Day: June 21, 2020

ಕಾವ್ಯಯಾನ

ಅಪ್ಪ ಬಿದಲೋಟಿ ರಂಗನಾಥ್ ವಾತ್ಸಲ್ಯದ ಕೆನೆಕಟ್ಟಿಅಪ್ಪನ ಕರಳು ಅರಳಿಕಿರುಬೆರಳಿಡಿದು ನಡೆದ ಸ್ಪರ್ಶದ ಸುಖಮೀಸೆ ಬಲಿತರೂ ಕಾಡುವ ನೆನಪು ಊರ ಜಾತ್ರೆಯಲಿಕನ್ನಡಕದೊಳಗಿನ ಕಣ್ಣು ಬರೆದ ಕವನಮೌನದ ಮೆದು ಭಾಷೆಯಲಿಹೃದಯ ತಟ್ಟಿ ಅವ್ವನ ನಿರರ್ಗಳ ಉಸಿರು ದುಡ್ಡಿಲ್ಲದ ಅಪ್ಪನ ಜೇಬಿನಲಿನೋವಿನ ಜೇಡರ ಬಲೆ ಕಟ್ಟಿದರೂಬಿಡಿಸುತ್ತಾನೆ ಎಳೆ ಎಳೆಯಾಗಿಕಾಲದ ನೆರಳ ಮೇಲೆ ಕುಳಿತು ಅಪ್ಪನ ಹೇಗಲ ಮೇಲೆಎರಡೂ ಕಾಲುಗಳು ಇಳಿಬಿಟ್ಟುಜಗದ ಬೆಳಕನು ಕಣ್ಣುಗಳಲ್ಲಿ ತುಂಬಿಕೊಂಡುನಡೆಯುವಾಗಿನ ದಾರಿಯ ಬದಿಯಲಿಗರಿಕೆ ಚಿಗುರುವ ಪರಿಗೆಸೂರ್ಯನಿಗೂ ಹೊಟ್ಟೆಕಿಚ್ಚು ಗುಡಿಸಲ ಕವೆಗೆ ನೇತಾಕಿದ್ದತಮಟೆಯ ಸದ್ದಿನಲಿಕತ್ತಲೆಯ ಬೆನ್ನು ಮುರಿವ ಗತ್ತುಬೀಡಿ […]

ಪ್ರಸ್ತುತ

ಅಪ್ಪ ರಾಘವೇಂದ್ರ ಈ ಹೊರಬೈಲು “ಮಾತೃದೇವೋಭವ ಪಿತೃದೇವೋಭವ ಆಚಾರ್ಯ ದೇವೋಭವ” ಭೂಮಿಯ ಮೇಲೆ ಕಣ್ಣಿಗೆ ಕಾಣುವ, ಜೊತೆಯಲ್ಲಿಯೇ ಇರುವ, ಕಷ್ಟವೆಂದಾಗ ಮರುಗುವ, ದಾರಿಗೆಡದಂತೆ ಮಾರ್ಗದರ್ಶನ ಮಾಡುವ ಮೂರು ದೈವಗಳೆಂದರೆ ತಂದೆ, ತಾಯಿ ಮತ್ತು ಗುರು. ಇಡೀ ಭೂಮಂಡಲದ ಪ್ರತಿಯೊಬ್ಬರಿಗೂ ಇವರೇ ನಿಜವಾದ ತ್ರಿಮೂರ್ತಿಗಳು. ಮಗುವನ್ನು ಸದ್ಗತಿಗೆ ತರುವಲ್ಲಿ ಮೂವರ ಪಾತ್ರವೂ ಬಹುಮುಖ್ಯವಾದುದು. ತಾಯಿಯಾದವಳು ಕರುಣಾಮಯಿಯಾಗಿ, ಮುದ್ದು ಮಾಡುತ್ತಾ, ಸದಾ ಮಗುವಿನ ಹಿತಕ್ಕಾಗಿಯೇ ಬದುಕುವವಳು. ಗುರುವಾದವನು ಮಗುವು ದಾರಿ ತಪ್ಪದಂತೆ ಮಾರ್ಗದರ್ಶನ ನೀಡಿ, ಜಗತ್ತಿನ ಪರಿಚಯ ಮಾಡಿಕೊಡುವವನು. ಆದರೆ […]

