ಮನೆಯೇ ಮಂತ್ರಾಲಯ?
ಜ್ಯೋತಿ ಡಿ .ಬೊಮ್ಮಾ
ಮತ್ತದೆ ಸಂಜೆ ಅದೇ ಬೇಸರದಲ್ಲಿ ಎಕಾಂಗಿಯಾಗಿ ಕುಳಿತಿದ್ದಾಗ ಬಾಜು ಮನಿ ಅಕ್ಕೋರು ಬಂದರು ,ಬರ್ರಿ ಬರ್ರಿ ಎಂದು ಸ್ವಾಗತಿಸಿ ಪಕ್ದಲ್ಲೆ ಇದ್ದ ಖುರ್ಚಿ ಕಡೆಗೆ ಕೈ ತೊರಿಸಿದೆ ಕುಳಿತುಕೊಳ್ಳಲು.ಕುರ್ಚಿ ಸರಕ್ಕನೆ ನನ್ನಿಂದ ನಾಲ್ಕು ಮಾರು ದೂರ ಎಳೆದುಕೊಂಡು ಕುಳಿತರು .ಮುಖಕ್ಕೆ ಮಾಸ್ಕ ಹಾಕಿಕೊಂಡೆ ಮಾತಾಡತೊಡಗಿದರು.
ನಿಮಗ ಗೊತ್ತದ ಇಲ್ಲ ,ಇಲ್ಲೆ ಬಾಜು ಕಾಲೊನಿದಾಗ ಯಾರಿಗೋ ಕರೊನಾ ಬಂದದಂತರ್ರಿ ,ಅವರ ಮನ್ಯಾಗಿನವರಿಗೆಲ್ಲ ಎಳಕೊಂಡು ಹೊಗ್ಯಾರಂತ ,ಮುಖಕ್ಕೆ ಹಾಕಿದ ಮಾಸ್ಕ ತೆಗೆದು ಅಲ್ಲೆ ಪಕ್ಕದಲ್ಲಿ ಉಗುಳಿ ಮತ್ತೆ ಮಾಸ್ಕ ಹಾಕಿಕೊಂಡರು.
ಅಲ್ರಿ ಅಕ್ಕೊರು ಮೊದಲ ನಾವು ಮತ್ತ ನಮ್ಮನಿ ಅಕ್ಕಪಕ್ಕ ಸ್ವಚ್ಚ ಇಟಗೊಬೇಕು ,ಹಾಗೆಲ್ಲ ಅಲ್ಲಿ ಇಲ್ಲಿ ಉಗಳಬಾರದ್ರಿ ಎಂದು ತಿಳಿಸಲು ಪ್ರಯತ್ನಿಸಿದೆ.
ಅದಕ್ಕವರು ಛಲೊ ಹೆಳತ್ರಿ..ಉಗಳ ಬಂದ್ರ ಬಾಯಾಗ ಇಟಗೊಂಡ ಕೂಡಬೇಕಾ.ಉಗಳೆನು ಹೇಳಿ ಕೇಳಿ ಬರತದೇನು ಎಂದು ಮತ್ತೊಮ್ಮೆ ತಪ್ಪಕ್ಕನೆ ಉಗುಳಿ ಮತ್ತ ಮಾಸ್ಕ ಹಾಕಿಕೊಂಡೆ ಮಾತಾಡತೊಡಗಿದರು.
ಅಲ್ರಿ ಈ ಸರ್ಕಾರದೊರು ಎಟೊಂದು ಕಂಪಿಸ್ ಮಾಡಲತಾರಿ ಒಮ್ಮಿ ಎಲ್ಲಾ ಚಾಲೂ ಮಾಡತಿವಿ ಅಂತಾರ ,ಒಮ್ಮಿಇನ್ನೂ ಸ್ವಲ್ಪ ದಿನ ಮುಂದೂಡತೀವಿ ಅಂತಾರ,ಸಾಲಿ ಸುರು ಮಾಡತೀವಿ ಅಂತಾರ ,ಒಮ್ಮೆ ಇನ್ನೂ ಎರಡು ತಿಂಗಳ ತೆರೆಲ್ಲ ಅಂತಾರ ,ಹೊರಗ ಬರಬ್ಯಾಡರ್ರಿ ಅಂತಾರ ಮತ್ತ ಕರೋನಾ ಜತಿಗೆ ಬದುಕೊದು ಕಲಿರಿ ಅಂತಾರ ನನಗರ ಟೊಟಲ್ ಕಂಪೂಸ್ ಆಗಲತದ ನೋಡ್ರಿ..ಯಾವದು ಕೇಳಬೇಕು ಯಾರದು ಕೇಳಬೇಕು ಒಂದು ತಿಳಿವಲ್ದು ಎಂದರು.
