Month: June 2020

ಕಾವ್ಯಯಾನ

ತುಡಿತ ವಿಜಯ್ ಶೆಟ್ಟಿ ಎಲ್ಲ ಮರೆತ ಒಂದು ಹಳೆಯಊರಕೇರಿಯ ದಾರಿಗುಂಟಸತತಸೈಕಲ್ ತುಳಿಯುವ ತುಡಿತನನಗೆ. ಇನ್ನೇನು ದಿನ ಕಳೆದು,ಉದಯಕ್ಕೆ ಸಿದ್ದವಾದ ರಾತ್ರಿಗೆ,ಸಂಜೆಯ ಹುಂಜದ ಹಂಗಿಲ್ಲಅಪರಿಚಿತ ಊರಕೇರಿಯ ದಿಕ್ಕುಹಣ್ಣು ಹಣ್ಣಾದ ರಸ್ತೆಗೂ ಎಂತಹ ಸೊಕ್ಕು! ತುಸುವೇ ಹೊತ್ತಿನ ಬಳಿಕನಾನು ತಲುಪುವ ಕೇರಿಯಾದರೂ ಎಂಥದು? ಮುದಿ ಲಾಟೀನಿನ ಮಂದ ಬೆಳಕಲ್ಲಿಮಿಂದ ಮುಖಗಳೊ,ಮಿಣುಕುವ ಕಣ್ಣುಗಳೋಆ ಊರಿನಲ್ಲಿ?ನೀರವತೆಯ ಬೆನ್ನಟ್ಟಿ ಗಾಳಿಯನ್ನು ಗೋಳಿಕ್ಕುವ ತೆಳು ಹಾಡಿನಂಥ ಸದ್ದುಗಳೋಆ ಊರಿನಲ್ಲಿ?ಒಣ ಗಂಡಸರು,ಇಲಿಗಳಂತ ಮಕ್ಕಳು,ಬಳೆಯ ಹೆಂಗಸರೋಆ ಊರಿನಲ್ಲಿ? ನನ್ನನು ಅಲ್ಲಿ ಊಹಿಸುವ ಉಮೇದಿಗೆ ದುಗುಡ ಕೂಡ ಬೆರೆತಿದೆಒಂದೋಅಪರಿಚಿತ ಗುಡಿಸಲೊಂದರಲ್ಲಿಮಂಕು […]

ಪುಸ್ತಕ ವಿಮರ್ಶೆ

ವಿರಹಿ ದಂಡೆ ವಿರಹಿ ದಂಡೆ ( ಕವನ ಸಂಕಲನ )ಲೇಖಕ: ನಾಗರಾಜ್ ಹರಪನಹಳ್ಳಿನೌಟಂಕಿ ಪ್ರಕಾಶನಬೆಲೆ – 80 ವಿರಹಿ ದಂಡೆಯ ವಿಹಾರವ ಹೊತ್ತು…. ಪ್ರಕೃತಿಯನ್ನು ತನ್ನೊಳಗೆ ಆವಾಹಿಸಿಕೊಂಡು ಆ ಆವಾಹನೆಯಲ್ಲಿ ವಿವಿಧ ತೆರನಾದ ತುಮುಲಗಳನ್ನು ಅನುಭವಿಸಿ ಕೊಳ್ಳುವುದು ಒಂದು ಅಪರೂಪದ ಪ್ರಕ್ರಿಯೆ. ಅದು ಜಗತ್ತಿನಲ್ಲಿ ವಿಜ್ಞಾನಿ ಗಳಿಗಿಂತ ಕವಿಗಳಿಗೆ ಸುಲಭವಾಗಿ ಸಾಧ್ಯವಾಗುವಂತದ್ದಾಗಿದೆ. ಪ್ರಕೃತಿ ತನ್ನೊಳಗೆ ಅಡಗಿಸಿಕೊಂಡಿರುವಂತಹ ಸರ್ವ ಪರಿಕರಗಳೂ ಕೂಡ ಕವಿಯ ಆಸ್ತಿಯಂತೆ. ತನ್ನ ಕಲ್ಪನೆಗೆ ಅನುಭವಕ್ಕೆ ಬೇಕಾದಾಗ ಪ್ರಕೃತಿಗೆ ಹಾಗೂ ಪ್ರಕೃತಿಯ ವಸ್ತುಗಳಿಗೆ ಬಣ್ಣ ಕೊಟ್ಟಿಕೊಳ್ಳುವ […]

