Month: May 2020

ಕಥಾಯಾನ

ಒಂದು ವಿಶೇಷ ದಿನ ಮಲಯಾಳಂ ಮೂಲ: ಪೂನತಿಲ್ ಕುಞಬ್ದುಳ್ಳ ಕನ್ನಡಕ್ಕೆ ಚೇತನಾ ಕುಂಬ್ಳೆ ಹಲವು ವರ್ಷಗಳ ನಂತರ, ಅವನು ಚಂದ್ರಿಕಳ ಮನೆಗೆ ಬಂದ. ಕೇವಲ ಚಂದ್ರ ಎಂಬ ಹೆಸರು ಅವನಿಗಿದ್ದದ್ದರಿಂದ ಮಾತ್ರ ಚಂದ್ರಿಕ ಆತನನ್ನು ಧ್ಯಾನಿಸಿದ್ದಲ್ಲ.         ಅವನು ಸಿ.ಸಿ ಚಂದ್ರ. ಚಂದ್ರನ್ ಆಂಡ್ ಬ್ರದರ್ಸ್ ನ ಮ್ಯಾನೇಜಿಂಗ್ ಪಾರ್ಟ್ನರ್ ಆಗಿದ್ದ. ಅವರಿಗೆ ನೂರಾರು ಟ್ರಕ್ಕುಗಳೂ, ಹತ್ತಿ ಬಟ್ಟೆ ನೇಯುವ ಮೂರು ದೊಡ್ಡ ಮಿಲ್ಲುಗಳು ತಮಿಳುನಾಡಿನಲ್ಲಿವೆ. ವಿವಿಧ ವ್ಯಾಪಾರ ಸಂಘಟನೆಗಳ ನಾಯಕರನ್ನು ವಶೀಕರಿಸುವ ಮಾದಕ ವಸ್ತುಗಳಿವೆ. ಒಂದು […]

ಕಾವ್ಯಯಾನ

ಗಝಲ್ ಅಮೃತ ಎಂ ಡಿ ಕಣ್ಮುಚ್ಚಿ ನೋವುಗಳನ್ನೇ ಸಹಿಸಿಕೊಳ್ಳುವೆ ಗೆಳೆಯ ನಿನ್ನ ಹೆಸರಲ್ಲಿ ನನ್ನಯ ಉಸಿರುಂಟು ಗೆಳೆಯ ಆಗಾಗ ಉಸಿರಾಡೋ ಗಾಳಿಯಲ್ಲಿ ನಿನ್ನಯ ಹೆಸರನ್ನೇ ಹುಡುಕುವ ಹುಚ್ಚಾಟದ ಅತಿರೇಕವುಂಟು ಗೆಳೆಯ ಶ್ರೀಗಂಧದ ಘಮಲು ಕೂಡ ಪೈಪೋಟಿ ನೀಡುತ್ತಿರುವಾಗ ಚಂದದ ಮೋರೆಗೆ ಎಲ್ಲಿಲ್ಲದ ಅಂದವುಂಟು ಗೆಳೆಯ ನಿನ್ನೊಲವ ನೆರಳಲ್ಲಿ ಮುಳ್ಳು ಹಾದಿಯು ಕೂಡ ಹೂವಿನ ಹಾಸಿಗೆ ಆಗುವುದೆಂಬ ಆಸೆವುಂಟು ಗೆಳೆಯ “ಅಮ್ಮು”ವಿನ ಸಂತೋಷದ ಪರಿಛಾಯೆಯು ನಿನ್ನ ಸಂಪ್ರೀತಿಯ ಸಾಂಗತ್ಯದಲ್ಲೇ ಉಂಟು ಗೆಳೆಯ ************