ಯಾಕ ಅಷ್ಟು ಟೆನ್ಷನ್ ಮಾಡಕೋತಿರಿ ಈಗ ಯಾರದ ಎನ ನಿಂತದ ,ಮಾಡಲತಿವಿ ಉಣ್ಣಲತಿವಿ ,ಆವಾಗೀಟು ಹೊರಗ ಓಡಾಡತಿದ್ವಿ ಈಗ ಅದೆಲ್ಲ ಕಟ್ ಆಗ್ಯಾದ, ಎನಿದ್ರೂ ನಮಗೇನು ಅಡುಗಿ ಮಾಡಾದೂ ತೊಳೆದು ತಪ್ಪತದೆನು ಅಂದೆ.
ಐ,,,ಮೂರು ತಿಂಗಳಾತು ಒಂದು ಸೀರಿ ತಗೊಂಡಿಲ್ಲ ,ಒಂದು ಬೌಲ್ವ್ಸಹೊಲಿಸಿಲ್ಲ ,ಬ್ಯೂಟಿ ಪಾರ್ಲರ ಮಾರಿ ನೊಡಲಾರದಕ್ಕ ನನ್ನ ಮಾರಿ ನೊಡಕೊಳ್ಳಲಾರದಂಗ ಆಗೇದ. ಈ ಕರೋನಾ ಎನಾರ ನನ್ನ ಕೈಯಾಗ ಸಿಕ್ಕರ ನಾ ಸುಮ್ಮನ ಬಿಡಾಕಿ ಅಲ್ಲ ನೋಡ್ರಿ , ಎಂದು ರಾಂಗಾದರು .
ಅಯ್ಯೊ ಅಕ್ಕೊರೆ ,ಸಿಟ್ಟಿಲೆ ಅದಕ್ಕ ಹಿಡಿಲಾಕ ಹೊಗಿರಿ ಮತ್ತ ,, ನಿಮಗ ಹಿಡದು ಕ್ವಾರಂಟೈನ್ ಮಾಡತಾರ ಮತ್ತ ಎಂದೆ.
ಮಾಡ್ಲಿ ಬಿಡ್ರಿ..ಅಲ್ಲೆನ್ ತಕಲಿಫ ಇಲ್ಲ.ಪೇಪರನಾಗ ನೋಡಿರಿಲ್ಲ..ಊಟ ಬಿಸಿಲೇರಿ ನೀರು ಮೊಟ್ಟೆ ಡ್ರೈಪ್ರೂಟ್ಸ ಎಲ್ಲ ಕೊಡತಾರಂತ ಟೈಮ ಟೈಮಿಗೆ , ಹೇಗೋ ಈ ಬ್ಯಾಸಗಿ ಮನ್ಯಾಗೆ ಕಳದೀವಿ ,ಒಂದು ಟೂರ್ ಇಲ್ಲ , ಪಿಕ್ ನಿಕ್ ಇಲ್ಲ ,ಸುಮ್ಮ ಅಲ್ಲೆರ ಹೋಗಿ ಇದ್ದರ ಒಂದಷ್ಟೂ ದಿನ ಔಟಿಂಗ ಆದಂಗ ಆಗತದ ,,ಈ ಅಡಗಿ ಮನಿ ಕಾಟ ತಪ್ಪತದ ,ಹೌದಿಲ್ಲ ಎಂದರು .
ಮಾತಾಡಿ ಗಂಟಲು ಕರ ಕರ ಎಂದಿಬೇಕು ,ಮಾಸ್ಕ ತೆಗೆದು ಮತ್ತೊಮ್ಮೆ ಉಗುಳಿ ಬಂದರು.
