ಮಳೆ

Close Up Photography of Water Flow

ಮಳೆ
ನೆಲ‌ ಮುಗಿಲಿನ ಅನುಸಂಧಾನ
ಪ್ರೀತಿಯಂತೆ

ಮಳೆ ಮೋಡ ಕಪ್ಪು ಮೋಡ ಮುಗಿಲ ಚುಂಬಿಸಿ, ಕಡಲ ಮಾತಾಡಿಸಿ, ಗಿರಿಯ ಸವರಿ ,ಕಣಿವೆ ಹೊದ್ದು ಸಾಗಿದವು…
ಮಳೆ ; ಎಲ್ಲಲ್ಲೂ ಮಳೆ
ಪ್ರೀತಿಯ ವರ್ಷಧಾರೆ

ಆಕೆ ಆತ ದೂರದಲ್ಲಿ ಕುಳಿತು
ಮಾತಾಡಿದರು ;
ಮಳೆಯ ಜೊತೆ
ಹೃದಯಗಳು ಒದ್ದೆಯಾದವು
ಕಣ್ಣೀರು ಮಳೆಯ ಹನಿಗಳ ಬೆರೆತವು

ಮಳೆ ಲೋಕವನ್ನೆಲ್ಲಾ ಸುತ್ತಾಡಿತು
ಪ್ರೇಮಿಗಳೆಲ್ಲಾ ಮಳೆಯ‌ ಎದುರುಗೊಂಡರು , ಸಂಭ್ರಮಿಸಿದರು; ಹಳೆಯ ಖುಷಿ ನೆನೆದರು, ನೋವು ಸಹ ನೆನಪಿಸಿಕೊಂಡರು;
ಕೊನೆಗೆ ಮಳೆ‌ ಸಂತೈಸಿ ಹೊರಟು ಹೋಯಿತು

ಮಳೆ ನದಿಯಾಯಿತು
ಕುಟಿಲಪಥ ಕಾನನವ ದಾಟಿ
ಕಡಲಬಳಿ ಬಂತು…
ಅದು‌‌ ಕೊನೆಯ ಅನುಸಂಧಾನ
ಯುಗ ಯುಗಗಳ ದುಃಖ
ಸುಖ ಕನಸು ಕಾತುರ ಪ್ರೇಮವ ದಂಡೆಯಲಿ ಬಿಚ್ಚಿ ಹರಡಿ ಹರಟೆಯೊಡೆದು
ಪಟ್ಟ ಪಾಡು , ಬಿಟ್ಟ ಹಠ , ಕೊಟ್ಟ ಪ್ರೀತಿಯ ನಿವೇದಿಸಿತು
ಸಂತೈಸಿದ ಕಡಲ‌ದಂಡೆ
ಮತ್ತೆ ಮಳೆಯಾಗಿ ಎಲ್ಲರ‌ ಮಾತಾಡಿಸಿ ಬರೋಣ ಎಂದಿತು
**********

ನಾಗರಾಜ್ ಹರಪನಹಳ್ಳಿ

2 thoughts on “

Leave a Reply

Back To Top