ವಿಮರ್ಶೆ

ದೇವರದೇನು ದೊಡ್ಡಸ್ತಿಕೆ ಬಿಡು ನನ್ನ ಗಂಡನ‌ ಮುಂದ (ಆನಂದ ಕಂದರ ಪದ್ಯವೊಂದರ ಅನ್ವಯಿಕ ವಿಮರ್ಶೆ) ನಲ್ವಾಡುಗಳು ಆನಂದ ಕಂದರ(ಬೆಟಗೇರಿ ಕೃಷ್ಣಶರ್ಮರ) ಕವಿತಾ ಸಂಕಲನ. ಹೊಸಗನ್ನಡದ ಶ್ರೇಷ್ಠ ಸಂಕಲನಗಳಲ್ಲೊಂದು.ಇ ದರಲ್ಲಿ‌ ಇಪ್ಪತ್ತೊಂದು ಗೀತಗಳಿವೆ.ಇವುಗಳನ್ನು ಜನಪದ ಪ್ರೀತಿಗೀತಗಳು ಎಂದು ಅವರೇ ಕರೆದಿದ್ದಾರೆ.ಹೆಸರೇ ಹೇಳುವಂತೆ ಸಂಕಲನದ ತುಂಬ ಇರುವದು ಹಳ್ಳಿಗರ ಪ್ರೀತಿ‌ಲೋಕವೇ.ಜಾನಪದ ಮುಗ್ಧ ಗಂಡು ಹೆಣ್ಣುಗಳ ಸಹಜ ಪ್ರೀತಿ,ಅವರ ದಾಂಪತ್ಯ ಅಲ್ಲಿನ ಸಹಜ ಸುಂದರ ಲೋಕ ಈ ಕವಿತೆಗಳ ವಸ್ತು.ಗಂಡು ಹೆಣ್ಣು ಪರಸ್ಪರ ಆಕರ್ಷಣೆಗೊಳಗಾಗುವ ಚಿತ್ರದಿಂದ ಹಿಡಿದು ಅವರ ಮದುವೆ, ಸುಂದರ […]

ಕಾವ್ಯಯಾನ

ಕಣ್ಣೀರು ಜಗದೀಶ್ ಬನವಾಸಿ ಕಣ್ಣೀರು ಬರುವಷ್ಟು ಬರಲಿಎದೆಯ ನೋವು ತೊಳೆದುನೆನಪುಗಳ ಪುಟ ಓದ್ದೆಯಾಗುವಂತೆಮತ್ತೆಂದು ಅವು ತಿರುಗಿ ಬಾರದಂತೆ ಅಳು ಬರುವಷ್ಟು ಅತ್ತು ಬಿಡುನೆನಪುಗಳು ನೇಪಥ್ಯಕ್ಕೆ ಮರಳಿಮರೆಯಾದ ಕನಸೊಂದು ರೆಕ್ಕೆಬಿಚ್ಚದಂತೆಮತ್ತೆಂದು ಅವು ತಿರುಗಿ ಬಾರದಂತೆ ಅಳುವ ಹರಿವಿಗೆ ತಡೆಯಾಗುವಗೊಡ್ಡು ನೆಪಗಳ ಒಡ್ಡದಿರುಒಡೆದ ಕಟ್ಟೆ ಬರಿದಾಗಲಿ ಬಿಡುಮತ್ತೆಂದು ಅವು ತಿರುಗಿ ಬಾರದಂತೆ. *******