ಕಾವ್ಯಯಾನ

ನನ್ನಪ್ಪ ಎ ಎಸ್. ಮಕಾನದಾರ ಜೀವನದುದ್ದಕ್ಕೂ ತನ್ನ ಗುಡಸಲಿನಚಿಮಣಿಗೆ ಎಣ್ಣಿ ಹಾಕದೆ ಹಲವು ಮೆರವಣಿಗೆ ಗಳಲ್ಲಿ ಹಿಲಾಲು ಹಿಡಿಯುತ್ತಿದ್ದ ನನ್ನಪ್ಪನ ಮೈ ತುಂಬಾ ಗುಲಾಲುಕೈಯಲ್ಲಿ ಪ್ರಜ್ವಲಿಸುವ ಹಿಲಾಲುಮೆರವಣಿಗೆ ಅಡ್ಡ ಪಲ್ಲಕ್ಕಿಶವ ಸಂಸ್ಕಾರಕ್ಕೂ ಹೆಗಲು ಕೊಟ್ಟ ನನ್ನಪ್ಪ ಕಣ್ಣಲ್ಲಿ ಸೂರ್ಯ ತುಂಬಿ ಕೊಂಡುಎದೆಯ ಮೇಲೆ ಬುದ್ಧನನ್ನುಮಲಗಿಸಿ ಜೋಗುಳ ಹಾಡುವವ ನನ್ನಪ್ಪಲೆಕ್ಕವಿರದ ನಕ್ಷತ್ರಗಳು ತನ್ನ ಜೋಪಡಿಯಲ್ಲಿ ಇಣುಕಿದರೂಬಡತನವೆಂಬ ಬೇತಾಳನ ಗೆಳೆತನ ಬಿಡದ ನನ್ನಪ್ಪ ಮೆರವಣಿಗೆಯಲಿ ಹಿಲಾಲು ಹಿಡಿದುಹಿಡಿಕಾಳು ತಂದಾನುಜೋಪಡಿಯಿಂದ ಪಣತಿ ಬೆಳಗಿಸಿಯಾನು ಅಂದುಕೊಂಡು ಶಬರಿವೃತ ಹಿಡಿದಿದ್ದಳು ನನ್ನವ್ವ ಮೆರವಣಿಗೆಯಲಿ ತೂರುವಚುರುಮರಿ […]

ಕಾವ್ಯಯಾನ

ಒಲವೂ ಯುದ್ಧದ ಹಾಗೆ ನಂದಿನಿ ವಿಶ್ವನಾಥ ಹೆದ್ದುರ್ಗ ಒಲವೂ ಯುದ್ಧದ ಹಾಗೆಸಿದ್ದ ಸಿದ್ಧಾಂತವಿಲ್ಲ ಮೀರದೆ ಮೀಸಲುಚಹರೆ ಪಹರೆ ಅರಿತುನಿಖರ‌ ನಿಕಷದ ನಿಮಿತ್ತಕೊಡಬೇಕು ನಿರ್ವಾತ ಮೊಳೆಯುವ ಬೆಳೆಯುವಅರಳುವ ಹೊರಳುವಉರುಳುವ ಮರಳುವಆಕಾಶದ ಅವಕಾಶ. ತೆಗೆದ ಕದವೇ ಹದ.ಹೋಗಗೊಡಬೇಕು..ನಂಬುಗೆಗೆ ಕಳೆದ ಛಾವಿಯಗೊಡವೆ ಮರೆಯಬೇಕು ಸರಳರೇಖೆ ಹೃದಯವಾಗಲುಕಾಯಬೇಕು,ಬೇಯಬೇಕುಗಾಯಗಳ ಮಾಯಿಸಬೇಕು.ಅರಳಿದರೆ ಬಿಳಿ..ಮಳೆಬಿಲ್ಲು ಸಿದ್ದ ಸಿದ್ದಾಂತವಿಲ್ಲಗೆದ್ದರದು ಗೆಲುವಲ್ಲ ಒಡೆದ ಹೃದಯ ಛಿದ್ರ ಬದುಕು.ಹೊಲೆದು ಮಡಿಸಿಟ್ಟ ಕನಸುಕಾಲ ನುಂಗಿ ಕಣ್ಮರೆಯಾದ ಬಣ್ಣಯುದ್ಧ ಮುಗಿದ ಊರು ************8 __

Back To Top