ಕಾವ್ಯಯಾನ

ಅಂತಃಸಾಕ್ಷಿ

new year

ವೀಣಾ ರಮೇಶ್

ನನ್ನ ಪ್ರತಿಹೆಜ್ಜೆಯಲ್ಲೂ ನೀ
ಹೆಜ್ಜೆ ಹಾಕು ಎಂದು ನಾನು
ಕೇಳುವುದಿಲ್ಲ

ನನ್ನ ಪ್ರತಿಮಾತಿಗೂ
ಕಿವಿಯಾಗಿರು ಎಂದು
ನಾನು ಹೇಳುವುದಿಲ್ಲ

ನನ್ನ ನುಡಿಗೆ ದನಿಯಾಗಿರು
ನನ್ನ ಉಸಿರಿಗೆ
ಎದೆಯ ಬಡಿತದ ಸದ್ದಾಗಿರು ಎಂದು ಕೇಳುವುದಿಲ್ಲ

ತಂಪಾಗಿ,ನನ್ನ ಬೆನ್ನ ಹಿಂದೆ
ನೆರಳಾಗಿ, ಕಾವಲಾಗಿರು
ಎಂದು ನಾನು ಕೇಳುವುದಿಲ್ಲ

ನನ್ನ ಆತ್ಮಸಾಂಗತ್ಯಕ್ಕೆ
ನಿನ್ನ ಅಂತರಾತ್ಮ
ನೀಡುವ ಸಂವೇದನೆಗೆ
ಸುಪ್ತಮನಸ್ಸಾಗಿರೂ ಎಂದೂ
ಬೇಡುವುದಿಲ್ಲ

ಆದರೆ ನಾನು,ನೀನು
,ನಾವಿಬ್ಬರೂ
ಒಂದೇ ಅನ್ನುವ ಅಂತಃಸಾಕ್ಷಿ
ನಿನ್ನ ಅಂತರಂಗ ಹೇಳಿದರೆ
ಸಾಕು,ನಾನೇನೂ ಕೇಳುವುದಿಲ್ಲ

***********

Leave a Reply

Back To Top