ಕಾವ್ಯಯಾನ

ಸಂಕೋಲೆ ಸಾಯಬಣ್ಣ ಮಾದರ ಬಿಟ್ಟು ಬಿಡಿಬಿಟ್ಟು ಬಿಡಿಕೈ ಕಟ್ಟಿ ನೆಲಕ್ಕೆ ಹಾಕಿಮಂಡಿಯೂರಿ ಕುಳಿತಿರುವರೆಉಸಿರಾಡಲುಗುತ್ತಿಲ್ಲ ಬಿಟ್ಟು ಬಿಡಿ ನಿಲುತ್ತಿದೆ ವರ್ಣಕ್ಕಾಗಿ ಉಸಿರು ಅಲ್ಲಿಜಾತಿ ಧರ್ಮಕ್ಕಾಗಿ ನಿಲ್ಲುತ್ತಿದೆ ಇಲ್ಲಿ ಮನುಷ್ಯರು ನಾವುನೀವು ಕ್ರೂರಿ ಮೃಗಗಳೆ? ಚರ್ಮದೊಳಗೆ ರಕ್ತ ಉಂಟುಅದರಲ್ಲಿ ವರ್ಣ ಜಾತಿ ಉಂಟೆ?ಬೇರೆ ಬೀಜಕ್ಕೆ ಹುಟ್ಟಿದ ಮರ ನೀವುತಯಾರಾಗಿದೆ ಕಾಲವೇ ಕಡಿಯಲು ಮಸಣದಲ್ಲಿ ಮಾನವೀಯತೆ ಹೂತ್ತುಮನುಷ್ಯತ್ವವೆ ಮೂಲೆಗೊತ್ತಿಜಾತಿ ಎಂಬ ಶಿಖರ ಏರಿವರ್ಣದ ಗಿರಿ ಮುಟ್ಟಿಅರ್ಚುವ ಮೂರ್ಖರೇಯಾವ ಜೀವಿ ನೀವು ನೀರಿಗಾಗಿ ಕೆರೆ ಮುಟ್ಟಿದ ಹೆಣ್ಣನ್ನುಕಟ್ಟಿ ಬಡಿದು ಕೇಕೆ ಹಾಕಿದವರು ನೀವುನೀರು […]

ಹಾಸ್ಯ

ಮನೆಯೇ ಮಂತ್ರಾಲಯ? ಜ್ಯೋತಿ ಡಿ .ಬೊಮ್ಮಾ ಮತ್ತದೆ ಸಂಜೆ ಅದೇ ಬೇಸರದಲ್ಲಿ ಎಕಾಂಗಿಯಾಗಿ ಕುಳಿತಿದ್ದಾಗ ಬಾಜು ಮನಿ ಅಕ್ಕೋರು ಬಂದರು ,ಬರ್ರಿ ಬರ್ರಿ ಎಂದು ಸ್ವಾಗತಿಸಿ ಪಕ್ದಲ್ಲೆ ಇದ್ದ ಖುರ್ಚಿ ಕಡೆಗೆ ಕೈ ತೊರಿಸಿದೆ ಕುಳಿತುಕೊಳ್ಳಲು.ಕುರ್ಚಿ ಸರಕ್ಕನೆ ನನ್ನಿಂದ ನಾಲ್ಕು ಮಾರು ದೂರ ಎಳೆದುಕೊಂಡು ಕುಳಿತರು .ಮುಖಕ್ಕೆ ಮಾಸ್ಕ ಹಾಕಿಕೊಂಡೆ ಮಾತಾಡತೊಡಗಿದರು.ನಿಮಗ ಗೊತ್ತದ ಇಲ್ಲ ,ಇಲ್ಲೆ ಬಾಜು ಕಾಲೊನಿದಾಗ ಯಾರಿಗೋ ಕರೊನಾ ಬಂದದಂತರ್ರಿ ,ಅವರ ಮನ್ಯಾಗಿನವರಿಗೆಲ್ಲ ಎಳಕೊಂಡು ಹೊಗ್ಯಾರಂತ ,ಮುಖಕ್ಕೆ ಹಾಕಿದ ಮಾಸ್ಕ ತೆಗೆದು ಅಲ್ಲೆ ಪಕ್ಕದಲ್ಲಿ […]

