ಸಂಕೋಲೆ
ಸಾಯಬಣ್ಣ ಮಾದರ
ಬಿಟ್ಟು ಬಿಡಿ
ಬಿಟ್ಟು ಬಿಡಿ
ಕೈ ಕಟ್ಟಿ ನೆಲಕ್ಕೆ ಹಾಕಿ
ಮಂಡಿಯೂರಿ ಕುಳಿತಿರುವರೆ
ಉಸಿರಾಡಲುಗುತ್ತಿಲ್ಲ ಬಿಟ್ಟು ಬಿಡಿ
ನಿಲುತ್ತಿದೆ ವರ್ಣಕ್ಕಾಗಿ ಉಸಿರು ಅಲ್ಲಿ
ಜಾತಿ ಧರ್ಮಕ್ಕಾಗಿ ನಿಲ್ಲುತ್ತಿದೆ ಇಲ್ಲಿ
ಮನುಷ್ಯರು ನಾವು
ನೀವು ಕ್ರೂರಿ ಮೃಗಗಳೆ?
ಚರ್ಮದೊಳಗೆ ರಕ್ತ ಉಂಟು
ಅದರಲ್ಲಿ ವರ್ಣ ಜಾತಿ ಉಂಟೆ?
ಬೇರೆ ಬೀಜಕ್ಕೆ ಹುಟ್ಟಿದ ಮರ ನೀವು
ತಯಾರಾಗಿದೆ ಕಾಲವೇ ಕಡಿಯಲು
ಮಸಣದಲ್ಲಿ ಮಾನವೀಯತೆ ಹೂತ್ತು
ಮನುಷ್ಯತ್ವವೆ ಮೂಲೆಗೊತ್ತಿ
ಜಾತಿ ಎಂಬ ಶಿಖರ ಏರಿ
ವರ್ಣದ ಗಿರಿ ಮುಟ್ಟಿ
ಅರ್ಚುವ ಮೂರ್ಖರೇ
ಯಾವ ಜೀವಿ ನೀವು
ನೀರಿಗಾಗಿ ಕೆರೆ ಮುಟ್ಟಿದ ಹೆಣ್ಣನ್ನು
ಕಟ್ಟಿ ಬಡಿದು ಕೇಕೆ ಹಾಕಿದವರು ನೀವು
ನೀರು ಬೆಳಕು ಗಾಳಿ ಕೇಳಿದೀಯಾ ಜಾತಿ
ಬಣಕ್ಕೆ ಬೇದ ಮೊದಲೇ ಇಲ್ಲ
ಧರ್ಮದ ಹೆಂಡ ಕುಡಿದು
ಜಾತಿ ಮತ್ತೆರಿಸಿಕೊಂಡು
ಎಷ್ಟು ದಿನ ಕುಣಿಯುವಿರಿ
ದೇವರೇ ಹೆಣವಾಗಿ ಹೆಗಲೇರಿರುವಾಗ
ಎಷ್ಟು ದಿನ ಅಡಗಿವಿರಿ ಬಂಕರಿನಲ್ಲಿ
ಎಷ್ಟಂತ ಆಡುವಿರಿ ನಲಿ-ಕಲಿ ಆಟ
ಸನಿಹದಲ್ಲಿದೆ ಅಂತ್ಯ
ಮನುಷ್ಯರಾಗಲು ಮರೆಯದಿರಿ
ಇಲ್ಲವೆ ಭೂಮಿಯಿಂದ ನಿರ್ಗಮೀಸಲು ಸಿದ್ದರಾಗಿ !!
ಸಾಯಬಣ್ಣ ಮಾದರ
ಸೂಪರ್ ರೀ ಮೇಷ್ಟ್ರೇ
Supper kavana
Super sir
Super sir…..