿಸಿದರು; ಹಳೆಯ ಖುಷಿ ನೆನೆದರು, ನೋವು ಸಹ ನೆನಪಿಸಿಕೊಂಡರು;ಕೊನೆಗೆ ಮಳೆ‌ ಸಂತೈಸಿ ಹೊರಟು ಹೋಯಿತು ಮಳೆ ನದಿಯಾಯಿತುಕುಟಿಲಪಥ ಕಾನನವ ದಾಟಿಕಡಲಬಳಿ ಬಂತು…ಅದು‌‌ ಕೊನೆಯ ಅನುಸಂಧಾನಯುಗ […]

Back To Top