ಪ್ರಸ್ತುತ
ಶಾಲೆಗಳ ಪುನರಾರಂಭ ಶಾಲೆಗಳನ್ನು ಪುನರಾರಂಭಿಸುವ ಕುರಿತು ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿ ಪಾಲಕರ, ಶಿಕ್ಷಕರ , ಆಡಳಿತ ಮಂಡಳಿಗಳ ಅಭಿಪ್ರಾಯ ಸಂಗ್ರಹಿಸುತ್ತಿದೆ.ಜುಲೈ 1 ರಿಂದ 4 ರಿಂದ 7 ನೇ ತರಗತಿ, ಜುಲೈ 15 ರಿಂದ 1 ರಿಂದ 3 ಮತ್ತು 8 ರಿಂದ 10 ನೇ ತರಗತಿ, ಜುಲೈ 20 ರಿಂದ ಪೂರ್ವ ಪ್ರಾಥಮಿಕ ತರಗತಿಗಳನ್ನು ಪುನರಾರಂಭಿಸುವ ಪ್ರಸ್ತಾವನೆಯನ್ನು ಸರ್ಕಾರ ಜನರ ಮುಂದಿಟ್ಟಿದೆ. ಮೊದಲನೇ ಮಾದರಿ ಮತ್ತು ತಾರೀಖುಗಳೆರಡೂ ಸಮಂಜಸವಾಗಿವೆಯೆಂಬುದು ನನ್ನ ಅಭಿಪ್ರಾಯ.ತರಗತಿಗಳನ್ನು ನಡೆಸಲು ಮೂರು […]
ಲಹರಿ
ಮಾವಿನ ಪುರಾಣ ಮಾವಿನ ಪುರಾಣ ಹಣ್ಣುಗಳಲ್ಲಿ ಮಾವು ಕೊಡುವ ಖುಷಿ, ಯಾವ ಹಣ್ಣು ಕೂಡ ಕೊಡದು ಎಂದರೆ ತಪ್ಪಾಗಲಾರದು.ಹಣ್ಣುಗಳಲ್ಲಿ ಮಾವಿಗೆ ವಿಶೇಷ ಸ್ಥಾನಮಾನ,ರಾಜಮರ್ಯಾದೆ.ಮಾವಿನ ಹಣ್ಣು, ಹಣ್ಣುಗಳ ರಾಜ. ಬೇಸಿಗೆ ಶುರುವಾದೊಡನೆ ಮಾವು ಶುರುವಾಗುತ್ತದೆ.ನಮ್ಮಲ್ಲಿ ಮೊದಲು ಗಿಣಿಮೂತಿ ಮಾವಿನಕಾಯಿ ಜೊತೆ ಈ ಸೀಸನ್ ಶುರುವಾಗುತ್ತದೆ.ಎರೆಡು ಮಳೆ ಆಗುವ ತನಕ ಮಾವು ತಿನ್ನುವುದಿಲ್ಲ.ಒಂದು ದೃಷ್ಟಿ , ಬಂದ ಈ ಗಿಣಿಮೂತಿ ಕಾಯಿಯ ಮೇಲೆ ಇಟ್ಟುಕೊಂಡು ನೋಡದ ಹಾಗೆ ಮಾರುಕಟ್ಟೆಯಲ್ಲಿ ಓಡಾಡುತ್ತೇವೆ.ಮಳೆ ಸ್ವಲ್ಪ ಲೇಟಾದರೆ ಚಡಪಡಿಕೆ ಶುರು.ನಾಲ್ಕೋ,ಐದೋ ಗಿಣಿ ಮಾವಿನಕಾಯಿ ಖರೀದಿಸಿ […]
ಪರಮೂ ಪ್ರಪಂಚ
ಪರಮೂ ಪ್ರಪಂಚಕಥಾಸಂಕಲನಲೇಖಕರು- ಇಂದ್ರಕುಮಾರ್ ಎಚ್.ಬಿಇಂಪನಾ ಪುಸ್ತಕ ವೃತ್ತಿಯಿಂದ ಶಿಕ್ಷಕರಾಗಿರುವ ಇಂದ್ರಕುಮಾರ್ ಅವರು ನಾಡಿನ ಪ್ರಮುಖ ಕಥೆಗಾರರಲ್ಲಿ ಒಬ್ಬರು. ಮೊನ್ನೆಯಷ್ಟೇ ಅವರ ಕಥೆಯೊಂದು ‘ ಸೂಜಿದಾರ ‘ ಎಂಬ ಹೆಸರಿನಲ್ಲಿ ಸಿನೆಮಾ ಆಗಿದೆ. ‘ಆ ಮುಖ’, ‘ನನ್ನ ನಿನ್ನ ನೆಂಟತನ’, ‘ಪರಮೂ ಪ್ರಪಂಚ’ ಮತ್ತು ‘ಕಾಣದ ಕಡಲು’ ಅವರ ಕಥಾಸಂಕಲನಗಳು.‘ಮೃದುಲಾ’,’ ಹುಲಿಕಾನು ‘ ಅವರ ಪ್ರಕಟಿತ ಕಾದಂಬರಿಗಳು. ಈ ಕಥಾಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ಗಿಫ್ಟ್ – ಇಪ್ಪತ್ತು ವರ್ಷಗಳ ನಂತರ ಸಂತೆಯಲ್ಲಿ ಸಿಕ್ಕ ಇಬ್ಬರು ಪ್ರೇಮಿಗಳ ಕಥಾನಕ. […]