ಕಾವ್ಯಯಾನ

ಬೊಗಸೆಯೊಳಗಿನ ಬಿಂದು ಎನ್. ಶೈಲಜಾ ಹಾಸನ ಬಿಟ್ಟು ಬಿಡು ಗೆಳೆಯನನ್ನಷ್ಟಕ್ಕೆ ನನ್ನರೆಕ್ಕೆ ಹರಿದ ಹಕ್ಕಿಹಾರಿಹೋಗುವುದೆಲ್ಲಿಇಷ್ಟಿಷ್ಟೆ ಕುಪ್ಪಳಿಸಿಅಲ್ಲಲ್ಲೆ ಅಡ್ಡಾಡಿನಿನ್ನ ಕಣ್ಗಾವಲಲ್ಲಿಯೇಸುತ್ತಿ ಸುಳಿದುಒಂದಿಷ್ಟೆ ಸ್ವಚ್ಛಗಾಳಿಸೋಕಿದಾ ಕ್ಷಣಧನ್ಯತೆಯ ಪುಳಕತಣ್ಣನೆಯ ನಡುಕಎದೆಯ ತಿದಿಯೊಳಗೆನೀನೇ ಒತ್ತಿದ ಕಾವುಭಾವನೆಗಳ ಬೇಯಿಸಿಮನವೀಗ ಚಿತೆಯೊಳಗೆಬೆಂದ ಕುಂಭಬಿಟ್ಟರೂ ಬಿಡಲಾರೆಎನುವ ಮಾಯೆಅಟ್ಟಾಡಿಸುತ್ತಿದೆಗೆಲುವಿನ ಹಾದಿಯನೀನೇ ಹಾರ ಬಿಟ್ಟರೂರೆಕ್ಕೆ ಇಲ್ಲದ ನಾನುಮತ್ತೇ ನಿನ್ನ ಉಡಿಗೆಬೊಗಸೆಯೊಳಗಿನ ಬಿಂದುಮುಷ್ಠಿಯೊಳಗೆ ಆವಿಎತ್ತತ್ತ ಸರಿದರೂಮತ್ತೆ ಅಲ್ಲಿಗೇಪಯಣದ ಹಾದಿದೂರ ದೂರಕೆ ********

ಪುಸ್ತಕ ಸಂಗಾತಿ

ಕೃತಿ ಪರಿಚಯ ತಲ್ಲಣಗಳ ಪಲ್ಲವಿ ಪುಸ್ತಕ: ತಲ್ಲಣಗಳ ಪಲ್ಲವಿ (ಕಥಾ ಸಂಕಲನ) ಲೇಖಕರು: ಅನುಪಮಾ ರಾಘವೇಂದ್ರ ಉಡುಪುಮೂಲೆ ಪುಸ್ತಕ: ತಲ್ಲಣಗಳ ಪಲ್ಲವಿ (ಕಥಾ ಸಂಕಲನ) ಲೇಖಕರು: ಅನುಪಮಾ ರಾಘವೇಂದ್ರ ಉಡುಪುಮೂಲೆ ನೃತ್ಯ ಶಿಕ್ಷಕಿಯಾಗಿರುವ ಅನುಪಮಾ ರಾಘವೇಂದ್ರ ಉಡುಪುಮೂಲೆ ಅವರು ಕಾಸರಗೋಡಿನ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡವರು. ನಾಟ್ಯ ವಿದುಷಿಯೂ, ಎಡನೀರಿನ ಭೂಮಿಕಾ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷೆಯೂ ಆಗಿರುವ ಇವರು ಬಹುಮುಖ ಪ್ರತಿಭೆಯವರು. ಇತ್ತೀಚೆಗೆ ಯಕ್ಷಗಾನ ಕ್ಷೇತ್ರಕ್ಕೂ ಪ್ರವೇಶಿಸಿದ ಅನುಪಮಾ ಅವರು ಈಗಾಗಲೇ ‘ಕಲಾತರಂಗ ಕಲಾಂತರಂಗ’ ಎಂಬ ಲೇಖನ ಸಂಕಲನವನ್ನೂ, ‘ಹತ್ತಗುಳು’ […]

