ಟಂಕಾ

ಟಂಕಾ

ತೇಜಾವತಿ.ಹೆಚ್.ಡಿ.

 

ಟಂಕಾ ಇದು ಪರ್ಷಿಯನ್ ಸಾಹಿತ್ಯ ಪ್ರಕಾರ. ಇದನ್ನು ಕನ್ನಡಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರಚಾರಕ್ಕೆ ತಂದು ಹಲವಾರು ಕವಿಗಳು ಇದರಲ್ಲಿ ಕೃಷಿ ಕೈಗೊಂಡ ಈ ಪ್ರಕಾರಕ್ಕೆ ಮಾನ್ಯತೆ ಕೊಟ್ಟು ಬರೆಯುತ್ತಿದ್ದಾರೆ. ಇದು ಹೈದರಾಬಾದ್ ಕರ್ನಾಟಕದಲ್ಲೂ ಈ ಪ್ರಕಾರ ಚಾಲ್ತಿಯಲ್ಲಿದೆ.

ನಿಯಮಗಳು:-

ಇದು ಐದು ಸಾಲುಗಳ ಒಂದು ಸಾಹಿತ್ಯದ ಪ್ರಕಾರ.

1 ಮತ್ತು 3 ನೇ ಸಾಲುಗಳು ಐದೈದು ಅಕ್ಷರಗಳನ್ನು ಹೊಂದಿರಬೇಕು.

2,4,5  ನೇ ಸಾಲುಗಳಲ್ಲಿ ಏಳೇಳು ಅಕ್ಷರಗಳನ್ನು ಹೊಂದಿರಬೇಕು.

ಇದು ಒಟ್ಟು 31 ಅಕ್ಷರ ಜೋಡಣೆಯ ಛಂದಸ್ಸಿನ ಗುಚ್ಛ

ಇಲ್ಲಿ ಅಕ್ಷರಗಳ ಲೆಕ್ಕ ಗಣನೆಗೆ ಬರುತ್ತದೆ

ಟಂಕಾ-01

ನಿನ್ನ ಹೃದಯ
ನನ್ನರಮನೆಯಾಗಿ
ಅಧಿಪತ್ಯವ
ಕೈಸೆರೆ ಹಿಡಿದಿದೆ
ಕೈಜಾರಿ ಬೀಳದಂತೆ!!

ಟಂಕಾ-02

ಹಸಿರಾಗಿದೆ
ತ್ರಾಣ ಹೃದಯದಲ್ಲಿ
ನಿನ್ನೊಲುಮೆಯ
ಧಾರೆಯಲ್ಲಿ ಮಿಂದಿದೆ
ಹಸಿರಿನ ಉಸಿರು !

ಟಂಕಾ-03
ಟಂಕಾ ಕಲಿಕೆ
ಹೊಸತನದ ಅಲೆ
ಕವಿಯ ಭಾವ
ಬರಹಗಳೆಲ್ಲವೂ
ನಿನ್ನ ಅಲಂಕಾರವೇ!!

ಟಂಕಾ -04
ವರ್ಷಸಿಂಚನ
ಧರೆಯಾಗಸ ಮಿಂದು
ಹೃದಯ ರಾಗ
ಒಲವ ಕಾತುರತೆ
ಹನಿಗಳಲ್ಲಿ ಲೀನ !!

Leave a Reply

Back To Top