ಮತ್ತೆ ಮರೆಯಾಗುವ ತವಕವೇತಕೆ
ಮೋಡಗಳೆ ಮೋಡಗಳೆ
ಏಕಿಷ್ಟು ಅವಸರ
ಹೊರಟಿರುವಿರೇತಕೆ
ತಿರುಗಿ ನೋಡದೇ .
ಬಾನಂಗಳದಲಿ
ಚಿತ್ತಾರ ಮೂಡಿಸಿ
ಮತ್ತೆ ಮರೆಯಾಗುವ
ತವಕವೇತಕೆ?
ಒಂದು ಹನಿಯೂ
ಸುರಿಸದೆ.
ಬಾಯಾರಿದ
ಭೂಮಿಯು ಬಾಯ್ತೆರೆದು ನಿಂತಿದೆ
ನೀವು ಸುರಿಸುವ ಹನಿಗಳಿಗಾಗಿ.
ಕವಲೊಡೆದಿದೆ ಮಣ್ಣು
ಜೀವಜಲದ ಆಸೆಯಿಂದ
ಅತ್ತಲೊ ಇತ್ತಲೊ
ಒಮ್ಮೆ ಜೊರಾಗಿ
ಗಾಳಿ ಬಿಸುತಿರಲು
ಹೊರಟೆ ಬಿಟ್ಟಿರಾ
ಗಾಳಿಯ ಜೊತೆಯಾಗಿ.
ಭೂಮಿಯದು ನಳನಳಿಸುತಿದೆ ಹಸಿರು
ಸೀರೆ ಯನು ಹೊದ್ದು
ಸದಾ ಋಣಿಯಾಗಿಹೆ ನಾವು
ಭೂತಾಯಿ ನಿಮಗೆ.
*******
ಡಾ.ಪ್ರತಿಭಾ