ಚಿಲುಮೆ
ಮಳೆಹನಿ
ಗಡಿಯಾರದ ಮೂರು ಮುಳ್ಳುಗಳಿದ್ದಂತೆ
ಕಾಲಕಾಲಕ್ಕೆ ತಿರುಗುತಿವೆ
ಋತುಗಳು ಭಾಗವಾಗಿ
ಬೇಸಿಗೆಯಲ್ಲಿ ಅದುಮಿಟ್ಟ
ಶಿಶ್ನ
ಮಳೆಯಲಿ ಚಿಗುರೊಡೆದು
ಪುಟಿದೇಳುತ್ತದೆ ಚಳಿಯಲಿ
ಹಿಡಿತ ಮೀರಿ
ಮುಪ್ಪಾಗದ ಯೋನಿ
ಸ್ವಾಗತಿಸುತ್ತಿದೆ
ಕಾಲದ ನಾಚಿಕೆ ಬದಿಗಿಟ್ಟು
ಅಲೆಯುತ್ತಿದೆ ಪಕ್ವಗೊಂಡ ಅಪ್ರಜ್ಞೆ
ಬೆಡ್ ರೂಮ್ ಬಾತ್ ರೂಮ್ ಗಳ
ಪರಿಧಿ ಆಚೆ
ಮಿಡುಕಾಡುತ್ತಿದೆ ಮಳೆಹನಿ
ಸರಿಸೃಪಗಳು ತಲೆಯೆತ್ತಿ
ಹೆಡೆಯೆತ್ತಿ
ತಣಿಸಿಕೊಂಡಂತೆ ಮೋಹ
ಚಂದಿರನ ರಾತ್ರಿಯಲಿ
ಪುಟಿವ ನೀರ ಚಿಲುಮೆಯಂತೆ
*********
ದೇವು ಮಾಕೊಂಡ