ಕವಿತೆ ಕಾರ್ನರ್

ಆಡಿದ ಮಾತುಗಳೆಲ್ಲ ವಚನಗಳೇನಲ್ಲ.. ಸ್ವರ್ಗದ ಕುರುಹಿಲ್ಲವಿಲ್ಲಿ! ಆಡಿದ ಮಾತುಗಳೆಲ್ಲ ವಚನಗಳೇನಲ್ಲ ತಿರುಕನಿಗೊ ಆಯ್ಕೆಯ ಅವಕಾಶವಿರುವುದಿಲ್ಲ ರಕ್ತ ಒಸರುವ ಗತದ ಗಾಯ ಮುಲಾಮುಗಳಿಗೆಲ್ಲ ಮಾಯುವುದಿಲ್ಲ ಬಾಂಡಲಿಯ ಕುದಿಯುವ ಎಣ್ಣೆಯೊಳಗೆ ಬೇಯಿಸುವ ನರಕದ ಭಯ ಯಾರಿಗಿದೆ ಇಲ್ಲೀಗ? ಸ್ವರ್ಗದ ಕುರುಹು ತೋರಿದರೆ ಮಾತ್ರ ನಂಬುವವರುಂಟಿಲ್ಲಿ ನರಕವ ದೇಹವೇ ದೇಗುಲವೆಂಬುದು ನೆನಪಾದೊಡನೆ ದೂರವಾಗಿ ಮೈಥುನದಾಸೆ ಮುಷ್ಠಿಮೈಥುನದ ಹೊರದಾರಿ ಕಂಡುಕೊಂಡ ತರುಣರ ಗುಂಪುಗಳಿಂದ ದೂರನಿಂತ ತರುಣಿಯರ ತೊಡೆಗಳಿಂದೊಸರುವ ರಕ್ತದಲಿ ಅದೆಷ್ಟು ಜೀವಮೂಲಗಳು ವ್ಯರ್ಥವಾದವೆಂಬುದನ್ನು ಲೆಕ್ಕವಿಡುವ ವಿಜ್ಞಾನದ ಪುಸ್ತಕಗಳ ಮಸ್ತಕಕ್ಕಿಳಿಸದೆ ಸುಮ್ಮನೆ ನಡೆದು ಬಿಡು […]

ಪ್ರಸ್ತುತ

ಮರುವಲಸೆಯ ಮಹಾಪರ್ವಕ್ಕೆ ಪರಿಹಾರ ಯಾರೂ ಊಹಿಸಿರದ ಪ್ರಮಾಣದಲ್ಲಿ ಕಾರ್ಮಿಕರ ಮರುವಲಸೆ ಪ್ರಾರಂಭವಾಗಿದೆ. ತಮ್ಮ ಊರಿನಲ್ಲಿ ದುಡಿಮೆಯ ಅವಕಾಶವಿಲ್ಲದೆ ನಗರಗಳಿಗೆ ಉದ್ಯೋಗ ಹುಡುಕಿಕೊಂಡು ವಲಸೆ ಬಂದವರು ಕೊರೊನಾ ಲಾಕ್ಡೌನ್ನಿಂದಾಗಿ ಕಂಗಾಲಾಗಿದ್ದಾರೆ. ಪೂರ್ವಾಪರ ಯೋಚಿಸದೆ, ಶತ್ರು ದೇಶದ ಮೇಲೆ ದಾಳಿ ಮಾಡುವ ರೀತಿಯಲ್ಲಿ ದಿಢೀರ್ ಎಂದು ಘೋಷಣೆಯಾದ ಲಾಕ್-ಡೌನ್ ಹಿನ್ನೆಲೆಯಲ್ಲಿ ಕಾರ್ಮಿಕರು ತಮ್ಮ ಊರುಗಳಿಗೆ ನೂರಾರು ಕಿಲೋ ಮೀಟರ್ ನಡೆದುಕೊಂಡೇ ಹೊರಟರು. ಕೊರೊನಾ ಭಯಕ್ಕಿಂತ ಹಸಿವಿನ ಭಯ ಅವರನ್ನು ಕಾಡುತ್ತಿತ್ತು. ಪೋಲೀಸರ ಲಾಠಿಗೆ ಹೆದರಿ, ನಗರ ತೊರೆಯಲಾರದವರು ಈಗ ಅವಕಾಶ […]

