ಕಾವ್ಯಯಾನ
ಏಕೆ ಹೀಗೆ? ನೀ.ಶ್ರೀಶೈಲ ಹುಲ್ಲೂರು ಅಧರದಲಿರುವ ಲಾಲಿ ರಂಗುಪದರು ಪದರಾಗೆರಗುತಿಹುದುಮರುಗುತಿರುವ ಮನದ ಮತಿಯುಅತಿಯ ಮೀರಿ ಕೊರಗುತಿಹುದು ಕಣ್ಣಲಿಟ್ಟ ಒಲವ ಬಾಣಎದೆಯನಿರಿದು ನರಳುತಿಹುದುಕಳೆದಿರುವ ಕಾಲ ಸಾಲುಪದವ ಕಿತ್ತು ಕೊರಗುತಿಹುದು ಆಗಸದ ಸೊಗಸ ಮೋಡನಕ್ಕು ತಾನೆ ಅಳುತಲಿಹುದುಚಕ್ರವಾಕ ಹೆದೆಯ ಮೆಟ್ಟಿಮುದವನಪ್ಪಿ ನಗುತಲಿಹುದು ಇರುವ ಸುಖದ ಕೊರಳ ಮುರಿದುದು:ಖ ಕೇಕೆಗೈಯುತಿಹುದುದಾರಿ ನಡೆವ ಧೀರನೆದೆಗೆಒದ್ದು ಹಾಸಗೈಯುತಿಹುದು ಮನುಜರಾಳದೊಡಲ ಬಗೆದಕರುಳೆ ಸಿಳ್ಳೆಯೂದುತಿಹುದುಭವದಿ ತೇಲುತಿರುವ ಘಟದಉಸಿರ ಗುಳ್ಳೆಯೊಡೆಯುತಿಹುದು ಏಕೆ ಹೀಗೆ ದೇವ ಭಾವ ?ತನ್ನ ತಾನೆ ತುಳಿಯುತಿಹುದುನರರ ನಡುವೆ ನರಕ ತೂರಿಮರುಕವಿರದೆ ಅಳಿಯುತಿಹುದು *******
ಪರಿಸರ
ಮರಗಳ ಕಡಿದರೆ ಖಚಿತ ನಮ್ಮದೇ ಮಾರಣ ಹೋಮ!! ಜಯಶ್ರೀ ಜೆ.ಅಬ್ಬಿಗೇರಿ ಇದು ಕೇವಲ ಇಪ್ಪತ್ತು ಮೂವತ್ತು ವರ್ಷಗಳ ಹಿಂದಿನ ಮಾತು ಪ್ರತಿ ಗ್ರಾಮದಲ್ಲೂ ಚಾವಡಿ ಕಟ್ಟೆಗೆ ಹೊಂದಿಕೊಂಡಂತೆ ಮತ್ತು ಊರ ಹೊರಗಿನ ಗ್ರಾಮ ದೇವತೆಯ ದೇವಸ್ಥಾನದ ಸನಿಹ ಗಿಡ ಮರಗಳ ಸೊಂಪಾದ ನೆರಳು ಇದ್ದೇ ಇರುತ್ತಿತ್ತು. ದುಡಿದು ದಣಿದು ಬಂದ ರೈತಾಪಿ ವರ್ಗ, ಹಿರಿಯರು, ಹೈದರು ಮಕ್ಕಳಿಗೆಲ್ಲ ಮನದ ಭಾವನೆಗಳನ್ನು ಹಂಚಿಕೊಳ್ಳುವ ಅಡ್ಡಾದಂತೆ ಕೆಲಸ ನಿರ್ವಹಿಸುತ್ತಿತ್ತು. ಪ್ರತಿಯೊಬ್ಬರ ಮನೆಯ ಹಿಂದೆ ಹಿತ್ತಲಿನಲ್ಲಿ ತರಹೇವಾರಿ ತರಕಾರಿಯೊಂದಿಗೆ […]
ಆವಿಷ್ಕಾರ