ಹಾಗಲ್ಲರಿ ಅಕ್ಕೊರೆ , ಕ್ವಾರಂಟೈನ್ ದಾಗ ನಮ್ಮ ಮನಿ ಮಂದಿಗೆಲ್ಲ ಒಂದೆ ಕಡೆ ಇಡತಾರೊ ಬೇರೆ ಬೇರೆ ಕಡಿ ಇಡತಾರಿ ಎಂದು ಕೇಳಿದೆ.
ಬ್ಯಾರೆನೆ ಇಡಲಿ ಬಿಡ್ರಿ ,ಯಾಕ ಇಷ್ಟು ದಿನ ಒಳಗೆ ಒಂದೆ ಕಡಿ ಉಳದು ಸಾಕಾಗಿಲ್ಲೆನು , ನನಗಂತೂ ಸಾಕಾಗೇದ ದೀನಾ ಅವೆ ಮಾರಿ ನೋಡಿ ಎಂದು ಬೇಜಾರಾದರು.
ಮತ್ತೆ ಅಕ್ಕೊರೆ ,,ಪೇಪರನಾಗ ನೋಡ್ದೆ , ಅಲ್ಲಿ ಕ್ವಾರಂಟೈನದಾಗ ಇರೋರು ದಂಗೆ ಏಳಕಹತ್ಯಾರಂತ ,ಓಡಿಹೊಗತಿದಾರಂತ ಎಂದೆ.
ಅಯ್..ಅವರೆಲ್ಲ ಗಂಡಮಕ್ಕಳೆರಿ,, ಅವರಿಗೆ ಗುಟಕ ಶರಿ ಸಿಗಲಾರದಕ್ಕ ಹಾಗ ಮಾಡಲತಿರಬೇಕು..ಹೆಣ್ಣು ಮಕ್ಕಳ ಯಾರಾರ ಮನಿಗ ಕಳಸ್ರಿ ಎಂದು ದಂಗೆ ಎದ್ದಿದು ಪೇಪರನಾಗ ಬಂದಂದ ಎನು ಎಂದರು.
ಕ್ವಾರಂಟೈನ್ ಎಂದರೆ ಭಯಂಕರ ಭಯ ಪಟ್ಟುಕೊಂಡಿದ್ದ ನನಗೆ ಬಾಜು ಮನಿ ಅಕ್ಕೊರ ಮಾತು ಕೇಳಿ ಸ್ವಲ್ಪ ನಿರಾಳವಾಯಿತು.
ಬರತಿನ್ರಿ ,ಜ್ವಾಳದ ಹಿಟ್ಟು ಮುಗದಾದ ,ಬೀಸಕೊಂಡು ಬರಬೇಕು , ಬಾಜು ಓಣ್ಯಾಗ ಕರೋನಾ ಬಂದೋರು ಯಾರ್ಯಾರು ಈ ರಸ್ತೆದಾಗ ಓಡ್ಯಾಡೋರೊ ಎನೊ ಎಂದು ರಸ್ತೆ ಮೇಲೆ ಮತ್ತೊಮ್ಮೆ ಉಗಿದು ಹೊದರು.
ಅವರು ಹೋದ ಮೇಲೂ ಕ್ವಾರಂಟೈನ್ ಗಂಗುನಲ್ಲೆ ಇದ್ದ ನಾನು ಪತಿ ಮನೆಗೆ ಬಂದ ಮೇಲೆ ಕೇಳಿದೆ. ಅಲ್ಲಿ ಕ್ವಾರಂಟೈನದಾಗ ಇರೋರು ಭಾಳ ಆರಾಮ ಇರತಾರಂತರಿ..
ಕೆಲಸ ಇಲ್ಲ ಬೊಗಸಿ ಇಲ್ಲ..ಎಂದೆ.
ಹೌದಾ ,ಬೆಕಾರೆ ನಿಂಗೂ ಬಿಟ್ಟು ಬರತೆನಿ ನಡಿ.ಹೇಂಗೂ ಸರ್ಕಾರದ ಜೀಪು ರೆಡಿನೆ ಅದಾವ , ಎಂದಾಗ ದಿಗಿಲು ಬಿದ್ದು ತೆಪ್ಪಗಾದೆ , ಮನೆಯೆ ಮಂತ್ರಾಲಯ ಎಂದುಕೊಳ್ಳುತ್ತ.
********
ಬಾಜೂ ಮನಿ ಅಕ್ಕೋರ ದರ್ಬಾರ್ ಚೆನ್ನಾಗಿದೆ….