ಕಾವ್ಯಯಾನ

ಅರಿಯದ ಹಾಡು ಡಾ.ವೈ.ಎಂ.ಯಾಕೊಳ್ಳಿ ಗಜದಾಲಯದಲಿ ಮೂಡಿದ ಸುಂದರ ರಾಗ. ತೇಲಿ ಬಂದಿತು ಅಂತಪುರದ ಹಂಸತೂಲಿಕದೊಳಗೆ ಬಗೆಯಿತು ರಾಣಿಯ ಎದೆಯನು ಯಾರಿಗೂ ತಿಳಿಯದ ಹಾಗೆ ತಡೆಯಲೇ ಇಲ್ಲ ಕಾವಲುಭಟರ ಸಾವಿರ ಕಾಲಾಳುಗಳ ಪಡೆ ಕೊಟ್ಟಳು ಮನವನು ಎಂದೂ ನೋಡದ ದನಿಗೆ ಮನವನು ಬಗೆದ ರಾಗವ ಬೆನ್ನತ್ತಿ ಹೊರಟೇ ಬಿಟ್ಟಿತು ನಿಲ್ಲದೆ ಎರಡು ಗಳಿಗೆ ಲೋಕದ ವಿಕಾರ ಧರಿಸಿತ್ತು ಮಾನವನ ಆಕಾರ, ಎಲ್ಲಿದೆ ವಿವೇಚನೆ ಒಲಿದ ಎದೆಗೆ ತಡಮಾಡದೇ ಕೊಟ್ಟಿತು ದಾನ ಹೃದಯವ ಮಾವುತನ ಎದೆಯೊಸಗೆಗೆ ಆಹಾ !ಲೋಕದ‌ ಕಣ್ಣಿಗೆ […]

ಅನುವಾದ ಸಂಗಾತಿ

ಬದುಕು ಹೇಳಿಕೊಟ್ಟದ್ದು… ಮೂಲ ಮಲಯಾಲಂ:ಉಸ್ಮಾನ್ ಪಾಡರಡುಕ್ಕ ಕನ್ನಡಕ್ಕೆ: ಚೇತನಾ ಕುಂಬ್ಳೆ ತತ್ವಶಾಸ್ತ್ರದಿಂದ ಒಂದು ಗೋಪುರವನ್ನೇ ನಿರ್ಮಿಸಬಹುದಾದರೂ ಅದಕ್ಕೆ ಜೀವ ತುಂಬಲು ಸಾಧ್ಯವೇ ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ ಸತ್ಕಾರ್ಯಗಳಿಂದ ಒಂದು ಹೂದೋಟವನ್ನೇ ಮಾಡಿ ಬೆಳೆಸಬಹುದಾದರೂ ದುಷ್ಕೃತ್ಯಗಳು ತಾನೇ ಇಲ್ಲದಾಗುತ್ತದೆಯೇ ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ ಎಲ್ಲರಿಗೂ ಪ್ರೀತಿ ಪಾತ್ರನಾಗಿ ಹೃದಯದಲ್ಲಿ ಸ್ಥಾನ ಪಡೆದರೂ ಎಲ್ಲರಿಗಿಂತಲೂ ಹೆಚ್ಚು ಪ್ರೀತಿಪಾತ್ರನೋಗಲು ಸಾಧ್ಯವೇ ಮಣ್ಣಿನಲ್ಲಿ ಬಾಳುವ ಈ ಮಾನವನಿಗೆ ತ್ಯಾಗಿಯಾಗಿ ಕರ್ಮಯೋಗಿಯಾಗಿ ತನ್ನ ಸಂಘಟನೆಗಾಗಿ ರಕ್ತಸಾಕ್ಷಿಯಾಗಬಹುದಾದರೂ ಚೈತನ್ಯವನ್ನು ಜಡವಾಗಿಸಬಹುದೇ ಮಣ್ಣಿನಲ್ಲಿ ಬಾಳುವ […]