ಕಾವ್ಯಯಾನ

ಗೆ ರಾಮಸ್ವಾಮಿ ಡಿ.ಎಸ್. ನೀನು ನಡೆಸಿಕೊಡಬಹುದಾದ ಒಂದು ಮಾತುನನ್ನಲ್ಲೇ ಶಾಶ್ವತವಾಗಿ ಉಳಿದು ಬಿಟ್ಟಿದೆ.ಅದು ನನ್ನ ಮೇಲಿನ ದ್ವೇಷವೋ,ಅಸಹನೆಯೋವಿಶ್ವಾಸವೋ ಅಥವ ಹೇಳಲಾಗದ ಪ್ರೀತಿಯೋಆ ಉಳಿದು ಹೋದ ಮಾತನ್ನ ನೀನುಕಣ್ಣಲ್ಲಿ ಕಣ್ಣಿಟ್ಟು ಬೆರಳಿಗೆ ಬೆರಳ ಹೊಸೆದುಹಣೆಯ ಚುಂಬಿಸಿ ಹೇಳಿದ್ದೆಎಂದರೆ ಇಲ್ಲ, ಋಜುವಾತಿಗೆ ಸಾಕ್ಷಿ. ಆದರೆ ಇದ್ದಕ್ಕಿದ್ದಂತೆ ಹೀಗೆ ನನ್ನೊಂದಿಗೆ ಮಾತು ನಿಲ್ಲಿಸಿ,ಅವರಿವರ ಜೊತೆಗೆ ಮಾತಿನ ನಟನೆಯಾಡಿದರೆಮತ್ಯಾರದೋ ಪಟಕ್ಕೆ ಚಂದ ಎಂದು ಲೈಕಿಸಿದರೆನನ್ನ ಹೊಟ್ಟೆಯಲ್ಲೇನೂ ಕಿಚ್ಚು ಹೊತ್ತುವುದಿಲ್ಲಬದಲಿಗೆ ನಿನ್ನ ಸಂಕಟವ ಅಳೆಯಬಲ್ಲೆ.ಎಲ್ಲವನೂ ಮರೆತವರಂತೆ ಕೂಡಿದ್ದು, ಕಳೆದದ್ದುಕನಸ ಗುಣಿಸುತ್ತಲೇ ಕಡೆಗೆ ಬದುಕ ಭಾಗಿಸಿದ್ದುಭವದ […]

ಪ್ರಸ್ತುತ

ಶಾಲೆಗಳ ಪುನರಾರಂಭ ಶಾಲೆಗಳನ್ನು ಪುನರಾರಂಭಿಸುವ ಕುರಿತು ಕರ್ನಾಟಕ ಸರ್ಕಾರ ಸುತ್ತೋಲೆ ಹೊರಡಿಸಿ ಪಾಲಕರ, ಶಿಕ್ಷಕರ , ಆಡಳಿತ ಮಂಡಳಿಗಳ ಅಭಿಪ್ರಾಯ ಸಂಗ್ರಹಿಸುತ್ತಿದೆ.ಜುಲೈ 1 ರಿಂದ 4 ರಿಂದ 7 ನೇ ತರಗತಿ, ಜುಲೈ 15 ರಿಂದ 1 ರಿಂದ 3 ಮತ್ತು 8 ರಿಂದ 10 ನೇ ತರಗತಿ, ಜುಲೈ 20 ರಿಂದ ಪೂರ್ವ ಪ್ರಾಥಮಿಕ ತರಗತಿಗಳನ್ನು ಪುನರಾರಂಭಿಸುವ ಪ್ರಸ್ತಾವನೆಯನ್ನು ಸರ್ಕಾರ ಜನರ ಮುಂದಿಟ್ಟಿದೆ. ಮೊದಲನೇ ಮಾದರಿ ಮತ್ತು ತಾರೀಖುಗಳೆರಡೂ ಸಮಂಜಸವಾಗಿವೆಯೆಂಬುದು ನನ್ನ ಅಭಿಪ್ರಾಯ.ತರಗತಿಗಳನ್ನು ನಡೆಸಲು ಮೂರು […]

