ಪರಮೂ ಪ್ರಪಂಚ

ಪರಮೂ ಪ್ರಪಂಚ
ಕಥಾಸಂಕಲನ
ಲೇಖಕರು- ಇಂದ್ರಕುಮಾರ್ ಎಚ್.ಬಿ
ಇಂಪನಾ ಪುಸ್ತಕ

ವೃತ್ತಿಯಿಂದ ಶಿಕ್ಷಕರಾಗಿರುವ ಇಂದ್ರಕುಮಾರ್ ಅವರು ನಾಡಿನ ಪ್ರಮುಖ ಕಥೆಗಾರರಲ್ಲಿ ಒಬ್ಬರು. ಮೊನ್ನೆಯಷ್ಟೇ ಅವರ ಕಥೆಯೊಂದು ‘ ಸೂಜಿದಾರ ‘ ಎಂಬ ಹೆಸರಿನಲ್ಲಿ ಸಿನೆಮಾ ಆಗಿದೆ.

‘ಆ ಮುಖ’, ‘ನನ್ನ ನಿನ್ನ ನೆಂಟತನ’, ‘ಪರಮೂ ಪ್ರಪಂಚ’ ಮತ್ತು ‘ಕಾಣದ ಕಡಲು’ ಅವರ ಕಥಾಸಂಕಲನಗಳು.
‘ಮೃದುಲಾ’,’ ಹುಲಿಕಾನು ‘ ಅವರ ಪ್ರಕಟಿತ ಕಾದಂಬರಿಗಳು.

ಈ ಕಥಾಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ.

ಗಿಫ್ಟ್ – ಇಪ್ಪತ್ತು ವರ್ಷಗಳ ನಂತರ ಸಂತೆಯಲ್ಲಿ ಸಿಕ್ಕ ಇಬ್ಬರು ಪ್ರೇಮಿಗಳ ಕಥಾನಕ. ಇಲ್ಲಿ ಅವರು ನಮ್ಮನ್ನೂ ಸಂತೆಯಲ್ಲಿ , ತುದಿಗಾಲಲ್ಲಿ ನಿಲ್ಲಿಸಿ ಅವರು ತೀವ್ರ ಭಾವದಿಂದ ಕಥೆ ಹೇಳುತ್ತಾರೆ.

ಅವಳ ಸಂಗ- ಇದು ಕಾಟಲಿಂಗೇಶಪ್ಪ ಎಂಬ ವ್ಯಕ್ತಿ, ಅವಳು ಮತ್ತು ಅಲ್ಲಾಭಕ್ಷಿ ಎಂಬ ಟೇಲರರ ಕಥೆ. ಬಹಳ ವಿಭಿನ್ನವಾದ ಕಥಾನಕವಿದು. ಇದರ ಅಂತ್ಯವನ್ನು ಊಹಿಸುವುದು ಕಷ್ಟ.

ಇಷ್ಟ ಗಂಧ- ತಡೆಯಲಾರದಷ್ಟು ದುರ್ಗಂಧ ಹೊತ್ತ ಹಾಲೇಶಪ್ಪನ ಕಥೆಯಿದು. ಸದಾ ನೆಗಡಿಯಿಂದ ಮೂಗು ಕಟ್ಟಿಕೊಂಡಿರುವ ಅಮೀರ್ ಜಾನ್ ನ ಸೈಕಲ್ ಶಾಪ್ ಮುಂದೆ ಇವನಿಗೆ ಆಶ್ರಯ ತಾಣವಾಗುತ್ತದೆ. ಇಂತಹ ಹೊತ್ತಿನಲ್ಲಿಯೇ ಅವನ ಬದುಕಿಗೆ ಆಗಮಿಸುವ ಹೆಣ್ಣಿನಿಂದ ಕಥೆ ಅನೂಹ್ಯ ತಿರುವು ಪಡೆಯುತ್ತದೆ.

ಹೊರೆ – ರಘುವೀರ ಮತ್ತು ಲಲಿತಾಕ್ಷಿಯ ಪುಟ್ಟ ಕುಟುಂಬಕ್ಕೆ ಆಗಮಿಸುವ ದಿನಕರಜ್ಜ ; ಅವರ ಪುಟ್ಟ ಮಗು ಚಿಂಟೂ ಹಾಗೂ ಕೊನೆಗೆ ಇಡೀ ಮನೆಯನ್ನು ಆವರಿಸಿಕೊಳ್ಳುವ ಪರಿ ಅನನ್ಯ.

ಪರಮೂ ಪ್ರಪಂಚ- ಪರಮು ಮತ್ತು ಮೃಣಾಲ ಗೆಳೆಯರು. ಆ ವಿಶ್ವಾಸದಿಂದಲೇ ಮೃಣಾಲನ ಮನೆಯನ್ನು ತನ್ನ ಮನೆ ಎಂದೇ ಭಾವಿಸಿ ಜೀವಿಸುವ ಮನುಷ್ಯ ಪರಮು.
ಆದರೆ ಒಂದು ಪ್ರಸಂಗದಲ್ಲಿ ಮೃಣಾಲನ ತಾಯಿ ಇವನನ್ನು
‘ ಪಾಪ ಅನಾಥ ಹುಡುಗ, ಮೃಣಾಲನ ಫ್ರೆಂಡ್ ‘ ಎಂದು ಪರಿಚಯಿಸಿ ಮತ್ತೆ ಅವನ ಅನಾಥ ಪ್ರಜ್ಞೆ ಕೆಣಕಿ ನಮ್ಮನ್ನೂ ಕಾಡುವ ಕಥೆಯಿದು.

ವಿಸರ್ಜನೆ – ಹೆಣ್ಣೊಬ್ಬಳು ಗಂಡನನ್ನು ಶೋಷಿಸುವ ವಿಭಿನ್ನ ಕಥೆ. ಹೊಟ್ಟೆಯ ಮತ್ತು ಕಾಮದ ಹಸಿವನ್ನು ನಿಯಂತ್ರಿಸಲಾಗದ ಶಿವರಾಜನ ಕಥೆ.

ಗ್ರಹಣ ಒಂದು ಥ್ರಿಲ್ಲರ್ ಕಥೆ. ಉತ್ತರದ ಹುಡುಕಾಟದಲ್ಲಿ – ಒಂದು ಸಣ್ಣ ಅವಘಡ ಮಾಡುವ ದೊಡ್ಡ ಹಾನಿಯ ಕಥೆ.
ಅಣ್ಣನ ನೆನಪಲ್ಲಿ ಒಂದು ಒಳ್ಳೆಯ, ಸರಳ ಕಥೆ.
ಬೇಬಿ ಸಿಟ್ಟಿಂಗ್ – ಒಂದು ಸಮಕಾಲೀನ ಆದರೆ ವಿಶಿಷ್ಟ ನಿರೂಪಣೆಯ ಚೆಂದದ ಕಥೆ.
ಒಮ್ಮೆ ಓದಲೇಬೇಕಾದ ವಿಭಿನ್ನ ಕೃತಿ ‘ ಪರಮೂ ಪ್ರಪಂಚ

********

  • ಡಾ.ಅಜಿತ ಹರೀಶಿ

Leave a Reply

Back To Top