ಆವಿಷ್ಕಾರ ಡಾ.ಅಜಿತ್ ಹರೀಶಿ ಗುಪ್ತಗಾಮಿನಿ ರಕುತಹೃದಯದೊಡಲಿಂದ ಚಿಮ್ಮುತಕೋಟಿ ಜೀವಕಣಗಳಿಗುಣಿಸುತಜೀವಿತವ ಪೊರೆಯುವುದುಎಷ್ಟು ಸಹಸ್ರಕಾಲದ ನಡೆಯುಹೀಗೆ ಅರಿವಾದಂತೆಹೊಸ ಕಾಯಕಲ್ಪ ಜೀವನಕ್ಕೆ…! ಪರಮಾಣುಗಳಲಿ ಅದುಮಿಟ್ಟಬಹಳ ಬಲವಾದ ಸ್ಫೋಟಅಣ್ವಸ್ತ್ರಗಳೊಳಗೆ ಬಿಗಿದಿಟ್ಟುಲಕ್ಷ ಜೀವಗಳ ಮರಣಪಟ್ಟಿರಣಕಹಳೆ ಊದುವ ಮೊದಲೇಯುದ್ಧ ನಡೆಸುವ ರಣನೀತಿಅಸ್ತ್ರಗಳು ಅಣುವಾದಂತೆಬೃಹತ್ ದ್ವೇಷ ಜಗಕ್ಕೆ…! ಧರಣಿ ಹೂಡದ ಧರೆಯ ಮೇಲೆಹಸಿರುಟ್ಟು ನಿಂತ ಸಸ್ಯಶ್ಯಾಮಲೆಕಾಡು, ನಾಡಿಗೆ ಜೀವಂತ ದೇವರೇಇವು ಜೀವಿಸುತ್ತವೆ, ಎಂಬ ವಿಜ್ಞಾನಈ ತಿಳಿವು ಬಂದಂತೆಮುನ್ನಡೆಯಾಯಿತು ವಿನಾಶಕ್ಕೆ..! **********
ಅಂಕಣ ಬರಹ
ಸಂಪ್ರೋಕ್ಷಣ ಬಣ್ಣಗಳಲ್ಲದ್ದಿದ ಬದುಕು ಅಂಜನಾ ಹೆಗಡೆ ಬಣ್ಣಗಳೇ ಇರದಿದ್ದರೆ ಜಗತ್ತು ಹೇಗಿರುತ್ತಿತ್ತು ಯೋಚಿಸಿ ನೋಡಿ. ಪುಟ್ಟ ಮಗುವೊಂದು ಬಣ್ಣದ ಬಲೂನುಗಳ ಹಿಂದೆ ಓಡುವ ದೃಶ್ಯವೇ ಕಾಣಸಿಗುತ್ತಿರಲಿಲ್ಲ. ಗಾಳಿಪಟವೊಂದು ಚೂರುಚೂರೇ ನೆಗೆಯುತ್ತ ಆಕಾಶಕ್ಕೆ ಎಗರಿ ಬಣ್ಣದ ಲೋಕವೊಂದನ್ನು ಸೃಷ್ಟಿಸುತ್ತಲೇ ಇರಲಿಲ್ಲ. ಕೆಂಡಸಂಪಿಗೆಗೆ ಕೆಂಡದಂತಹ ಬಣ್ಣವಿರುತ್ತಿರಲಿಲ್ಲ. ಕಾಮನಬಿಲ್ಲೊಂದು ಹುಟ್ಟುತ್ತಲೇ ಇರಲಿಲ್ಲ. ಬಣ್ಣಗಳಿಲ್ಲದಿದ್ದರೆ ಕಲೆ, ಸೌಂದರ್ಯ, ಪ್ರಕೃತಿ ಇವೆಲ್ಲವುಗಳ ಪರಿಕಲ್ಪನೆ ಬೇರೆಯೇ ಏನೋ ಆಗಿರುತ್ತಿತ್ತು. ಅದೇನಾಗಿರಬಹುದಿತ್ತು ಎಂದು ಒಂದು ಸೆಕೆಂಡು ಯೋಚಿಸಿದರೂ ಒಂದಿಷ್ಟು ಬಣ್ಣಗಳೂ ಯೋಚನೆಯೊಂದಿಗೆ ಅಂಟಿಕೊಳ್ಳುತ್ತವೆ. ಯೋಚನೆಗಳಷ್ಟೇ ಅಲ್ಲದೇ […]