ಲಹರಿ

ಮಾವಿನ ಪುರಾಣ ಮಾವಿನ ಪುರಾಣ ಹಣ್ಣುಗಳಲ್ಲಿ ಮಾವು ಕೊಡುವ ಖುಷಿ, ಯಾವ ಹಣ್ಣು ಕೂಡ ಕೊಡದು ಎಂದರೆ ತಪ್ಪಾಗಲಾರದು.ಹಣ್ಣುಗಳಲ್ಲಿ ಮಾವಿಗೆ ವಿಶೇಷ ಸ್ಥಾನಮಾನ,ರಾಜಮರ್ಯಾದೆ.ಮಾವಿನ ಹಣ್ಣು, ಹಣ್ಣುಗಳ ರಾಜ. ಬೇಸಿಗೆ ಶುರುವಾದೊಡನೆ ಮಾವು ಶುರುವಾಗುತ್ತದೆ.ನಮ್ಮಲ್ಲಿ ಮೊದಲು ಗಿಣಿಮೂತಿ ಮಾವಿನಕಾಯಿ ಜೊತೆ ಈ ಸೀಸನ್ ಶುರುವಾಗುತ್ತದೆ.ಎರೆಡು ಮಳೆ ಆಗುವ ತನಕ ಮಾವು ತಿನ್ನುವುದಿಲ್ಲ.ಒಂದು ದೃಷ್ಟಿ , ಬಂದ ಈ ಗಿಣಿಮೂತಿ ಕಾಯಿಯ ಮೇಲೆ ಇಟ್ಟುಕೊಂಡು ನೋಡದ ಹಾಗೆ ಮಾರುಕಟ್ಟೆಯಲ್ಲಿ ಓಡಾಡುತ್ತೇವೆ.ಮಳೆ ಸ್ವಲ್ಪ ಲೇಟಾದರೆ ಚಡಪಡಿಕೆ ಶುರು.ನಾಲ್ಕೋ,ಐದೋ ಗಿಣಿ ಮಾವಿನಕಾಯಿ ಖರೀದಿಸಿ […]

ಪರಮೂ ಪ್ರಪಂಚ

ಪರಮೂ ಪ್ರಪಂಚಕಥಾಸಂಕಲನಲೇಖಕರು- ಇಂದ್ರಕುಮಾರ್ ಎಚ್.ಬಿಇಂಪನಾ ಪುಸ್ತಕ ವೃತ್ತಿಯಿಂದ ಶಿಕ್ಷಕರಾಗಿರುವ ಇಂದ್ರಕುಮಾರ್ ಅವರು ನಾಡಿನ ಪ್ರಮುಖ ಕಥೆಗಾರರಲ್ಲಿ ಒಬ್ಬರು. ಮೊನ್ನೆಯಷ್ಟೇ ಅವರ ಕಥೆಯೊಂದು ‘ ಸೂಜಿದಾರ ‘ ಎಂಬ ಹೆಸರಿನಲ್ಲಿ ಸಿನೆಮಾ ಆಗಿದೆ. ‘ಆ ಮುಖ’, ‘ನನ್ನ ನಿನ್ನ ನೆಂಟತನ’, ‘ಪರಮೂ ಪ್ರಪಂಚ’ ಮತ್ತು ‘ಕಾಣದ ಕಡಲು’ ಅವರ ಕಥಾಸಂಕಲನಗಳು.‘ಮೃದುಲಾ’,’ ಹುಲಿಕಾನು ‘ ಅವರ ಪ್ರಕಟಿತ ಕಾದಂಬರಿಗಳು. ಈ ಕಥಾಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ಗಿಫ್ಟ್ – ಇಪ್ಪತ್ತು ವರ್ಷಗಳ ನಂತರ ಸಂತೆಯಲ್ಲಿ ಸಿಕ್ಕ ಇಬ್ಬರು ಪ್ರೇಮಿಗಳ ಕಥಾನಕ. […]

Back To Top