ಟಂಕಾ

ಟಂಕಾ ತೇಜಾವತಿ.ಹೆಚ್.ಡಿ.   ಟಂಕಾ ಇದು ಪರ್ಷಿಯನ್ ಸಾಹಿತ್ಯ ಪ್ರಕಾರ. ಇದನ್ನು ಕನ್ನಡಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರಚಾರಕ್ಕೆ ತಂದು ಹಲವಾರು ಕವಿಗಳು ಇದರಲ್ಲಿ ಕೃಷಿ ಕೈಗೊಂಡ ಈ ಪ್ರಕಾರಕ್ಕೆ ಮಾನ್ಯತೆ ಕೊಟ್ಟು ಬರೆಯುತ್ತಿದ್ದಾರೆ. ಇದು ಹೈದರಾಬಾದ್ ಕರ್ನಾಟಕದಲ್ಲೂ ಈ ಪ್ರಕಾರ ಚಾಲ್ತಿಯಲ್ಲಿದೆ. ನಿಯಮಗಳು:- ಇದು ಐದು ಸಾಲುಗಳ ಒಂದು ಸಾಹಿತ್ಯದ ಪ್ರಕಾರ. 1 ಮತ್ತು 3 ನೇ ಸಾಲುಗಳು ಐದೈದು ಅಕ್ಷರಗಳನ್ನು ಹೊಂದಿರಬೇಕು. 2,4,5  ನೇ ಸಾಲುಗಳಲ್ಲಿ ಏಳೇಳು ಅಕ್ಷರಗಳನ್ನು ಹೊಂದಿರಬೇಕು. ಇದು ಒಟ್ಟು 31 ಅಕ್ಷರ […]

ಅನಿಸಿಕೆ

ಬರೆಯುವ ಕಷ್ಟ ಮತ್ತು ಬರೆಯದೇ ಇರುವ ಕಷ್ಟ ರಾಮಸ್ವಾಮಿ ಡಿ.ಎಸ್. ಬರೆಯುವ ಕಷ್ಟ ಮತ್ತು ಬರೆಯದೇ ಇರುವ ಕಷ್ಟ . . . . ‘ನಾನೇಕೆ ಬರೆಯುತ್ತೇನೆ?’ ಎನ್ನುವ ಪ್ರಶ್ನೆಗೆ ಉತ್ತರ ಕೊಡುವುದು ಎಣಿಸಿದಷ್ಟು ಸುಲಭವಲ್ಲವಲ್ಲವೆಂಬುದು ಎಲ್ಲ ಬರಹಗಾರರಿಗೂ ಅರಿವಾಗುವುದೇ ಅವರು ಇಂಥ ಪ್ರಶ್ನೆಗೆ ಉತ್ತರ ಕೊಡಲು ಕೂತಾಗ ಮಾತ್ರ! ಹೇಗೆ ಬರೆದರೆ ತನ್ನ ಬರಹಗಳಿಗೂ ಪತ್ರಿಕೆಗಳಲ್ಲಿ ಒಂದಿಷ್ಟು ಜಾಗ ಸಿಕ್ಕಬಹುದೆನ್ನುವ ಯೋಚನೆಯಲ್ಲೇ ಬರೆಯುತ್ತಿದ್ದ ದಿನಗಳು ಹೋಗಿ ಅನ್ನಿಸಿದ್ದೆಲ್ಲವನ್ನೂ ಫೇಸ್ಬುಕ್ಕಲ್ಲೋ ವಾಟ್ಸಪ್ಪಿನ ಗುಂಪಲ್ಲೋ ಬರೆದು ಬಿಸಾಕುತ್ತಿರುವ ಈ […]

Back To Top